ಐವತ್ತರ ಸಂಭ್ರಮ ವೇಳೆ ಶಾಲಾ ನೂತನ ಕೊಠಡಿ , ರಂಗ ವೇದಿಕೆ ಉದ್ಘಾಟನಾ ಕಾರ್ಯಕ್ರಮ
ಪುತ್ತೂರು : 1973 ರಲ್ಲಿ ಸ್ಥಾಪನೆಗೊಂಡಿರುವಂಥಹ ದ.ಕ.ಜಿ.ಪಂ.ಸರಕಾರಿ ಹಿರಿಯ ಪ್ರಾಥಮಿಕ ಶಾಲೆ “ನಮ್ಮ ಶಾಲೆ’ ಸಾಮೆತ್ತಡ್ಕ ಇದೀಗ 50 ವರುಷಗಳನ್ನು ಯಶಸ್ವಿಯಾಗಿ ಪೂರೈಸಿದೆ. ಈ ಸುವರ್ಣ ಸಂಭ್ರಮಕ್ಕೆ ಶಾಲಾ ಆಡಳಿತ ಮಂಡಳಿ ,ಅಭಿವೃದ್ಧಿ ಸಮಿತಿ ಹಾಗೂ ಊರಿನ ಜನತೆಯ ಸಹಕಾರದೊದಿಗೆ ಹಲವೂ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡು ಮತ್ತಷ್ಟೂ ಯಶಸ್ವಿ ಪಥದೆಡೆ ಸಾಗುತಿದೆ. ಡಿ. 23 ರಂದು ನಡೆಯಲಿರುವ ಶಾಲಾ ಸುವರ್ಣ ಸಂಭ್ರಮ ವೇಳೆ ನೂತನವಾಗಿ ನಿರ್ಮಾಣಗೊಂಡ ಶಾಲಾ ಕೊಠಡಿ ಹಾಗೂ ರಂಗ ವೇದಿಕೆ ಇದರ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು , ಜೊತೆಗೆ ಪುಟಾಣಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಈ ಸುವರ್ಣ ಸಂಭ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಯು ಡಿ. 08 ರಂದು ಶಾಲಾ ಅವರಣದಲ್ಲಿ ನೆರವೇರಿತು. ಶಾಲಾ ಸ್ಥಾಪಕಾಧ್ಯಕ್ಷರು ಹಾಗೂ ಅಧ್ಯಕ್ಷರೂ ಆಗಿರುವಂಥಹ ಗೋಪಾಲಕೃಷ್ಣ ಭಟ್ ಸಾಮೆತ್ತಡ್ಕ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ , ಕಾರ್ಯಕ್ರಮದ ಯಶಸ್ವಿ ಗೆ ಎಲ್ಲರ ಸಹಕಾರ ಕೋರಿದರು.
ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಿವಪ್ರಸಾದ್,ಮುಖ್ಯ ಗುರು ಮರಿಯಾ ಆಶ್ರಫ್, ಟ್ರಸ್ಟಿಗಳಾದ ವೆಂಕಟರಾಜ್, ನಳಿನಿ ಪಿ ಶೆಟ್ಟಿ, ಕಾರ್ಯದರ್ಶಿ ಇಂದಿವರ್ ಭಟ್, ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಸಿರಾಜ್, ವಿದ್ಯಾಭಿಮಾನಿ ದಿನೇಶ್ ಕಾಮತ್,ಶಾಲಾ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಪವಿತ್ರ ಹಾಗೂ ಸದಸ್ಯರುಗಳಾದ ಸುಜಾತ ಹಾಗೂ ಅಬ್ದುಲ್ ಹಮೀದ್ .ಅಂಗನವಾಡಿ ಶಿಕ್ಷಕಿ ಹೇಮಾವತಿ, ಹಿರಿಯ ವಿದ್ಯಾರ್ಥಿಗಳಾದ ಮೊಹಮ್ಮದ್ ಫಾಹಿಜ್,ಕು.ಭವ್ಯ ಹಾಗೂ ಕು.ಪಲ್ಲವಿ , ಶಾಲಾ ನಾಯಕಿ ಜಿ.ವೀಣಾ ಹಾಗೂ ಅಕ್ಷರ ದಾಸೋಹ ಸಿಬ್ಬಂದಿಗಳ ಸಹಿತ ವಿದ್ಯಾಭಿಮಾನಿಗಳೂ ಹಾಜರಿದ್ದರು.