ಪುತ್ತೂರು: ಪುತ್ತೂರಿನ 2ನೇ ಅತಿ ದೊಡ್ಡ ಇತಿಹಾಸ ಪ್ರಸಿದ್ದ ಜಾತ್ರೋತ್ಸವ ಎಂದೇ ಕರೆಯಲ್ಪಡುವ ಕಲ್ಲೇಗ ಶ್ರೀ ಕಲ್ಕುಡ ದೈವಸ್ಥಾನದಲ್ಲಿ ಜ.24ರಂದು ಶ್ರೀ ಕಲ್ಕುಡ, ಕಲ್ಲುರ್ಟಿ ದೈವಗಳ ವರ್ಷಾವಧಿ ಜಾತ್ರೋತ್ಸವದ ಪೂರ್ವಭಾವಿ ಸಭೆಯು ಡಿ.10ರಂದು ದೈವಸ್ಥಾನದ ವಠಾರದಲ್ಲಿ ನಡೆಯಿತು.
ಸಂಪ್ರದಾಯದಂತೆ ಜಾತ್ರೋತ್ಸವ ಯಶಸ್ವಿಯಾಗಿ ನಡೆಸಲು ಬೇಕಾದ ಅಗತ್ಯ ಕ್ರಮಗಳನ್ನು ವರ್ಷಂಪ್ರತಿಯಂತೆ ನಡೆಸಿಕೊಂಡು ಬರುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಕಲ್ಲೇಗ ಕಲ್ಕುಡ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಜಿತ್ ಕುಮಾರ್ ಜೈನ್, ನಗರಸಭೆ ಸದಸ್ಯ ಕೆ.ಜೀವಂಧರ್ ಜೈನ್, ಕಲ್ಲೇಗ ರೂರಲ್ ಡೆವೆಲಪ್‌ಮೆಂಟ್ ಟ್ರಸ್ಟ್ ಅಧ್ಯಕ್ಷ ಸಂಜೀವ ನಾಯಕ್ ಕಲ್ಲೇಗ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಜಿನ್ನಪ್ಪ ಗೌಡ ಕಲ್ಲೆಗ, ಮಾಧವ ಪಟ್ಲ, ರವಿಕಿರಣ್, ಪ್ರಶಾಂತ್ ಅಜೇಯನಗರ, ಪ್ರಸಾದ್ ಬೀಟಿಕೆ, ಸುನಿತ, ಜಿನ್ನಪ್ಪ ಪೂಜಾರಿ ಮುರ, ಪ್ರಕಾಶ್ ಕಲ್ಲೇಗ, ಜಾನಕಿ, ಪ್ರಶಾಂತ್ ಮುರ, ದಿನೇಶ್ ಮುರ, ಪದ್ಮಯ್ಯ ಗೌಡ, ನಾರಾಯಣ ಮುಗೇರ, ಸತೀಶ್ ಕಲ್ಲೇಗ, ಮನೋಹರ್ ಕಲ್ಲೇಗ, ವಿನಯ ಕುಮಾರ್ ಕಲ್ಲೇಗ, ಗೋವರ್ಧನ ಕುಮೇರಡ್ಕ, ನಾರಾಯಣ ಗೌಡ ಮುರ, ನಿತೀಶ್ ನೆಲಪ್ಪಾಲು, ಜಯರಾಮ ನೆಲಪ್ಪಾಲು, ರಾಧಾಕೃಷ್ಣ ನಾಯ್ಕ್ ಕಲ್ಲೇಗ ಹಾಗೂ ಚಾಕ್ರಿವರ್ಗದವರು, ಗ್ರಾಮಸ್ಥರು ಉಪಸ್ಥಿತರಿದ್ದರು.