ಪುತ್ತೂರು: ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ 9ನೇ ತರಗತಿ ವಿದ್ಯಾರ್ಥಿ ಧನ್ವಿತ್ ರೈ ಪನಡ್ಕ ಮಂಗಳೂರಿನಲ್ಲಿ ನಡೆದ ನ್ಯಾಷನಲ್ ಕರಾಟೆ ಸ್ಪರ್ಧೆಯಲ್ಲಿ ಚಾಂಪಿಯನ್ ಆಗುವುದರೊಂದಿಗೆ ಪ್ರಥಮ ಸ್ಥಾನ ತನ್ನದಾಗಿಸಿಕೊಂಡಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯಿನಿ ಜಯಮಾಲ.ವಿ.ಎನ್. ತಿಳಿಸಿರುತ್ತಾರೆ. ಇವರು ಕೈಕಾರ ನಿಮಿತ ನವೀನ್ ರೈ ಪನಡ್ಕ ಇವರ ಪುತ್ರರಾಗಿದ್ದಾರೆ.
