ಪುತ್ತೂರು: ಮುಹಿಯದ್ದೀನ್ ಜುಮಾ ಮಸೀದಿ ಕೊಳ್ತಿಗೆ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಲ್-ಹಿದಾಯ ಕಮಿಟಿ ಕೊಳ್ತಿಗೆ ಇದರ ವಾರ್ಷಿಕ ಮಹಾಸಭೆ ಡಿ.10ರಂದು ದಾರುಸ್ಸಲಾಂ ಮದರಸ ಸಭಾಂಗಣದಲ್ಲಿ ಅಬ್ದುಲ್ ರಝಾಕ್ ಮುಲ್ಲುಕ್ಕಾಡ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕೊಳ್ತಿಗೆ ಮುಹಿಯದ್ದೀನ್ ಜುಮಾ ಮಸೀದಿಯ ಸಿದ್ದೀಕ್ ಫೈಝಿ ದುವಾ ನೆರವೇರಿಸಿದರು. ಕೊಳ್ತಿಗೆ ಜುಮಾ ಮಸೀದಿ ಮುದರ್ರಿಸ್ ಇಲ್ಯಾಸ್ ಇರ್ಫಾನಿ ಉದ್ಘಾಟಿಸಿ ಸಂದೇಶ ಭಾಷಣ ನಡೆಸಿದರು. ನಂತರ ಅಲ್-ಹಿದಾಯ ಕಮಿಟಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಇಲ್ಯಾಸ್ ಇರ್ಫಾನಿ ಸಾಲ್ಮರ, ಅಧ್ಯಕ್ಷರಾಗಿ ಅಬ್ದುಲ್ ಲತೀಫ್ ಬೈಲೋಡಿ, ಕಾರ್ಯದರ್ಶಿಯಾಗಿ ನಾಸಿರ್ ಪೆರ್ಲಂಪಾಡಿ ಹಾಗೂ ಕೋಶಾಧಿಕಾರಿಯಾಗಿ ಅಬೂಬಕ್ಕರ್ ಸಖಾಫಿ ಕುಂಡಡ್ಕ ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರುಗಳಾಗಿ ಶಾಫಿ ಕುಂಡಡ್ಕ, ಶರೀಫ್ ಪೆರ್ಲಂಪಾಡಿ, ಜೊತೆ ಕಾರ್ಯದರ್ಶಿಗಳಾಗಿ ಶಾಫಿ ನೀಟಡ್ಕ, ಝಿಯಾದ್ ದಾಸರಮೂಲೆ ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಎ.ಎಚ್ ಶಾಫಿ ಪೆರ್ಲಂಪಾಡಿ, ಅರ್ಶದ್ ನೀಟಡ್ಕ, ಬದ್ರುದ್ದೀನ್ ಎಕ್ಕಡ್ಕ, ರಿನಾಝ್ ಕುಂಡಡ್ಕ ಅವರನ್ನು ಆಯ್ಕೆ ಮಾಡಲಾಯಿತು. ಅಬೂಬಕ್ಕರ್ ಸಖಾಫಿ ಕುಂಡಡ್ಕ ಸ್ವಾಗತಿಸಿದರು. ನಾಸಿರ್ ಪೆರ್ಲಂಪಾಡಿ ವಂದಿಸಿದರು.