ಬಸ್ ತಂಗುದಾಣದ ಲೋಕಾರ್ಪಣೆ ರಸ್ತೆ ಅಭಿವೃದ್ದಿಗೆ ಗುದ್ದಲಿಪೂಜೆ ಬ್ರಹ್ಮಕಲಶೋತ್ಸವದ ಆಮಂತ್ರಣ ಬಿಡುಗಡೆ
ಪುತ್ತೂರು: ಪುತ್ತೂರು ತಾಲೂಕಿನಲ್ಲಿ ವಲ್ಮೀಕ (ಹುತ್ತಕ್ಕೆ ಪೂಜೆ ಸಲ್ಲುವ ವಿಶೇಷ ಹಾಗೂ ಕಾರಣಿಕ ಸಾನಿಧ್ಯ ಕೊಳಿಗೆ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಮಹೋತ್ಸವ ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ಡಿ.18ರಂದು ನಡೆಯಿತು.
ಡಿ.17ರಂದು ರಾತ್ರಿ 8.30ಕ್ಕೆ ವಿಶೇಷ ಕಾರ್ತಿಕ ಪೂಜೆ ನಡೆಯಿತು.
ಡಿ.18ರಂದು ಬೆಳಿಗ್ಗೆ ಗಣಪತಿ ಹವನ, ನಾಗತಂಬಿಲ, ಆಶ್ಲೇಷ ಬಲಿ ಸೇವೆ, ಮಧ್ಯಾಹ್ನ ಚಂಪಾಷಷ್ಠಿ ಮಹೋತ್ಸವ, ಶ್ರೀದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ ಸಾರ್ವಜನಿಕ ಅನ್ನಸಂತರ್ಪಣೆ ಸೇವೆಗಳು ನಡೆಯಿತು.
ಬಸ್ ತಂಗುದಾಣದ ಲೋಕಾರ್ಪಣೆ
ಮಾಡಾವು-ಬೆಳ್ಳಾರೆ ಮುಖ್ಯರಸ್ತೆಯ ಅಂಕತ್ತಡ್ಕದಿಂದ ಮುಂದೆ ನಳೀಲು ಶ್ರೀಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗುವ ರಸ್ತೆಯ ಬದಿಯಲ್ಲಿ ದೇವಸ್ಥಾನದ ವತಿಯಿಂದ ನೂತನವಾಗಿ ನಿರ್ಮಾಣಗೊಂಡ ಬಸ್ ತಂಗುದಾಣವನ್ನು ಶಾಸಕ ಅಶೋಕ್ ಕುಮಾರ್ ರೈ ಅವರು ಲೋಕಾರ್ಪಣೆ ಮಾಡಿದರು.
ರಸ್ತೆ ಅಭಿವೃದ್ದಿಗೆ ಗುದ್ದಲಿ ಪೂಜೆ
ಇದೇ ಸಂದರ್ಭದಲ್ಲಿ ಶಾಸಕರ ಅನುದಾನ 20 ಲಕ್ಷ ರೂ.ಗಳಲ್ಲಿ ಅಭಿವೃದ್ದಿಯಾಗಲಿರುವ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಂಪರ್ಕ ರಸ್ತೆಯ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ಬ್ರಹ್ಮಕಲಶೋತ್ಸವದ ಆಮಂತ್ರಣ ಬಿಡುಗಡೆ
ಬಳಿಕ ದೇವಸ್ಥಾನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ 2024ರ ಫೆ.17ರಿಂದ ಫೆ.24ರವರೆಗೆ ನಡೆಯಲಿರುವ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ ಜಾತ್ರೋತ್ಸವದ ಆಮಂತ್ರಣವನ್ನು ಒಳಮೊಗ್ರು ಕುಕ್ಕುಮುಗೇರು ಶ್ರೀ ಉಳ್ಳಾಕುಲು ದೈವಸ್ಥಾನದ ಆಡಳಿತ ಮೊಕ್ತೇಸರ ಚಿಕ್ಕಪ್ಪ ನಾಯ್ಕ್ ಅರಿಯಡ್ಕ ಅವರು ಬಿಡುಗಡೆಗೊಳಿಸಿ ಮಾತನಾಡಿ, ಶ್ರೀ ದೇವಸ್ಥಾನದ ಬ್ರಹ್ಮಕಲಶ ವಿಜ್ರಂಬಣೆಯಿAದ ನಡೆಯಲಿ.ದೇವಸ್ಥಾನ ಅದ್ಭುತವಾಗಿ ಅಭಿವೃದ್ದಿಯಾಗಿದೆ.ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ನಳೀಲು ಅವರ ನೇತೃತ್ವದಲ್ಲಿ ಮತ್ತೊಮ್ಮೆ ಬ್ರಹ್ಮಕಲಶೋತ್ಸವಕ್ಕೆ ಸಜ್ಜಾಗಿದೆ.ಭಕ್ತಾದಿಗಳು ಸಹಕಾರದಿಂದ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ಸಾಗಲಿ ಎಂದರು.
ಮುಖ್ಯ ಅತಿಥಿ ಪ್ರಗತಿಪರ ಕೃಷಿ ಶರತ್ ಕುಮಾರ್ ರೈ ಕಾವು ಮಾತನಾಡಿ, ನಳೀಲು ದೇವಸ್ಥಾನಕ್ಕೆ ವಿಶೇಷವಾದ ಶಕ್ತಿ ಇದೆ. ದೇವಸ್ಥಾನದ ಭಕ್ತನಾಗಿ ಹಲವು ಬಾರಿ ಕ್ಷೇತ್ರಕ್ಕೆ ಭೇಟಿ ನೀಡಿದ್ದೇನೆ. ದೇವಸ್ಥಾನದಲ್ಲಿ ಹಲವು ಅಭಿವೃದ್ದಿ ಕಾರ್ಯ ನಡೆದಿದೆ.ಎಲ್ಲಾ ವ್ಯವಸ್ಥೆಗಳೂ ಆಗಿದೆ. ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ನಳೀಲು ಅವರು ದೇವಸ್ಥಾನದ ಅಭಿವೃದ್ದಿಗೆ ಸಾಕಷ್ಟು ಶ್ರಮಿಸಿದ್ದಾರೆ. ಮುಂದಿನ ದಿನಗಳಲ್ಲಿ ನಡೆಯುವ ಬ್ರಹ್ಮಕಲಶೋತ್ಸವದಲ್ಲಿ ನಾವೆಲ್ಲರೂ ಕೈ ಜೋಡಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ , ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ ಮಾದರಿಯಾಗಿ ನಡೆಯಬೇಕು. ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಸಂತರ್ಪಣೆಯೂ ಮುಖ್ಯ. ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಬೆಳಿಗ್ಗೆ ,ಸಂಜೆ ಉಪಾಹಾರ ,ಮಧ್ಯಾಹ್ನ ಹಾಗೂ ರಾತ್ರಿ ಅನ್ನಸಂತರ್ಪಣೆ ನಡೆಯಬೇಕು. ಊರವರು ದೇವಸ್ಥಾನಕ್ಕೆ ಆಗಮಿಸುವ ಭಕ್ತರನ್ನು ಚೆನ್ನಾಗಿ ಸತ್ಕರಿಸಬೇಕು. ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು. ಎಲ್ಲಾ ಕಾರ್ಯದಲ್ಲೂ ಭಕ್ತರು ಸಮರ್ಪಣಾ ಭಾವದಿಂದ ಸೇವೆ ಮಾಡಬೇಕು.ನಾನೂ ಜತೆಯಾಗುತ್ತೇನೆ. ಕ್ಷೇತ್ರಕ್ಕೆ ಆರ್ಥಿಕ ಕ್ರೋಢೀಕರಣವೂ ಮುಖ್ಯ. ಈ ನಿಟ್ಟಿನಲ್ಲಿ ಭಕ್ತರು ಕೈ ಜೋಡಿಸಬೇಕು. ಒಟ್ಟಿನಲ್ಲಿ ಬ್ರಹ್ಮಕಲಶೋತ್ಸವ ಮಾದರಿಯಾಗಿ ನಡೆಯಬೇಕು ಎಂದು ಅಶೋಕ್ ಕುಮಾರ್ ರೈ ಹೇಳಿದರು.
ಊರಿನ ಭಕ್ತಾದಿಗಳೆಲ್ಲರೂ ತಮ್ಮ ನೆಂಟರು ಹಾಗೂ ಬಂಧುಗಳಿರುವ ಊರಿನಲ್ಲೂ ಆಮಂತ್ರಣ ನೀಡಬೇಕು. ಬೇರೆ ಬೇರೆ ಕಡೆ ಬ್ರಹ್ಮಕಲಶೋತ್ಸವದ ಹೋರ್ಡಿಂಗ್ಅಳವಡಿಸುವ ಮೂಲಕ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವಂತೆ ಮಾಡಬೇಕು ಹಾಗೂ ಎಲ್ಲಾ ದೇವಸ್ಥಾನಗಳಿಗೂ ತೆರಳಿ ಆಮಂತ್ರಣ ನೀಡಬೇಕು. ಒಟ್ಟಿನಲ್ಲಿ ಬ್ರಹ್ಮಕಲಶೋತ್ಸವ ಯಶಸ್ವಿ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸಬೇಕು ಎಂದರು.
ವೇದಿಕೆಯಲ್ಲಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ,ದ.ಕ.ಹಾಲು ಒಕ್ಕೂಟದ ಉಪಾಧ್ಯಕ್ಷ ಎಸ್.ಬಿ.ಜಯರಾಮ ರೈ , ಪ್ರಗತಿಪರ ಕೃಷಿಕ ಸಂತೋಷ್ ಕುಮಾರ್ರೈ ಇಳಂತಾಜೆ ,ದೇವಸ್ಥಾನದ ಹಿರಿಯ ಮೊಕ್ತೇಸರರಾದ ಎನ್. ಚಂದ್ರಶೇಖರ ರೈ ನಳೀಲು, ನಾರಾಯಣ ರೈ ಮೊದೆಲ್ಕಾಡಿ ಉಪಸ್ಥಿತರಿದ್ದರು.
ದೇವಸ್ಥಾನದ ಆಡಳಿತ ಮೊಕ್ತೇಸರ ,ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ನಳೀಲು ಸ್ವಾಗತಿಸಿ , ಪ್ರವೀಣ್ ಚೆನ್ನಾವರ ವಂದಿಸಿದರು. ಶಶಿಕುಮಾರ್ ಬಿ.ಎನ್ಕಾರ್ಯಕ್ರಮ ನಿರೂಪಿಸಿದರು. ಪ್ರವೀಣ್ ರೈ ನಡುಕೂಟೇಲು, ಸುಧಾಕರ ರೈ ಪಿ.ಎಸ್.ಸಹಕರಿಸಿದರು.
ಕಾರ್ಯಕ್ರಮದಲ್ಲಿ ದೇವಸ್ಥಾನದ ಅಭಿವೃದ್ದಿ ಸಮಿತಿ ಕಾರ್ಯಾಧ್ಯಕ್ಷ ಅರುಣ್ಕುಮಾರ್ರೈ ನಳೀಲು , ಪ್ರಧಾನ ಕಾರ್ಯದರ್ಶಿ ಸತೀಶ್ ರೈ ನಳೀಲು,ಕೋಶಾಧಿಕಾರಿ ಮೋಹನದಾಸ ರೈ ನಳೀಲು, ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷರಾದ ವಿಲಾಸ್ ರೈ ಪಾಲ್ತಾಡು ,ವಿನೋದ್ ರೈ ಪಾಲ್ತಾಡು ,ಕಿಶೋರ್ ಕುಮಾರ್ರೈ ನಳೀಲು ,ಸಂಜೀವ ಗೌಡ ಪಾಲ್ತಾಡಿ ,ರಘುನಾಥ ರೈ ನಡುಕೂಟೇಲು , ಪ್ರಧಾನ ಕಾರ್ಯದರ್ಶಿ ಸುರೇಶ್ಚಂದ್ರ ರೈ ಪಾಲ್ತಾಡಿ , ಕಾರ್ಯದರ್ಶಿ ಪ್ರವೀಣ್ ರೈ ನಳೀಲು , ಜತೆ ಕಾರ್ಯದರ್ಶಿ ಡಾ.ಶುಬ್ ದೀಪ್ ರೈ ಕೋಲ್ಪೆಗುತ್ತು ,ಡಾ.ಸುಚೇತಾ ಜೆ.ಶೆಟ್ಟಿ , ಸ್ವಾಗತ ಸಮಿತಿ ಸಂಚಾಲಕ ಸುನೀಲ್ ರೈ ಪಾಲ್ತಾಡು, ಆಮಂತ್ರಣಾ ವಿತರಣ ಸಮಿತಿ ಸಂಚಾಲಕ ಸುಂದರ ಪೂಜಾರಿ ಮಣಿಕ್ಕರ,ವೈದಿಕ ಸಮಿತಿ ಸಂಚಾಲಕ ಹರಿಕೃಷ್ಣ ಭಟ್ ಬರೆಮೇಲು,ಅತಿಥಿ ಸತ್ಕಾರ ಸಮಿತಿ ಸಂಚಾಲಕ ರಾಮಣ್ಣ ರೈ ಬಾಕಿಜಾಲು ,ಹೊರೆಕಾಣಿಕೆ ಸಮಿತಿ ಸಂಚಾಲಕ ತಾರಾನಾಥ ಬೊಳಿಯಾಲ, ಪ್ರಚಾರ ಮಾಧ್ಯಮ ಸಮಿತಿ ಸಂಚಾಲಕ ಸುಧಾಕರ ರೈ ಪಿ.ಎಸ್., ಅಲಂಕಾರ ಸಮಿತಿ ಸಂಚಾಲಕ ದೇವದಾಸ ರೈ ಕೆಬ್ಲಾಡಿ,ಸಾಂಸ್ಕೃತಿಕ ಕಾರ್ಯಕ್ರಮ ಸಂಚಾಲಕಿ ಡಾ.ವೀಣಾ ಸಂತೋಷ್ ರೈ ನಳೀಲು, ಭಜನಾ ಸಮಿತಿ ಸಂಚಾಲಕ ಧನಂಜಯ ಕಾಯರಗುರಿ,ಅನ್ನಸಂತರ್ಪಣೆ ಸಮಿತಿ ಸಂಚಾಲಕ ತ್ಯಾಂಪಣ್ಣ ರೈ ,ಉಗ್ರಾಣ ಸಮಿತಿ ಸಂಚಾಲಕ ಜಗನ್ನಾಥ ರೈ ಮಣಿಕ್ಕರ,ಕಾರ್ಯಾಲಯ ಸಮಿತಿ ಸಂಚಾಲಕ ಸುರೇಶ್ ರೈ ವಿಟ್ಲ ಕೊಲ್ಯ ,ಸ್ವಚ್ಚತಾ ಸಮಿತಿ ಸಂಚಾಲಕ ಉದಯ ಗೌಡ ,ಸ್ವಯಂ ಸೇವಕ ಸಮಿತಿ ಸಂಚಾಲಕರಾದ ವಿದ್ಯಾಧರ ಗೌಡ ಪಾರ್ಲ,ಅಮರನಾಥ ರೈ ಬಾಕಿಜಾಲು, ಮಹಿಳಾ ಸ್ವಯಂ ಸೇವಕ ಸಮಿತಿ ಸಂಚಾಲಕಿ ಸುಧಾಮಣಿ ರೈ ನಳೀಲು, ವಾಹನ ನಿರ್ವಹಣಾ ಸಮಿತಿ ಸಂಚಾಲಕ ವಿನೋದ್ ಗೌಡ ಮೊದಲಾದವರಿದ್ದರು.
2024 ರ ಫೆ.17ರಿಂದ ಫೆ.24 ರವರೆಗೆ ಬ್ರಹ್ಮಕಲಶ
ಶ್ರೀ ಕ್ಷೇತ್ರದಲ್ಲಿ 2004ರ ಬ್ರಹ್ಮಕಲಶೋತ್ಸವದ ಬಳಿಕ ದೇವಸ್ಥಾನವು ವೇಗದಲ್ಲಿ ಅಭಿವೃದ್ಧಿಯನ್ನು ಕಂಡಿದೆ. ದೇವಸ್ಥಾನದಲ್ಲಿ ಅತಿಥಿ ಗೃಹ, ಅರ್ಚಕರ ಮನೆ, ದೇವಸ್ಥಾನದ ಸುತ್ತ ಇಂಟರ್ಲಾಕ್ ಅಳವಡಿಕೆ, ದೇವಸ್ಥಾನದ ಸುತ್ತ ಶೀಟ್ ಅಳವಡಿಕೆ, ನೂತನ ವಸಂತ ಮಂಟಪ ನಿರ್ಮಾಣ , ದೇವಸ್ಥಾನದ ಗರ್ಭಗುಡಿಗೆ ಹಾಗೂ ನಮಸ್ಕಾರ ಮಂಟಪಕ್ಕೆ ತಾಮ್ರದ ಹೊದಿಕೆ ಅಳವಡಿಸಲಾಗಿದೆ.ಮಹಾದ್ವಾರ ನಿರ್ಮಾಣ ಪ್ರಗತಿಯಲ್ಲಿದೆ. ಅಲ್ಲದೇ ಇನ್ನೂ ಅನೇಕ ಅಭಿವೃದ್ದಿ ಕಾರ್ಯಗಳು ನಡೆಯಲಿದೆ.ಬ್ರಹ್ಮಕಲಶೋತ್ಸವವು 2024ರ ಫೆ.17ರಿಂದ ಫೆ.24 ರವರೆಗೆ ನಡೆಯಲಿದೆ. ಭಕ್ತಾದಿಗಳು ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿ.
-ಸಂತೋಷ್ ಕುಮಾರ್ ರೈ ನಳೀಲು