ಬಡಗನ್ನೂರು: ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ ಕಾರ್ಯಕ್ರಮವು ಡಿ.9ರಂದು ನಡೆಯಿತು.
ಸಂಜೆ ಗಂಟೆ 6.30ಕ್ಕೆ ಕ್ಷೇತ್ರದ ಪ್ರಧಾನ ಅರ್ಚಕ ಮಹಾಲಿಂಗ ಭಟ್ ನೇತೃತ್ವದಲ್ಲಿ ಶ್ರೀ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ದೀಪೋತ್ಸವಕ್ಕೆ ಚಾಲನೆ ನೀಡಲಾಯಿತು. ಸಾವಿರಕ್ಕೂ ಮಿಕ್ಕಿ ಭಕ್ತಾದಿಗಳು ದೇವಸ್ಥಾನದ ಸುತ್ತಲೂ ಹಣತೆ ಹಚ್ಚಿ ದೀಪೋತ್ಸವ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರು. ಬಳಿಕ ದೇವರಿಗೆ ಸಾಮೂಹಿಕ ಕಾರ್ತಿಕ ಪೂಜೆ, ಮಹಾಪೂಜೆ ಪ್ರಸಾದ ವಿತರಣೆ ಬಳಿಕ ಸಾವಿರಕ್ಕೂ ಮಿಕ್ಕಿ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು.
ದೀಪೋತ್ಸವದ ಮೆರಗು ಹೆಚ್ಚಿಸಿದ ಪೂಕಳಂ
ಲಕ್ಷ ದೀಪೋತ್ಸವ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಪಟ್ಟೆ ಮನೆತನದ ವತಿಯಿಂದ ದೇವಸ್ಥಾನದ ಎದುರು ಭಾಗದ ಹೊರಾಂಗಣದಲ್ಲಿ ಹಾಕಿದ ಅಕರ್ಷಣಿಯ ಪೂಕಳಂ ಭಕ್ತಾಧಿಗಳ ಗಮನ ಸೆಳೆಯುವ ಮೂಲಕ ದೀಪೋತ್ಸವ ಮೆರಗು ಹೆಚ್ಚಿಸಿತು. ದೇವಸ್ಥಾನದ ಗರ್ಭಗುಡಿಯ ಸುತ್ತಲೂ ಹಾಗೂ ಗೋಪುರವನ್ನು ಹೂವಿನಿಂದ ಅಲಂಕರಿಸಲಾಗಿತ್ತು. ಸಂಜೆ ಗಂ.4ರಿಂದ ವಿವಿಧ ಭಜನಾ ಮಂಡಳಿ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಸರ್ವಶಕ್ಕಿ ಮಕ್ಕಳ ಕುಣಿತ ಭಜನಾ ತಂಡದ ಮಕ್ಕಳಿಂದ ಅಕರ್ಷಕ ಕುಣಿತ ಭಜನೆ ಮೂಲಕ ಭಕ್ತಾಧಿಗಳ ಮನ ಸೆಳೆಯಿತು.ಕಾರ್ಯಕ್ರಮದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮನೋಜ್ ರೈ ಪೇರಾಲು,ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಭಟ್ ಸಿ.ಯಚ್, ಲಕ್ಷ ದೀಪೋತ್ಸವ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಭಟ್ ಪಟ್ಟೆ, ಗೌರವಾಧ್ಯಕ್ಷ ಮಾಧವ ರೈ ಹೊಸಮನೆ ಕರ್ಪುಡಿಕಾನ, ಪ್ರಧಾನ ಕಾರ್ಯದರ್ಶಿ ಸಂತೋಷ್ ಆಳ್ವ ಗಿರಿಮನೆ, ನವರಾತ್ರಿ ಉತ್ಸವ ಅಧ್ಯಕ್ಷ ಚಂದ್ರಶೇಖರ ಅಳ್ವ ಗಿರಿಮನೆ, ಕೋಶಾಧಿಕಾರಿ ಸುಬ್ರಹ್ಮಣ್ಯ ರಾವ್ ಶರವು, ಅಯುಧ ಪೂಜೆ ಸಮಿತಿ ಅಧ್ಯಕ್ಷ ಸುಧಾಕರ ಶೆಟ್ಟಿ ಮಂಗಳಾದೇವಿ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಸತೀಶ್ ರೈ ಕಟ್ಟಾವು, ಉತ್ಸವ ಸಮಿತಿ ಅಧ್ಯಕ್ಷ ರಾಮಣ್ಣ ಗೌಡ ಬಸವಹಿತ್ತಿಲು, ಪಟ್ಟೆ ವಿದ್ಯಾಸಂಸ್ಥೆಗಳ ಅಧ್ಯಕ್ಷ ವೇಣುಗೋಪಾಲ ಭಟ್ ಪಟ್ಟೆ, ಕೋಟಿ ಚೆನ್ನಯ ಯುವಕ ಮಂಡಲದ ಅಧ್ಯಕ್ಷ ಮಣಿತ್ ರೈ ಕುದ್ಕಾಡಿ ತಾಲೂಕು ಭಜನಾ ಪರಿಷತ್ತಿನ ಅಧ್ಯಕ್ಷ ಸುಬ್ಬಯ್ಯ ರೈ ಹಲಸಿನಡಿ, ರಾಜೇಶ್ ಮೇಗಿನಮನೆ, ಸುರೇಶ್ ರೈ ಪಳ್ಳತ್ತಾರು, ಕುಂಬ್ರ ಕೃ ಪ.ಸ.ಸಂಘದ ನಿರ್ದೇಶಕ ರಘುರಾಮ ಪಾಟಾಳಿ ಶರವು, ಪಡುಮಲೆ ಶಾಲಾ ನಿವೃತ್ತ ಮುಖ್ಯ ಶಿಕ್ಷಕ ನಾರಾಯಣ ಪಾಟಾಳಿ, ಪಟ್ಟೆ ಶ್ರೀ ಕೃಷ್ಣ ಹಿ.ಪ್ರಾ.ಶಾಲಾ ಮುಖ್ಯ ಶಿಕ್ಷಕಿ ಶಂಕರಿ ಪಟ್ಟೆ, ಉಲ್ಲಾಸ್ ಭಟ್ ಪಡ್ಪು, ಪುರಂದರ ರೈ ಸೇನೆರಮಜಲು, ಕಿರಣ್ ರೈ ಮೈಂದನಡ್ಕ, ಪಡುಮಲೆ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಗಂಗಾಧರ ರಯ ಮೇಗಿನಮನೆ ಮತ್ತಿತರರು ಉಪಸ್ಥಿತರಿದ್ದರು.