ಕೊಡಿನೀರು ಶ್ರೀ ಶಿರಾಡಿ ದೈವದ ನೂತನ ದೈವಸ್ಥಾನದ ಶಿಲಾನ್ಯಾಸ

0

ಪುತ್ತೂರು: ನರಿಮೊಗರು ಗ್ರಾಮದ ಕೊಡಿನೀರು ಮಂಟಮೆ ಕೈಪಂಗಳದಲ್ಲಿ ಶಿರಾಡಿ ದೈವದ ನೂತನ ದೈವಸ್ಥಾನ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಡಿ.4 ರಂದು ಬೆಳಿಗ್ಗೆ ನಡೆಯಿತು.


ನರಿಮೊಗರು ಮತ್ತು ಮುಂಡೂರು ಗ್ರಾಮಕ್ಕೆ ಸಂಬಂಧಿಸಿದ ಮೂಲ ಪಟ್ಟ ದೈವಸ್ಥಾನಿಧ್ಯ ಜೀರ್ಣಾ ಸ್ಥೀತಿಯಲ್ಲಿರುವುದನ್ನು ದೈವಜ್ಞರ ಸೂಚನೆಯಂತೆ ನೂತನ ದೈವಸ್ಥಾನ ನಿರ್ಮಾಣಕ್ಕೆ ಬ್ರಹ್ಮಶ್ರೀ ಕೆಮ್ಮಿಂಜೆ ವೇದ ಮೂರ್ತಿ ತಂತ್ರಿ ಸುಬ್ರಹ್ಮಣ್ಯ ಬಳ್ಳಕ್ಕುರಾಯರ ಮಾರ್ಗದರ್ಶನದಲ್ಲಿ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ ಮೂಲಸ್ಥಾನದಿಂದ ಅನುಜ್ಞಾನಕಲಶದೊಂದಿಗೆ ಮಂಟಮೆ ಕೈಪಂಗಳದಲ್ಲಿ ಬಾಲಾಲಯ ಮಾಡಿ ಪೂಜೆ ಸಲ್ಲಿಸಿ ಬಳಿಕ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಲಾಯಿತು.

ಈ ಸಂದರ್ಭ ವಾಸ್ತು ಶಿಲ್ಪಿ ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್, ಹಿರಿಯರಾದ ವಿಶ್ವನಾಥ್ ಆಳ್ವ ಕೊಡಿನೀರು, ಜೀರ್ಣೋದ್ದಾರ ಸಮಿತಿ ಗೌರವಾಧ್ಯಕ್ಷ ಯತಿರಾಜ್ ಜೈನ್ ಕೈಪಂಗಳಗುತ್ತು, ಅಧ್ಯಕ್ಷ ಎ ವಿ ನಾರಾಯಣ, ಪ್ರಧಾನಕಾರ್ಯದರ್ಶಿ ಕೆ.ಸುಂದರ ಗೌಡ ನಡುಬೈಲು, ಖಜಾಂಜಿ ಗುರುಪ್ರಸಾದ್ ಆಳ್ವ, ವಿಜಯ ಕುಮಾರ್ ಜೈನ್, ಲೋಕಪ್ಪ ಗೌಡ ಕರೆಮನೆ, ನಾಗರಾಜ್ ಪೂಜಾರಿ ದೋಳ, ಡಾ. ಸೀತಾರಾಮ ಭಟ್ ಕಲ್ಲಮೆ, ಬಾಲಕೃಷ್ಣ ಪೂಜಾರಿ ನಡುಬೈಲು, ವೇದನಾಥ ಸುವರ್ಣ, ವೆಂಕಟ್ರಮಣ ಕಳುವಾಜೆ, ದೇರಣ್ಣ ಶೆಟ್ಟಿ ನಡುಬೈಲು, ಬೆಳಿಯಪ್ಪ ಗೌಡ ಕಲ್ಕಾರು, ವಸಂತ ಗೌಡ ಕೆದ್ಕಾಡು ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ಕಾಷ್ಟ ಶಿಲ್ಪಿ ಶೇಷಪ್ಪ ಆಚಾರ್ಯ, ಮೇಸ್ತ್ರಿಕೆಲಸ ನಿರ್ವಹಿಸುವ ಕುಶಾಲಪ್ಪ ಗೌಡ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here