ವಿಟ್ಲಪಡ್ನೂರು ಗ್ರಾಮ ಪಂಚಾಯತ್ ನಲ್ಲಿ ಜನ್ ಸುರಕ್ಷಾ ಯೋಜನೆಗಳ ಅಭಿಯಾನ

0

ವಿಟ್ಲ: ವಿಟ್ಲಪಡ್ನೂರು ಗ್ರಾಮ ಪಂಚಾಯತ್ ನಲ್ಲಿ  ಬ್ಯಾಂಕ್ ಆಫ್ ಬರೋಡದ ಸಹಯೋಗದೊಂದಿಗೆ ಭಾರತದ ಪ್ರಧಾನಮಂತ್ರಿಗಳಾದ  ನರೇಂದ್ರ ಮೋದಿ ಯವರ ಕಲ್ಪನೆಯಿಂದ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಅಂಗವಾಗಿ ಜನ್ ಸುರಕ್ಷಾ ಯೋಜನೆಗಳ ಸ್ಯಾಪ್ಯುಲೇಶನ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ  ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ವಿಟ್ಲಪಡ್ನೂರು ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಜಯಂತ ಪಿ. ಅವರು ಕೇಂದ್ರ ಸರಕಾರದ ಯೋಜನೆಗಳು ದೇಶದ ಪ್ರತಿಯೊಬ್ಬ ಬಡಕುಟುಂಬಗಳಿಗೆ ಆಸರೆಯಾಗಿದ್ದು, ಪ್ರತಿ ಮೂಲೆ ಮೂಲೆ ಜನರಿಗೂ ತಲುಪುವಂತೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಬ್ಯಾಂಕ್ ಆಫ್ ಬರೋಡದ ವ್ಯವಸ್ಥಾಪಕರಾದ ಪ್ರಕಾಶ್ ಎಸ್ , ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ  ರೂಪಕಲಾ, ತೋಟಗಾರಿಕಾ ಇಲಾಖೆಯ ದಿನೇಶ್ ರವರು ಭಾಗವಹಿಸಿ ಯೋಜನೆಗಳ  ಮಾಹಿತಿಯನ್ನು ನೀಡಿದರು. 

ಇದೇ ಸಂದರ್ಭದಲ್ಲಿ ವಿಟ್ಲಪಡ್ನೂರು ಗ್ರಾಮದ ಸೊರಂಗದಮೂಲೆ ನಿವಾಸಿ ನಿತಿನ್ ರವರು ಕ್ರೀಡಾ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಯಿತು.

ಮಾರುಗುಳಿ ನಿವಾಸಿ ಬಾಲಕಿ ಯಜ್ಞ ನೃತ್ಯ ಪ್ರದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ಪಂಚಾಯತ್ ನ ಉಪಾಧ್ಯಕ್ಷರಾದ  ಪ್ರೇಮಲತಾ, ಮಾಜಿ ಅಧ್ಯಕ್ಷರಾದ  ರವೀಶ್ ಶೆಟ್ಟಿ ಕಾರ್ಕಳ, ಮಾಜಿ ಉಪಾಧ್ಯಕ್ಷ ನಾಗೇಶ್ ಕುಮಾರ್, ಸದಸ್ಯರಾದ  ಜಯಲಕ್ಷ್ಮೀ, ಅಮಿತ, ಜಯಭಾರತಿ, ರೇಖಾ, ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಶ್ರೀಶೈಲ ಡೋಣರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಗೆ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ವಾಹನದಲ್ಲಿ ಕೇಂದ್ರ ಸರಕಾರದ ಯೋಜನೆಗಳ ಕುರಿತು ವಿಡಿಯೋ ಪ್ರದರ್ಶನವನ್ನು ಮಾಡಲಾಯಿತು.

LEAVE A REPLY

Please enter your comment!
Please enter your name here