ಪುತ್ತೂರು: ಮಾಯಿದೆ ದೇವುಸ್ ಚರ್ಚ್ನ ಡೊನ್ ಬೊಸ್ಕೊ ಕ್ಲಬ್ ಸಂಘಟನೆಯ ವತಿಯಿಂದ ಪುತ್ತೂರಿನಲ್ಲಿ ತೃತೀಯ ಬಾರಿಗೆ ಪುತ್ತೂರು ಮಾಯಿದೆ ದೇವುಸ್ ಚರ್ಚ್, ಮರೀಲ್ ಸೆಕ್ರೇಡ್ ಹಾರ್ಟ್ ಚರ್ಚ್ ಹಾಗೂ ಬನ್ನೂರು ಸಂತ ಅಂತೋನಿ ಚರ್ಚ್ ವ್ಯಾಪ್ತಿಯ ಕ್ರಿಶ್ಚಿಯನ್ ಸಮುದಾಯದ ಕ್ರಿಕೆಟ್ ಆಟಗಾರರನ್ನೊಳಗೊಂಡ ‘ಕ್ರಿಶ್ಚಿಯನ್ ಪ್ರೀಮಿಯರ್ ಲೀಗ್(ಸಿಪಿಎಲ್) 2024-ಸೀಸನ್ 3’ ಜ.28 ರಂದು ದರ್ಬೆ ಸಂತ ಫಿಲೋಮಿನಾ ಕಾಲೇಜಿನ ಐತಿಹಾಸಿಕ ಕ್ರೀಡಾಂಗಣದಲ್ಲಿ ಜರಗಲಿದೆ.
ಲೀಗ್ ಮಾದರಿಯಲ್ಲಿ ನಡೆಯುವ ಈ ಪಂದ್ಯಾಕೂಟದಲ್ಲಿ ಆರು ತಂಡಗಳಾದ ಸಿಲ್ವೆಸ್ತರ್ ಡಿ’ಸೋಜ ಮಾಲಕತ್ವದ ಎಸ್.ಎಲ್ ಗ್ಲ್ಯಾಡಿಯೇಟರ್ಸ್, ಪ್ರದೀಪ್ ವೇಗಸ್(ಬಾಬಾ) ಮಾಲಕತ್ವದ ಫ್ಲೈ ಝೋನ್ ಅಟ್ಯಾಕರ್ಸ್, ರೋಶನ್ ರೆಬೆಲ್ಲೋ ಮಾಲಕತ್ವದ ಸಿಝ್ಲರ್ ಸ್ಟ್ರೈಕರ್ಸ್, ಓಸ್ವಾಲ್ಡ್ ಲೂವಿಸ್/ಲೆಸ್ಟರ್ ಲೂವಿಸ್ ಮಾಲಕತ್ವದ ಲೂವಿಸ್ ಕ್ರಿಕೆಟರ್ಸ್, ಕಿರಣ್ ಡಿ’ಸೋಜ/ಮೆಲ್ವಿನ್ ಪಾಯಿಸ್ ಮಾಲಕತ್ವದ ಕ್ರಿಶಲ್ ವಾರಿಯರ್ಸ್, ದೀಪಕ್ ಮಿನೇಜಸ್ ಮಾಲಕತ್ವದ ಸೋಜಾ ಸೂಪರ್ ಕಿಂಗ್ಸ್ ತಂಡಗಳು 2024, ಸೀಸನ್-3 ಪ್ರಶಸ್ತಿಗಾಗಿ ಹಣಾಹಣಿ ನಡೆಸಲಿವೆ. ಒಟ್ಟು 80 ಆಟಗಾರರನ್ನೊಳಗೊಂಡ ಈ ಸ್ಪರ್ಧೆಯಲ್ಲಿ ಭಾಗವಹಿಸುವ ಆಟಗಾರರು ರೂ.200 ಶುಲ್ಕವನ್ನು ಸಂಘಟಕರಿಗೆ ಪಾವತಿಸಬೇಕಾಗಿದೆ. ರಿಜಿಸ್ಟ್ರೇಶನ್ ಅರ್ಜಿಯು ಕೋರ್ಟ್ ರಸ್ತೆಯ ವಿಶ್ವ ಸಂಕೀರ್ಣದಲ್ಲಿ ವ್ಯವಹರಿಸುತ್ತಿರುವ ಗ್ಲೋರಿಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ದೊರಕಲಿದ್ದು, ಭಾಗವಹಿಸುವ ಆಟಗಾರರು ರಿಜಿಸ್ಟ್ರೇಶನ್ ಶುಲ್ಕದೊಂದಿಗೆ 2023, ಡಿಸೆಂಬರ್ 15ರೊಳಗೆ ಪಾವತಿಸಬೇಕಾಗಿ ವಿನಂತಿಸಲಾಗಿದ್ದು ಶೀಘ್ರದಲ್ಲಿಯೇ ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆ ನೆರವೇರಲಿದೆ. ಹೆಚ್ಚಿನ ಮಾಹಿತಿಗಾಗಿ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿ ವಿಜಯ್ ಡಿ’ಸೋಜ(9980307216) ನಂಬರಿಗೆ ಸಂಪರ್ಕಿಸಬಹುದಾಗಿ ಡೋನ್ ಬೊಸ್ಕೊ ಕ್ಲಬ್ ಪ್ರಕಟಣೆ ತಿಳಿಸಿದೆ.
ಈ ಬಾರಿ ಯಾರು ಚಾಂಪಿಯನ್?
ಸಿಪಿಎಲ್ ಸೀಸನ್-1ರಲ್ಲಿ ಸಿಝ್ಲರ್ ಸ್ಟ್ರೈಕರ್ಸ್ ಚಾಂಪಿಯನ್, ಸೋಜಾ ಸೂಪರ್ ಕಿಂಗ್ಸ್ ರನ್ನರ್ಸ್, ಸೀಸನ್-2ರಲ್ಲಿ ಲೂವಿಸ್ ಕ್ರಿಕೆಟರ್ಸ್, ಸಿಝ್ಲರ್ ಸ್ಟ್ರೈಕರ್ಸ್ ರನ್ನರ್ಸ್ ಆಗಿ ಹೊರ ಹೊಮ್ಮಿತ್ತು. ಇದೀಗ ಸೀಸನ್-3 ಸ್ಪರ್ಧೆಗೆ ದಿನಗಣನೆ ಎದುರಿಸುತ್ತಿದ್ದು ಈ ಬಾರಿಯ ಸೀಸನ್-3 ಚಾಂಪಿಯನ್ ಯಾರಾಗುತ್ತಾರೆ ಎಂಬ ಕುತೂಹಲ ಕ್ರಿಕೆಟ್ ಪ್ರೇಕ್ಷಕರಲ್ಲಿದೆ.