ಆಲಂಕಾರು: ಆಲಂಕಾರು ವಲಯ ಬಿಲ್ಲವ ಸಂಘ, ಪೆರಾಬೆ-ಕುಂತೂರು, ಹಳೆನೇರೆಂಕಿ ಮತ್ತು ಕೊಯಿಲ, ರಾಮಕುಂಜ ಗ್ರಾಮ ಸಮಿತಿಗಳು ಹಾಗೂ ಮಹಿಳಾ ವೇದಿಕೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿಜೀಯವರ 169ನೇ ಜಯಂತಿ ಆಚರಣೆಯ ಪ್ರಯುಕ್ತ ಗುರುಪೂಜೆ, ಭಜನೆ, ಧಾರ್ಮಿಕ ಸಭೆ, ಸಾಧಕರಿಗೆ ಸನ್ಮಾನ ಹಾಗೂ ಸ್ಪರ್ದಾ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಡಿ.3 ರಂದು ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ದೀನ ದಯಾಳು ಉಪಾಧ್ಯಾಯ ರೈತ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮೀಜಿಯವರ ಭಜನೆ, ಗುರುಪೂಜೆ ನಡೆದು, ರಾಜ್ಯಮಟ್ಟದ ಕರ್ನಾಟಕ ಪ್ರತಿಭಾ ರತ್ನ ಪ್ರಶಸ್ತಿ ಪುರಸ್ಕೃತೆ ಶ್ರೇಯಾ ಸಿ. ಪಿ ಕಡಬ, ರಾಜ್ಯಮಟ್ಟದ ಕರ್ನಾಟಕ ಕಲಾ ಸಿರಿ ರತ್ನ ಪ್ರಶಸ್ತಿ ಪುರಸ್ಕೃತ ಶ್ರವಣ್ ಪೂಜಾರಿ ಕಡಬ, ಅಶೋಕ್ ಆಚಾರ್ಯ ನೆಲ್ಯಾಡಿ ಇವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು. ಬಳಿಕ ನಡೆದ ಸಭಾಕಾರ್ಯಕ್ರಮವನ್ನು ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಆಲಂಕಾರು ವಲಯಕ್ಕೆ ಅಭಿನಂದನೆ ಸಲ್ಲಿಸಿ ತಾಲೂಕಿನ ಪ್ರತಿ ಗ್ರಾಮಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಬ್ರಹ್ಮಶ್ರೀ ನಾರಾಯಣ ಗುರುಗಳ ಕೃಪೆಗೆ ಪಾತ್ರರಾಗಬೇಕು. ಸಮಾಜದಲ್ಲಿ ಆರ್ಥಿಕ ಸ್ಥಿತಿವಂತರು ಬಡ ಸಮಾಜದ ಬಂಧುಗಳಿಗೆ ಧನಸಹಾಯ ಮಾಡುವ ಮೂಲಕ ಸಮಾಜದ ಸಂಘಟನೆಯನ್ನು ಗಟ್ಟಿಗೊಳಿಸಬೇಕು. ಮನುಷ್ಯರಿಗೆ ಎಷ್ಟೇ ಸಂಪತ್ತು ನೀಡಿದರೂ ಆದು ಸಾಲದು ಅದಕ್ಕೆ ವಿದ್ಯೆಯನ್ನು ನೀಡಬೇಕು. ಈ ಸಧುದ್ದೇಶದಿಂದ ಪುತ್ತೂರು ಬಿಲ್ಲವ ಸಂಘ ವಿದ್ಯಾರ್ಥ ,ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನವನ್ನು ನೀಡಿ, ವಿದ್ಯಾವಂತರಾಗಿ ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಲು ಪ್ರೇರಣೆ ನೀಡುತ್ತಿದ್ದೇವೆ. ಕಡಬ ತಾಲೂಕಿನಲ್ಲಿ ಕಡಬ ಬಿಲ್ಲವ ಸಂಘವನ್ನು ನಿರ್ಮಾಣ ಮಾಡಿ ಮುಂದೆ ಕಡಬದಲ್ಲಿ ಕಟ್ಟಡದ ನಿರ್ಮಾಣ ಮಾಡುವುದಾಗಿ ತಿಳಿಸಿ ಇದಕ್ಕೆ ಎಲ್ಲರೂ ಸಹಕಾರ ನೀಡುವಂತೆ ಮನವಿ ಮಾಡಿದರು.
ಮಂಗಳೂರಿನ ಬ್ರಹ್ಮಶ್ರೀ ನಾರಾಯಣ ಗುರು ವೈದಿಕ ಸಮಿತಿ ಅಧ್ಯಕ್ಷ ಹರೀಶ್ ಶಾಂತಿ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿಗಳು ಜಗದ್ಗುರುವಾಗಿದ್ದರು ಎನ್ನುವ ವಿಚಾರ ನಮಗೆಲ್ಲಾ ತಿಳಿದಿದೆ. ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಸಂಘಟನೆಯಿಂದ ಬಲಯುತರಾಗಿ, ವಿದ್ಯೆಯಿಂದ ಸ್ವತಂತ್ರರಾಗಿ ಎನ್ನುವ ಶ್ರೇಷ್ಠ ವಿಚಾರಧಾರೆಯನ್ನು ಜಗತ್ತಿಗೆ ಸಾರಿದವರು. ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಜಯಂತಿ ಪ್ರಯುಕ್ತ ಗುರುಪೂಜೆ, ಭಜನಾ ಕಾರ್ಯಕ್ರಮ, ಧಾರ್ಮಿಕ ಸಭೆ ಸ್ಪರ್ದಾ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಮಾಡುತ್ತಿರುವುದು ಅಭಿನಂದನೀಯ ಕೆಲಸ ಕಾರ್ಯವಾಗಿದ್ದು ಇಲ್ಲಿ ಬಹುಮಾನ ಪಡೆದ ಹಾಗೂ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮುಂದೆ ನಮ್ಮ ಸಮಾಜದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು, ಶಿಕ್ಷಣದ ಕೊರತೆಯಿಂದ ಸಮಾಜದಲ್ಲಿ ದಾರಿ ತಪ್ಪುವ ಸಾಧ್ಯತೆಗಳಿದ್ದು, ಒಳ್ಳೆಯ ಶಿಕ್ಷಣ ಪಡೆದು ಸಮಾಜದಲ್ಲಿ ಉನ್ನತ ಸ್ಥಾನಮಾನಕ್ಕೆ ಹೋಗಬೇಕು. ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿಗಳ ಆದರ್ಶ ನಮಗೆಲ್ಲಾ ಪ್ರೇರಪಣೆಯಾಗಬೇಕು ಹಾಗೂ ನಾವು ರಾಜಕೀಯವಾಗಿ ಬಲಾಢ್ಯರಾಗಬೇಕೆಂದರು.
ವಿಜಯ ಕರ್ನಾಟಕ ದಿನಪತ್ರಿಕೆಯ ಜಿಲ್ಲಾವರದಿಗಾರ ಸುಧಾಕರ ಸುವರ್ಣ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿಗಳು ನಮಗೆ ದಿಕ್ಕು ಹಾಗೂ ದಾರಿಯನ್ನು ತೋರಿಸಿದವರು ಅವರ ಆದರ್ಶವನ್ನು ನಮ್ಮ ಜೀವನದಲ್ಲಿ ಪಾಲನೆ ಮಾಡಿದರೆ ನಮ್ಮ ಜೀವನ ಪಾವನವಾಗುತ್ತದೆ. ನಾವು ಹಿಂಜರಿಕೆಯಿಂದ ನಾಯಕತ್ವದಲ್ಲಿ ಯಾವತ್ತೂ ಹಿಂದೆ ಸರಿಯಬಾರದು. ಇಂಗ್ಲೀಷ್ ಶಿಕ್ಷಣದಿಂದ ಸ್ವತಂತ್ರರಾಗಿದ್ದರೂ ನಮ್ಮ ದೇವರು, ದೈವರಾಧನೆಯ ಸಂಸ್ಕೃತಿಯನ್ನು ನಮ್ಮ ಮಕ್ಕಳಿಗೆ ತಿಳಿಸುವ ಕೆಲಸ ಕಾರ್ಯಗಳಾಗಬೇಕು. ಧಾರವಾಹಿ ಚಟಕ್ಕೆ ಬಿದ್ದು ಸಮಯ ವ್ಯರ್ಥ ಮಾಡಬಾರದು. ನಾವು ಸತ್ಯ, ಧರ್ಮ, ನ್ಯಾಯ, ನಿಷ್ಠೆಯನ್ನು ಅಳವಡಿಸಿಕೊಂಡು ಧರ್ಮದ ಹಾದಿಯಲ್ಲಿ ಮುಂದುವರಿಯಬೇಕೆಂದರು.
ಮುಖ್ಯ ಅತಿಥಿಗಳಾಗಿ ಸುಬ್ರಹ್ಮಣ್ಯ ಅನುಗ್ರಹ ಕನ್ಟ್ರಕ್ಷನ್ ನ ಡಾ.ರವಿ ಕಕ್ಕೆಪದವು, ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮುತ್ತಪ್ಪ ಪೂಜಾರಿ ನೈಯ್ಯಲ್ಗ, ಪುತ್ತೂರು ಮಹಿಳಾ ವೇದಿಕೆಯ ಅಧ್ಯಕ್ಷೆ ವಿಮಲಸುರೇಶ್, ಅಮರನಾಥ್ ಕರ್ಕೇರ ಆಲಂಕಾರು, ಆಲಂಕಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ರವಿ ಕುಂಞಲಡ್ಡ, ಆಲಂಕಾರು ಬಿಲ್ಲವ ಮಹಿಳಾ ವೇದಿಕೆ ಅಧ್ಯಕ್ಷೆ ವಿನುತಾ ಉಮೇಶ್ ಸಂದರ್ಭೋಚಿತವಾಗಿ ಮಾತನಾಡಿ ಶುಭಾಹಾರೈಸಿದರು.
ಸಭಾಧ್ಯಕ್ಷತೆ ವಹಿಸಿದ ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಮಿತಿಯ ಅಧ್ಯಕ್ಷ ದಿನೇಶ್ ಕೇಪುಳು ಮಾತನಾಡಿ, ಕಾರ್ಯಕ್ರಮಕ್ಕೆ ಸಹಕರಿಸಿದವರೆಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಸಾಧನೆ ಮಾಡಿದ ಆಲಂಕಾರು ಮೂರ್ತೆ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮುತ್ತಪ್ಪ ಪೂಜಾರಿ ನೈಯ್ಯಲ್ಗ ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿ ಲಿಂಗಪ್ಪ ಪೂಜಾರಿ, ಜಿಲ್ಲಾರಾಜ್ಯೋತ್ಸವ ಪ್ರಶಸ್ತಿ ಪಡೆದ ದಯಾನಂದ ಆಗತ್ತಾಡಿ, ಸಾಮಾಜಿಕ ಕಾರ್ಯಕರ್ತ ಸದಾನಂದ ಮಡ್ಯೋಟ್ಟು, ಪ್ರತಿಭಾವಂತ ವಿದ್ಯಾರ್ಥಿಗಳಾದ ಹಿತೇಶ್ ಕದ್ರ, ಮೋಕ್ಷಿತ್ ಕೊಂಡ್ಯಾಡಿ, ಅನುಶ್ರೀ ಅಗತ್ತಾಡಿ, ಅಶೀಲ್ ಕುಮಾರ್ ಬರೆಂಬೆಟ್ಟು, ಅನುಷ್ಕಾ ಬೈಲಕೆರೆ ಯವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಆಲಂಕಾರು ಕೋಟಿ-ಚೆನ್ನಯ ಮಿತ್ರವೃಂದದ ಅಧ್ಯಕ್ಷ ಜಯಂತ ಪೂಜಾರಿ ನೆಕ್ಕಿಲಾಡಿ, ಆಲಂಕಾರು ವಲಯದ ಬಿಲ್ಲವ ಮಹಿಳಾ ವೇದಿಕೆ ಸಂಚಾಲಕಿ ಪ್ರಮೀಳಾ ಜಯಂತ್ ನೆಕ್ಕಿಲಾಡಿ, ಪೆರಾಬೆ-ಕುಂತೂರು ಬಿಲ್ಲವ ಸಂಘದ ಅಧ್ಯಕ್ಷ ಹರ್ಷಿತ್ ಮಾಯಿಲ್ಗ, ಹಳೆನೇರೆಂಕಿ ಬಿಲ್ಲವ ಸಂಘದ ಅಧ್ಯಕ್ಷ ಪುರುಷೋತ್ತಮ ಬರೆಂಬೆಟ್ಟು, ಕೊಯಿಲ-ರಾಮಕುಂಜ ಬಿಲ್ಲವ ಸಂಘದ ಅಧ್ಯಕ್ಷ ವೇಣುಗೋಪಾಲ ಅಂಬಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆಲಂಕಾರು ವಲಯದ ಬಿಲ್ಲವ ಗ್ರಾಮ ಸಮಿತಿಯ ಸಂಚಾಲಕ ದಯಾನಂದ ಕರ್ಕೇರ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಾನಿಧ್ಯ ಕೇಪುಳು, ತೃಶಾಲಿ ಕುಂಞಲಡ್ಡ ಪ್ರಾರ್ಥಿಸಿದರು. ಸದಾನಂದ ಮಡ್ಯೋಟ್ಟು, ಕೃತಿಕಾ ಸದಾಶಿವ ಬಲ್ಯ, ಅನಿಲ್ ಕುಮಾರ್ ಉರುಸಾಗ್, ಭರತ್ ಕೇಪುಳು, ಗಿತೇಶ್ ಕುಂಞಲಡ್ಡ, ಮೋಕ್ಸಿತ್ ಕೊಂಡಾಡಿ, ಮಲ್ಲಿಕಾ ಜಯಕರ ಪೂಜಾರಿ ಕಲ್ಲೇರಿ, ಯೋಗೀಶ್ ನೆಕ್ಕಿಲಾಡಿ, ಜಯಂತ ನೆಕ್ಕಿಲಾಡಿ ಕೆಳಗಿನ ಮನೆ, ಜಿನ್ನಪ್ಪ ಪೂಜಾರಿ, ಜಗದೀಶ ನೈಯ್ಯಲ್ಗ, ಲಿಂಗಪ್ಪ ಪೂಜಾರಿ ಹೊಸಮನೆ, ಚಂದ್ರ ಶೇಖರ ಪಟ್ಟೆಮಜಲು, ರವಿಮಾಯಿಲ್ಗ, ದಾಮೋದರ ನೆಕ್ಕಿಲಾಡಿ, ತಾರಾತಿಮ್ಮಪ್ಪ ಕೇಪುಳು, ಮಮತಾ ಜನ್ನಪ್ಪ ಪೂಜಾರಿ, ಗುರುಪ್ರಸಾದ್ ಕೇಪುಳು, ಉದಯಸಾಲಿಯಾನ್ ಮಾಯಿಲ್ಗ, ಸಂಜೀವ ಪೂಜಾರಿ ಮಾರಂಗ, ಸೌಮ್ಯ, ಹರೀಶ್ ಮಾರಂಗ, ಪವನ್, ಜಿತೇಶ್ ಕುಂಞಲಡ್ಡ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಆಲಂಕಾರು ಮೂರ್ತೆದಾರ ಸೇವಾ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಲಿಂಗಪ್ಪ ಪೂಜಾರಿ ಧನ್ಯವಾದ ಸಮರ್ಪಿಸಿದರು.
ಆಲಂಕಾರು ಬಿಲ್ಲವ ಸಂಘದ ಕೋಶಾಧಿಕಾರಿಯಾದ ಲಿಂಗಪ್ಪ ಪೂಜಾರಿ ನೈಯ್ಯಲ್ಗ, ಆಲಂಕಾರು ಬಿಲ್ಲವ ಸಂಘದ ಕಾರ್ಯದರ್ಶಿಯಾದ ಜಯಂತ ಎನ್. ನೆಕ್ಕಿಲಾಡಿ, ಆಲಂಕಾರು ಬಿಲ್ಲವ ಸಂಘದ ಜೊತೆ ಕಾರ್ಯದರ್ಶಿಯಾದ ದಾಮೋದರ ನೆಕ್ಕಿಲಾಡಿ, ಆಲಂಕಾರು ಬಿಲ್ಲವ ಸಂಘದ ಗೌರವಾಧ್ಯಕ್ಷರಾದ ಲಿಂಗಪ್ಪ ಪೂಜಾರಿ ಕೇಪುಳು – ಹೊಸಮನೆ, ಆಲಂಕಾರು ಬಿಲ್ಲವ ಸಂಘದ ಉಪಾಧ್ಯಕ್ಷ ಚಂದ್ರಶೇಖರ ಪಟ್ಟೆಮಜಲು, ಆಲಂಕಾರು ಬಿಲ್ಲವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಭರತ್ ಕೇಪುಳು ಹಾಗೂ ಇನ್ನಿತರರು ಸಹಕರಿಸಿದರು. ಪ್ರಸಾದ ವಿತರಣೆಯ ಬಳಿಕ ಅನ್ನಸಂತರ್ಪಣೆ, ರಸಮಂಜರಿ ಕಾರ್ಯಕ್ರಮ ನಡೆಯಿತು.