ಪುತ್ತೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ 2024-25ನೇ ಸಾಲಿಗೆ ರಾಜ್ಯ/ಜಿಲ್ಲಾ ಕ್ರೀಡಾ ಶಾಲೆ/ಕ್ರೀಡಾ ವಸತಿ ನಿಲಯಗಳಿಗೆ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ ಡಿ.19 ರಂದು ಬೆಳಿಗ್ಗೆ 10 ಗಂಟೆಗೆ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿದೆ.
ಕಿರಿಯರ ವಿಭಾಗ;
ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಕ್ರೀಡಾ ವಸತಿ ನಿಲಯಕ್ಕೆ ಆಯ್ಕೆ ಬಯಸುವ ಕ್ರೀಡಾಪಟುಗಳು ಪ್ರಸ್ತುತ 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, 2024-25ನೇ ಸಾಲಿಗೆ 5ನೇ ತರಗತಿಗೆ ಪ್ರವೇಶ ಪಡೆಯಲು ಅರ್ಹತೆ ಪಡೆಯಬೇಕು ಹಾಗೂ 01-06-2024ಕ್ಕೆ 11 ವರ್ಷ ಒಳಗಿನವರಾಗಿರಬೇಕು.
ಪ್ರಸ್ತುತ ವರ್ಷ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, 2024-25ನೇ ಸಾಲಿಗೆ 8ನೇ ತರಗತಿಗೆ ಪ್ರವೇಶ ಪಡೆಯಲು ಅರ್ಹತೆ ಪಡೆಯಬೇಕು ಹಾಗೂ ದಿನಾಂಕ: 01-06-2024ಕ್ಕೆ 14 ವರ್ಷ ಒಳಗಿನವರಾಗಿರಬೇಕು. ತಾಲೂಕು ಮಟ್ಟದಲ್ಲಿ ಅರ್ಹತೆ ಪಡೆದು ರಾಜ್ಯ ಮಟ್ಟದ ಕ್ರೀಡಾ ಶಾಲೆ/ನಿಲಯಕ್ಕೆ ಆಯ್ಕೆ ಬಯಸುವವರು ದಿನಾಂಕ: 19-01-2024 ರಂದು ಉಡುಪಿಯಲ್ಲಿ ನಡೆಯುವ ವಿಭಾಗ ಮಟ್ಟದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. ಇಲ್ಲಿ ಅಥ್ಲೆಟಿಕ್ಸ್, ಬಾಸ್ಕೆಟ್‌ಬಾಲ್, ಪುಟ್ಬಾಲ್, ಜಿಮ್ನಾಸ್ಟಿಕ್ಸ್,ಹಾಕಿ, ಜುಡೋ,ವಾಲಿಬಾಲ್,ಮತ್ತು ಕುಸ್ತಿ ಕ್ರೀಡೆಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಹಿರಿಯರ ವಿಭಾಗ:
ಹಿರಿಯ ವಿಭಾಗದ ಕ್ರೀಡಾ ಶಾಲೆ/ ವಸತಿ ನಿಲಯಗಳಿಗೆ ಆಯ್ಕೆ ಬಯಸುವ ಕ್ರೀಡಾಪಟುಗಳು ಪ್ರಸ್ತುತ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, 2024-25ನೇ ಸಾಲಿಗೆ ಪ್ರಥಮ ಪಿ.ಯು.ಸಿ. ಗೆ ಪ್ರವೇಶ ಪಡೆಯಲು ಅರ್ಹತೆ ಪಡೆದು, ದಿನಾಂಕ: 01-06-2024 ಕ್ಕೆ 17 ವರ್ಷ ಒಳಗಿನವರಾಗಿರಬೇಕು. ಹಿರಿಯ ವಿಭಾಗಕ್ಕೆ ಆಯ್ಕೆ ಬಯಸುವ ಕ್ರೀಡಾಪಟುಗಳು ದಿನಾಂಕ: 20-01-2024 ರಂದು ಉಡುಪಿಯಲ್ಲಿ ನಡೆಯುವ ವಿಭಾಗ ಮಟ್ಟದ ಆಯ್ಕೆ ಪ್ರಕ್ರಿಯೆಯಲ್ಲಿ ನೇರವಾಗಿ ಭಾಗವಹಿಸಬೇಕು.
ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ದೃಢೀಕೃತ ಜನನ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ತರಬೇಕು. ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ತಾಲ್ಲೂಕು ಕ್ರೀಡಾಂಗಣ ಕೊಂಬೆಟ್ಟು ಅಥವಾ ಮೊಬೈಲ್ 9164502107 ಸಂಪರ್ಕಿಸುವಂತೆ ಎಂದು ಪುತ್ತೂರು ತಾಲ್ಲೂಕು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮೇಲ್ವಿಚಾರಕರಾದ ಶ್ರೀಕಾಂತ್ ಬಿರಾವು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.