ಮಾಡ್ನೂರು ಹಾಲು ಉತ್ಪಾದಕರ ಸಹಕಾರ ಸಂಘದ ಒಟ್ಟು 13 ಸ್ಥಾನಗಳಲ್ಲಿ 3 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, ಉಳಿದ 10 ಸ್ಥಾನಗಳಿಗೆ ದ.18ರಂದು ಬೆಳಿಗ್ಗೆ ಗಂಟೆ 9ರಿಂದ ಅಪರಾಹ್ನ 2 ಗಂಟೆಯವರೆಗೆ ಸಂಘದ ಆವರಣದಲ್ಲಿ ಚುನಾವಣೆ ನಡೆದು ಬಳಿಕ ಮತ ಎಣಿಕೆಯಾಗಿ ಫಲಿತಾಂಶ ಘೋಷಣೆಯಾಗಲಿದೆ. ಸಹಕಾರ ಅಭಿವೃದ್ಧಿ ಅಧಿಕಾರಿ ಶಿವಲಿಂಗಯ್ಯ ಎಂ ರವರು ರಿಟರ್ನಿಂಗ್ ಅಧಿಕಾರಿಯಾಗಿ ಚುನಾವಣಾ ಕರ್ತವ್ಯ ನಿರ್ವಹಿಸಲಿದ್ದಾರೆ.
ಕಾವು: ಮಾಡ್ನೂರು ಹಾಲು ಉತ್ಪಾದಕರ ಸಹಕಾರ ಸಂಘದ ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿ ರಚನೆಗೆ ಚುನಾವಣೆ ನಿಗದಿಯಾಗಿದ್ದು, ಒಟ್ಟು 13 ಸ್ಥಾನಗಳಲ್ಲಿ 3 ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದೆ. ಉಳಿದ 10 ಸ್ಥಾನಗಳಿಗೆ 19 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
3 ಸ್ಥಾನಕ್ಕೆ ಅವಿರೋಧ ಆಯ್ಕೆ: ಆಡಳಿತ ಮಂಡಳಿಯ ಒಟ್ಟು 13 ಸ್ಥಾನಗಳಲ್ಲಿ 3 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಪರಿಶಿಷ್ಟ ಜಾತಿ ಮೀಸಲು ಸ್ಥಾನಕ್ಕೆ ಹಾಲಿ ನಿರ್ದೇಶಕಿ ಚಂದ್ರಾವತಿ ಮೇಲ್ಪಾದೆ, ಹಿಂದುಳಿದ ವರ್ಗ ಬಿ ಮೀಸಲು ಸ್ಥಾನಕ್ಕೆ ಹಾಲಿ ನಿರ್ದೇಶಕ ಜಗನ್ನಿವಾಸ ಗೌಡ ನಿಧಿಮುಂಡ, ಹಿಂದುಳಿದ ವರ್ಗ ಎ ಮೀಸಲು ಸ್ಥಾನಕ್ಕೆ ಹಾಲಿ ನಿರ್ದೇಶಕ ಸುದೀಶ್ ಬೋರ್ಕರ್‌ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
10 ಸ್ಥಾನಗಳಿಗೆ 19 ಅಭ್ಯರ್ಥಿಗಳು ಅಂತಿಮ ಕಣದಲ್ಲಿ: ಆಡಳಿತ ಮಂಡಳಿಯ 10 ಸ್ಥಾನಗಳಿಗೆ 19 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ, 7 ಸಾಮಾನ್ಯ ಸ್ಥಾನಕ್ಕೆ 13 ಅಭ್ಯರ್ಥಿಗಳು, 2 ಮಹಿಳಾ ಮೀಸಲು ಸ್ಥಾನಕ್ಕೆ 4 ಅಭ್ಯರ್ಥಿಗಳು, 1 ಪರಿಶಿಷ್ಠ ಪಂಗಡ ಮೀಸಲು ಸ್ಥಾನಕ್ಕೆ 2 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
7 ಸಾಮಾನ್ಯ ಸ್ಥಾನಕ್ಕೆ 13 ಅಭ್ಯರ್ಥಿಗಳು: 7 ಸಾಮಾನ್ಯ ಸ್ಥಾನಕ್ಕೆ 13 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು ಅಮ್ಮು ರೈ ಅಂಕೊತ್ತಿಮಾರು, ಇಬ್ರಾಹಿಂ ಮಂಜಕೊಟ್ಯ, ಚಂದ್ರಶೇಖರ ಭಟ್ ಪಳನೀರು, ಚಂದ್ರಶೇಖರ ರಾವ್ ನಿಽಮುಂಡ, ದಿವ್ಯನಾಥ ಶೆಟ್ಟಿ ಕಾವು, ದಿವಾಕರ ಪ್ರಭು ಮುಂಡಕೊಚ್ಚಿ, ನಾರಾಯಣ ರೈ ಮದ್ಲ, ನಾರಾಯಣ ಶರ್ಮ ಬರಕೆರೆ, ಮಹಮ್ಮದ್ ಕುಂಞಿ ಅಶ್ವತ್ತಡಿ, ಮೋಹನ ಮುಖಾರಿ ಡೆಂಬಾಳೆ, ಶ್ರೀಧರ್ ರಾವ್ ನಿಧಿಮುಂಡ, ಸುಜಿತ್ ರೈ ಡೆಂಬಾಳೆ, ಸುರೇಂದ್ರ ಬೋರ್ಕರ್ ನನ್ಯರವರು ಸ್ಪರ್ಧೆಯಲ್ಲಿದ್ದಾರೆ.
2 ಮಹಿಳಾ ಮೀಸಲು ಸ್ಥಾನಕ್ಕೆ 4 ಅಭ್ಯರ್ಥಿಗಳು: 2 ಮಹಿಳಾ ಮೀಸಲು ಸ್ಥಾನಕ್ಕೆ 4 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು ನಿರ್ಮಲಾ ಪೂವಂದೂರು, ಪ್ರೇಮಲತಾ ಸಿ ಎಚ್ ಚಾಕೋಟೆ, ವನಿತಾ ಉಜ್ರುಗುಲಿ, ಸತ್ಯವತಿ ಡೆಂಬಾಳೆರವರು ಸ್ಪರ್ಧೆಯಲ್ಲಿದ್ದಾರೆ.
1 ಪರಿಶಿಷ್ಠ ಪಂಗಡ ಮೀಸಲು ಸ್ಥಾನಕ್ಕೆ 2 ಅಭ್ಯರ್ಥಿಗಳು: 1 ಪರಿಶಿಷ್ಟ ಪಂಗಡ ಮೀಸಲು ಸ್ಥಾನಕ್ಕೆ 2 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು ರಾಮಣ್ಣ ನಾಯ್ಕ ಆಚಾರಿಮೂಲೆ, ಲೀಲಾವತಿ ಟಪ್ಪಾಲುಕಟ್ಟೆಯವರು ಸ್ಪರ್ಧೆಯಲ್ಲಿದ್ದಾರೆ.