ನಿಡ್ಪಳ್ಳಿ ತಂಬುತ್ತಡ್ಕ ನವಜ್ಯೋತಿ ಯುವಕ ಮಂಡಲದಿಂದ ಅಹರ್ನಿಶಿ ಕಬಡ್ಡಿ ಪಂದ್ಯಾಟ

0

ಅಟ್ಯಾಕರ್ಸ್ ವಿಟ್ಲ, ಡಿ9’ಸ್ ರೆಂಜ ಪ್ರಥಮ- ನವಜ್ಯೋತಿ ನರಿಮೊಗರು, ಕ್ಲಾಸಿಕ್ ರೆಂಜ ದ್ವಿತೀಯ

ಪುತ್ತೂರು: ನಿಡ್ಪಳ್ಳಿ ತಂಬುತ್ತಡ್ಕ ನವಜ್ಯೋತಿ ಯುವಕ ಮಂಡಲ ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮತ್ತು ಪುತ್ತೂರು ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಇದರ ಸಹಯೋಗದೊಂದಿಗೆ ಮುರಳೀಕೃಷ್ಣ ಭಟ್ ಮುಂಡೂರು ಸ್ಮರಣಾರ್ಥ 18ನೇ ವರ್ಷದ ಮ್ಯಾಟ್ ಅಂಕಣದ 55ಕೆಜಿ ವಿಭಾಗದ ಕಬಡ್ಡಿ ಪಂದ್ಯಾಟ ಹಾಗೂ ವಲಯ ಮಟ್ಟದ ಅಹರ್ನಿಶಿ ಕಬಡ್ಡಿ ಪಂದ್ಯಾಟವು ಡಿ.9 ರಂದು ಸಂಜೆ ತಂಬುತ್ತಡ್ಕ ಬಸ್ಸು ನಿಲ್ದಾಣದ ವಠಾರದಲ್ಲಿ ಜರಗಿತು.


55 ಕೆಜಿ ವಿಭಾಗದ ಪಂದ್ಯಾಟದಲ್ಲಿ ಅಟ್ಯಾಕರ್ಸ್ ವಿಟ್ಲ ಪ್ರಥಮ ಸ್ಥಾನಿಯಾಗಿ, ನವಜ್ಯೋತಿ ನರಿಮೊಗರು ದ್ವಿತೀಯ ಸ್ಥಾನಿಯಾಗಿ, ಪಡ್ನೂರು ಶ್ರೀರಾಂ ಫ್ರೆಂಡ್ಸ್ ತೃತೀಯ ಸ್ಥಾನಿಯಾಗಿ, ಬ್ರದರ್ಸ್ ಅಡ್ಕರೆ ಚತುರ್ಥ ಸ್ಥಾನವನ್ನು ಪಡೆಯಿತು. ಬೆಸ್ಟ್ ರೈಡರ್ ಪ್ರಶಸ್ತಿಯನ್ನು ನವಜ್ಯೋತಿ ನರಿಮೊಗರು ತಂಡದ ಅಶ್ವಿನ್, ಬೆಸ್ಟ್ ಡಿಫೆಂಡರ್ ಆಗಿ ಅಟ್ಯಾಕರ್ಸ್ ವಿಟ್ಲ ತಂಡದ ಕಿಶೋರ್, ಬೆಸ್ಟ್ ಅಲ್ ರೌಂಡರ್ ಆಗಿ ಅಟ್ಯಾಕರ್ಸ್ ವಿಟ್ಲ ತಂಡದ ದೀಕ್ಷಿತ್ ಪಡೆದರು.


ವಲಯ ಮಟ್ಟದ ತಂಡಗಳ ಹಣಾಹಣಿಯಲ್ಲಿ ಡಿ9’ಸ್ ರೆಂಜ ಪ್ರಥಮ ಸ್ಥಾನವನ್ನು, ಕ್ಲಾಸಿಕ್ ರೆಂಜ ದ್ವಿತೀಯ ಸ್ಥಾನ ಗಳಿಸಿದರು. ಇದರಲ್ಲಿ ಬೆಸ್ಟ್ ರೈಡರ್ ಆಗಿ ಡಿ9’ಸ್ ರೆಂಜ ತಂಡದ ಮನ್ವಿತ್, ಬೆಸ್ಟ್ ಡಿಫೆಂಡರ್ ಆಗಿ ಕ್ಲಾಸಿಕ್ ರೆಂಜದ ಜಲಾಲ್, ಬೆಸ್ಟ್ ಅಲ್ ರೌಂಡರ್ ಆಗಿ ಡಿ9’ಸ್ ರೆಂಜ ತಂಡದ ರಶೀದ್ ಗುರುತಿಸಿಕೊಂಡರು.
55 ಕೆಜಿ ವಿಭಾಗದ ಮುಕ್ತ ಕಬಡ್ಡಿ ಪಂದ್ಯಾಟದ ಬಹುಮಾನ ಮೊತ್ತವಾಗಿ ಪ್ರಥಮ ರೂ.6 ಸಾವಿರ, ದ್ವಿತೀಯ ರೂ.4 ಸಾವಿರ, ತೃತೀಯ ಹಾಗೂ ಚತುರ್ಥ ರೂ.2 ಸಾವಿರ ಜೊತೆಗೆ ಶಾಶ್ವತ ಫಲಕ ಹಾಗೂ ವೈಯಕ್ತಿಕ ಬಹುಮಾನಗಳು ಮತ್ತು ವಲಯ ಮಟ್ಟದ ಕಬಡ್ಡಿ ಪಂದ್ಯಾಟದ ಬಹುಮಾನ ಮೊತ್ತವಾಗಿ ಪ್ರಥಮ ರೂ.4 ಸಾವಿರ, ದ್ವಿತೀಯ ರೂ.2 ಸಾವಿರ ಜೊತೆಗೆ ಶಾಶ್ವತ ಫಲಕ ಹಾಗೂ ವೈಯಕ್ತಿಕ ಬಹುಮಾನಗಳನ್ನು ಒಳಗೊಂಡಿತ್ತು.


ಪಂದ್ಯಾಕೂಟದಲ್ಲಿ ನಿಡ್ಪಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ವೆಂಕಟ್ರಮಣ ಬೋರ್ಕರ್, ನಿಡ್ಪಳ್ಳಿ ಶ್ರೀ ಶಾಂತದುರ್ಗಾ ದೇವಸ್ಥಾನದ ಗೌರವಾಧ್ಯಕ್ಷ ಪ್ರಮೋದ್ ಆರಿಗ, ಕೊಂಬೆಟ್ಟು ಶ್ರೀ ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಉದ್ಯಮಿ ಅರುಣ್ ಕುಮಾರ್ ಆನಾಜೆ, ದ.ಕ ಜಿಲ್ಲೆ ಬಿಜೆಪಿ ಕಾರ್ಯಕಾರಿ ಸಮಿತಿ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಶ್ರೀ ಕಟೀಲ್ ಲಾಜಿಸ್ಟಿಕ್ ನ ಜನಾರ್ದನ ಪೂಜಾರಿ ಪದಡ್ಕ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ, ಕೆಡಿಪಿ ಮಾಜಿ ಸದಸ್ಯ ಕೃಷ್ಣಪ್ರಸಾದ್ ಆಳ್ವ, ಬೆಟ್ಟಂಪಾಡಿ ವಲಯ ಕಾಂಗ್ರೆಸ್ ಅಧ್ಯಕ್ಷ ನವೀನ್ ರೈ ಚೆಲ್ಯಡ್ಕ, ಕಟ್ಟಾವು ಇನ್ಸೂರೆನ್ಸ್ ಮಾಲಕ ಸತೀಶ್ ರೈ ಕಟ್ಟಾವು, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಮಹಮದ್ ಹಾಜಿ ಕುಕ್ಕುವಳ್ಳಿ, ಪ್ರಗತಿಪರ ಕೃಷಿಕ ಜಯಂತ ರೈ ಕುದ್ಕಾಡಿ, ಪುತ್ತೂರು ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಗೌರವಾಧ್ಯಕ್ಷ ಚಂದ್ರಹಾಸ ಶೆಟ್ಟಿ, ಅಧ್ಯಕ್ಷ ಸುರೇಂದ್ರ ರೈ ಬಳ್ಳಮಜಲು, ಪ್ರಧಾನ ಕಾರ್ಯದರ್ಶಿ ದಯಾನಂದ ರೈ ಕೋರ್ಮಂಡ, ಕರ್ನಪ್ಪಾಡಿ ಬ್ರಹ್ಮ ಬೈದರ್ಕಳ ಗರಡಿ ಅಧ್ಯಕ್ಷ ಶಿವಪ್ಪ ಪೂಜಾರಿ ನುಳಿಯಾಲು, ನಿಡ್ಪಳ್ಳಿ ಶ್ರೀ ಶಾಂತದುರ್ಗಾ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಾರಾಯಣ ರೈ ಕೊಪ್ಪಳ, ಸದಸ್ಯ ನಾಗೇಶ್ ಗೌಡ ಪುಳಿತ್ತಡಿ, ಪಾಣಾಜೆ ಸಿಎ ಬ್ಯಾಂಕಿನ ಕೃಷ್ಣಕುಮಾರ್ ಮುಂಡೂರು, ನಿಡ್ಪಳ್ಳಿ ಗ್ರಾಮ ಪಂಚಾಯತ್ ಸದಸ್ಯರಾದ ಅವಿನಾಶ್ ರೈ ಕುಡ್ಚಿಲ, ಗ್ರೆಟ್ಟ ಡಿ’ಸೋಜ, ಮಾಜಿ ಸದಸ್ಯ ಲಕ್ಷ್ಮಣ ನಾಯ್ಕ ಕೋಡಿ, ಪ್ರಗತಿಪರ ಕೃಷಿಕ ಹಾಗೂ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಮನೋಹರ್ ಆರಂಭ್ಯ, ದಕ್ಷಿಣ ಕನ್ನಡ ಜಿಲ್ಲೆ ಕರ್ನಾಟಕ ರಕ್ಷಣಾ ವೇದಿಕೆಯ ಸಂಘಟನಾ ಕಾರ್ಯದರ್ಶಿ ಹಮೀದ್ ಕೊಮ್ಮೆಮ್ಮಾರ್, ಕ ಬೆಟ್ಟಂಪಾಡಿ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ರಾಜೇಶ್ ನೆಲ್ಲಿತ್ತಡ್ಕ, ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸದಸ್ಯ ಮೊಯಿದು ಕುಂಞ ಕೋನಡ್ಕ, ನಿಡ್ಪಳ್ಳಿ ಜೈ ಭೀಮ್ ಟ್ರಸ್ಟ್ ಅಧ್ಯಕ್ಷ ಮಹೇಶ್ ಪಟ್ಟೆ, ನಿಡ್ಪಳ್ಳಿ ನವಜ್ಯೋತಿ ಯುವಕ ಮಂಡಲ ಅಧ್ಯಕ್ಷ ವಿಜಿತ್ ಕುಮಾರ್ ದೇವಸ್ಯ, ನಿಡ್ಪಳ್ಳಿ ಹೋಲಿ ರೋಸರಿ ಚರ್ಚ್ ಧರ್ಮಗುರು ವಂ|ಜೇಸನ್ ಲೋಬೊ, ಪುತ್ತೂರು ನಗರಸಭಾ ಮಾಜಿ ಅಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಕೈಕಾರ ಆಜ್ಮೀಯ ಟ್ರೇಡರ್ಸ್ ನ ಯೂಸುಫ್ ಹಾಜಿ ಕೈಕಾರ, ಮುಡಿಪಿನಡ್ಕ ಮಂಗಳಾದೇವಿ ಟ್ರಾನ್ಸ್ ಪೋರ್ಟ್ ಸುಧಾಕರ ರೈ, ಪಡುಮಲೆ ಕೋಟಿ ಚೆನ್ನಯ ಪ್ರತಿಷ್ಠಾನ ಅಧ್ಯಕ್ಷ ನಾರಾಯಣ ರೈ ಕುದ್ಕಾಡಿ, ಕುಂಬ್ರ ಮಾತೃಶ್ರೀ ಅರ್ಥ್ ಮೂವರ್ಸ್ ಮಾಲಕ ಮೋಹನದಾಸ್ ರೈ ಕುಂಬ್ರ, ದ.ಕ ಜಿಲ್ಲೆ ಬಿಜೆಪಿ ಹಿಂದುಳಿದ ಮೋರ್ಚಾ ಅಧ್ಯಕ್ಷ ಆರ್.ಸಿ ನಾರಾಯಣ, ವಕೀಲ ಹಾಗೂ ನೋಟರಿ ಭಾಸ್ಕರ ಕೋಡಿಂಬಾಳ, ವಕೀಲ ಸಾಗರ್ ರೈ ಮಂಗಳೂರು, ಈಶ್ವರಮಂಗಲ ಶುಭ ಟ್ರೇಡರ್ಸ್ ನ ಸಲಾಂ ಪದಡ್ಕ, ಬೆಟ್ಟಂಪಾಡಿ ರೆಂಜ ಸಿದ್ಧಿ ವಿನಾಯಕ ಇಲೆಕ್ಟ್ರಿಕಲ್ಸ್ ಮಾಲಕ ನಾರಾಯಣ ಹೊಳ್ಳ, ಸಿವಿಲ್ ಇಂಜಿನಿಯರ್ ಆಲಿ ಕುಂಞ ಹಾಜಿ ಕೊರಿಂಗಿಲ, ಬೆಟ್ಟಂಪಾಡಿ ರೆಂಜ ರೋಯಲ್ ಹಾರ್ಡ್ ವೇರ್ ಮಾಲಕ ಶರೀಫ್ ಕುಂಜಲಡ್ಕ, ಕೌಡಿಚ್ಚಾರ್ ಟ್ರೇಡರ್ಸ್ ಮಾಲಕ ಹಂಝ ಮುಂಡೋಳೆ, ನಿಡ್ಪಳ್ಳಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಬಾಲಚಂದ್ರ ರೈ ಆನಾಜೆ, ನಿಡ್ಪಳ್ಳಿ ಮಂದಾರಗಿರಿ ಗೋಪಾಲಕೃಷ್ಣ ಭಜನಾ ಮಂದಿರ ಗೌರವಾಧ್ಯಕ್ಷ ಸಂಜೀವ ಪೂಜಾರಿ ಕಾನ, ಮಣಿ ಅರ್ಥ್ ಮೂವರ್ಸ್ ಮಾಲಕ ರಾಧಾಕೃಷ್ಣ ರೈ ಪಟ್ಟೆ, ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸದಸ್ಯ ಪ್ರಕಾಶ್ ರೈ ಬೈಲಾಡಿ, ದ.ಕ ಜಿಲ್ಲೆ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಅಬೂಬಕ್ಕರ್ ಟಿ.ಎಮ್ ಕೊರಿಂಗಿಲ, ಪಾಣಾಜೆ ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಉಮ್ಮರ್ ಜನಪ್ರಿಯ, ಪಾಣಾಜೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಸತ್ಯನಾರಾಯಣ ರೈ ನುಳಿಯಾಲು, ನಿಡ್ಪಳ್ಳಿ ಪ್ರಗತಿಪರ ಕೃಷಿಕ ರಾಜಾರಾಮ್ ಭಟ್ ನಾಕೂಡೇಲು, ನ್ಯಾಯವಾದಿ ಗ್ರೆಗರಿ ಡಿ’ಸೋಜ, ಯುವ ಉದ್ಯಮಿ ಅಮೀರ್ ವೈ ಎಂ.ಕೆ ಮುಡಿಪಿನಡ್ಕ, ಪಾಣಾಜೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಸತೀಶ್ ರೈ ಮುಂಡೂರು, ನಿಡ್ಪಳ್ಳಿ ಕೋಟಿ ಚೆನ್ನಯ ಯುವಕ ಮಂಡಲ ಅಧ್ಯಕ್ಷ ಹರೀಶ್ ಪೂಜಾರಿ ಕುಕ್ಕುಪುಣಿ, ಬೆಟ್ಟಂಪಾಡಿ ರೆಂಜ ಕ್ಲಾಸಿಕ್ ಸ್ಪೋರ್ಟ್ಸ್ ಅಧ್ಯಕ್ಷ ಫಾರೂಕ್ ಟಿ.ಎಂ, ನಿಡ್ಪಳ್ಳಿ ನವಜ್ಯೋತಿ ಯುವಕ ಮಂಡಲ ಕಾರ್ಯದರ್ಶಿ ಸಿದ್ಧೀಕ್ 313 ಸಹಿತ ಹಲವರು ಉಪಸ್ಥಿತರಿದ್ದರು. ರೆಫ್ರಿ ಬೋರ್ಡ್ ಅಧ್ಯಕ್ಷ ಆಸಿಫ್ ತಂಬುತ್ತಡ್ಕ ಸ್ವಾಗತಿಸಿ, ವಂದಿಸಿದರು. ಬಾಲಕೃಷ್ಣ ರೈ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here