ಅಧ್ಯಕ್ಷರಾಗಿ ಶಾಫಿ ಕೇಕನಾಜೆ ಪ್ರ.ಕಾರ್ಯದರ್ಶಿ: ಅಬ್ದುಲ್ ಅಝೀಝ್ ತೋಟದಮೂಲೆ
ಪುತ್ತೂರು: ಇತಿಹಾಸ ಪ್ರಸಿದ್ದ, ಕರಾವಳಿಯ ಸೌಹಾರ್ದತೆಯ ಕೇಂದ್ರವೆಂದೇ ಪ್ರಸಿದ್ಧಿ ಪಡೆದಿರುವ ಇರ್ದೆ ಪಳ್ಳಿತ್ತಡ್ಕ ದರ್ಗಾ ಶರೀಫ್ ಉರೂಸ್ ಸಮಾರಂಭ 2024 ಫೆ.22 ರಿಂದ ಫೆ.28ರ ವರೆಗೆ ಅಲ್ ಹಾಜ್ ಅಸ್ಸಯ್ಯದ್ ಕೆ.ಎಸ್ ಆಟಕೊಯ ತಂಙಲ್ ಕುಂಬೋಳ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಇದರ ಅಂಗವಾಗಿ ಕೊರಿಂಗಿಲ ಜಮಾಅತಿನ ಅಧೀನದಲ್ಲಿ ಉರೂಸ್ ಕಮಿಟಿಯನ್ನು ಜಮಾಅತ್ ಅಧ್ಯಕ್ಷರಾದ ಮಹಮ್ಮದ್ ಕುಂಞಿ ಹಾಜಿಯವರ ಅಧ್ಯಕ್ಷತೆಯಲ್ಲಿ ರಚಿಸಲಾಯಿತು.
ಉರೂಸ್ ಕಮಿಟಿ ಅಧ್ಯಕ್ಷರಾಗಿ ಶಾಫಿ ಕೇಕನಾಜೆ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಅಝೀಝ್ ತೋಟದಮೂಲೆ ಹಾಗೂ ಕೋಶಾಧಿಕಾರಿಯಾಗಿ ಮೂಸಕುಂಞಿ ಬೆಟ್ಟಂಪಾಡಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಅಶ್ರಫ್ ಕೆ.ಎಂ ಕೊರಿಂಗಿಲ, ಅಬ್ದುಲ್ಲ ಕೂರಿಬಲೆ, ಮುಹಮ್ಮದ್ ಅಂಕತ್ತಲ, ಮೂಸಕುಂಞಿ ಕೀಲಂಪಾಡಿ ಆಯ್ಕೆಯಾದರು. ಜೊತೆಕಾರ್ಯದರ್ಶಿಗಳಾಗಿ ಅನ್ವರ್ ಕೊರಿಂಗಿಲ, ಲತೀಫ್ ಗುಂಡ್ಯಡ್ಕ, ಜುನೈದ್ ಬೆಂಗತ್ತಡ್ಕ ಆಯ್ಕೆಯಾದರು. ಪ್ರಚಾರ ಸಮಿತಿ ಉಸ್ತುವಾರಿಯಾಗಿ ಆಲಿ ಶಾಲಾಬಳಿ, ಪತ್ರಿಕಾ ಪ್ರತಿನಿಧಿಯಾಗಿ ನೌಫಲ್ ಬೆಟ್ಟಂಪಾಡಿ, ಸಂಘಟನಾ ಕಾರ್ಯದರ್ಶಿಗಳಾಗಿ ನವಾಝ್ ಟಿ.ಎಂ ಹಾಗೂ ಜಹ್ವಾಝ್ ಕೊರಿಂಗಿಲ ಆಯ್ಕೆಯಾದರು. ಹಾಗೂ 40 ಮಂದಿ ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಲಾಯಿತು.
ಉರೂಸ್ ಕಮಿಟಿಯ ಸಲಹೆಗಾರರಾಗಿ ಮಹಮ್ಮದ್ ಕುಂಞ ಹಾಜಿ ಕೊರಿಂಗಿಲ, ಇಸ್ಮಾಯಿಲ್ ಹಾಜಿ ಎಂಪೆಕ್ಕಲ್, ಮಹಮ್ಮದ್ ಹಾಜಿ ಶಾಲಾಬಳಿ, ಆಲಿ ಕುಂಞಿ ಹಾಜಿ ಕೊರಿಂಗಿಲ, ಶಾಹುಲ್ ಹಮೀದ್ ಕೊರಿಂಗಿಲ, ಶಾಹುಲ್ ಹಮೀದ್ ಮುಸ್ಲಿಯಾರ್, ಮಹಮ್ಮದ್ ಹಾಜಿ ಕುಕ್ಕುವಳ್ಳಿ, ಅಬ್ದುಲ್ಲ ಮೌಲವಿ ಬೇಂಗತ್ತಡ್ಕ, ಅಬ್ದುಲ್ ಹಮೀದ್ ಕೊಮ್ಮೆಮ್ಮಾರ್, ಅಬ್ದುಲ್ಲ ಹಾಜಿ ಆನಡ್ಕ, ಅಬ್ದುಲ್ಲ ನೆಕ್ಕರೆ, ಅಬ್ದುಲ್ಲ ಕುಂಞಿ ಹಾಜಿ ಕೊರಿಂಗಿಲ, ಅಬೂಬಕ್ಕರ್ ತೋಟದಮೂಲೆ ಮೊದಲಾದವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಕೊರಿಂಗಿಲ ಖತೀಬ್ ಅಲ್‌ಹಾಜ್ ಅಯ್ಯೂಬ್ ವಹಬಿ ಗಡಿಯಾರ ಉಪಸ್ಥಿತರಿದ್ದರು. ಸಯ್ಯದ್ ಹಾಶಿಂ ತಂಙಲ್ ಬಾಅಲವಿ ಕೊರಿಂಗಿಲ ದುವಾ ನೆರವೇರಿಸಿದರು. ಅಶ್ರಫ್ ಕುಕ್ಕುಪುಣಿ ಸ್ವಾಗತಿಸಿದರು.