ನೆಲ್ಯಾಡಿ: ಬೆಥನಿ ವಿದ್ಯಾಸಂಸ್ಥೆಗಳು ನೆಲ್ಯಾಡಿ ಇದರ ಆಶ್ರಯದಲ್ಲಿ ಕಲ್ಪನೆಯ ಅದ್ಭುತಗಳು ಎಂಬ ಧ್ಯೇಯದೊಂದಿಗೆ ಕಲೆ, ಜೀವನ ಕೌಶಲ್ಯ, ವಿಜ್ಞಾನ ಮತ್ತು ಸಂಸ್ಕೃತಿಯ ಪ್ರದರ್ಶನ ’ಸೃಷ್ಟಿ 2023’ ಡಿ.21 ಮತ್ತು 22ರಂದು ನೆಲ್ಯಾಡಿ ಬೆಥನಿ ವಿದ್ಯಾಸಂಸ್ಥೆಯಲ್ಲಿ ನಡೆಯಲಿದೆ.
ಡಿ.21ರಂದು ಬೆಳಿಗ್ಗೆ 9ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ. ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್, ಸುಳ್ಯ ಶಾಸಕಿ ಕು| ಭಾಗೀರಥಿ ಮುರುಳ್ಯ ಉದ್ಘಾಟಿಸಲಿದ್ದಾರೆ. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್., ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ನೆಲ್ಯಾಡಿ ಬೆಥನಿ ವಿದ್ಯಾಸಂಸ್ಥೆ ಸಂಚಾಲಕರಾದ ರೆ.ಫಾ.ಜೈಸನ್ ಸೈಮನ್ ಒಐಸಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಡಿ.22ರಂದು ಮಧ್ಯಾಹ್ನ 2 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು ನೈರುತ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಅತಿಥಿಯಾಗಿ ಭಾಗವಹಿಸಲಿದ್ದಾರೆ. ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆ ಸಂಚಾಲಕ ರೆ.ಫಾ.ನೋಮಿಸ್ ಕುರಿಯಾಕೋಸ್, ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಸಲಾಂ ಬಿಲಾಲ್, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಮಿತಿ ಮಾಜಿ ಸದಸ್ಯ ಡಾ.ಅನಿಲ್ ಈಶೋ, ನೆಲ್ಯಾಡಿ ಗ್ರಾಮಕರಣಿಕರಾದ ಲಾವಣ್ಯ ಪ್ರವೀಣ್, ಜಿ.ಪಂ.ಮಾಜಿ ಸದಸ್ಯ ಸರ್ವೋತ್ತಮ ಗೌಡ, ತಾ.ಪಂ.ಮಾಜಿ ಸದಸ್ಯೆ ಉಷಾ ಅಂಚನ್, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್ ಉಪಸ್ಥಿತಿ ಇರಲಿದ್ದಾರೆ. ಬೆಥನಿ ವಿದ್ಯಾಸಂಸ್ಥೆ ಸಂಚಾಲಕರಾದ ರೆ.ಫಾ.ಜೈಸನ್ ಸೈಮನ್ ಒಐಸಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ವಿವಿಧ ಗೇಮ್ಸ್/ಸ್ಟಾಲ್:
ಎರಡು ದಿನ ನಡೆಯಲಿರುವ ಕಾರ್ಯಕ್ರಮದಲ್ಲಿ ವಿವಿಧ ಗೇಮ್ಸ್, ಸ್ಟಾಲ್‌ಗಳು ಇರಲಿವೆ. ಸಂಸ್ಥೆಯ ವಿದ್ಯಾರ್ಥಿಗಳೇ ಇದನ್ನು ನಡೆಸಿಕೊಡಲಿದ್ದಾರೆ. ಫಿಶ್ ಇನ್ ದ ಬೌಲ್, ಗೋಲ್ ಪಾಯಿಂಟ್, ಲೈಟ್‌ದ ಕ್ಯಾಂಡಲ್ ಸೇರಿದಂತೆ ವಿವಿಧ ಆಟಗಳು ಗಮನ ಸೆಳೆಯಲಿದೆ. ಐಸ್‌ಕ್ರೀಮ್, ಕೇಕ್‌ಶಾಪ್, ಪ್ಲಾಸ್ಟಿಕ್ ಮತ್ತು ಟೆಕ್ಸ್‌ಟೈಲ್ಸ್, ವೆಜಿಟೇಬಲ್, ಫ್ರೂಟ್ಸ್, ನರ್ಸರಿ ಸ್ಟಾಲ್‌ಗಳು ಸಹ ಇರಲಿದೆ. ಡಿ.22ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 3ರ ತನಕ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ನಡೆಯಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ವಿಶೇಷ ಆಕರ್ಷಣೆಯಾಗಿ ತಾರಾಲಯ:
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಪ್ಲಾನೆಟೋರಿಯಂ ಇರಲಿದೆ. ಅಲ್ಲದೇ ವಿವಿಧ ವಸ್ತು ಪ್ರದರ್ಶನಗಳೂ ಇರಲಿದ್ದು ಎರಡು ದಿನ ಕಲೆ, ಜೀವನ ಕೌಶಲ್ಯ, ವಿಜ್ಞಾನ ಮತ್ತು ಸಂಸ್ಕೃತಿಯ ಪ್ರದರ್ಶನ ಆಗಲಿದೆ ಎಂದು ಪ್ರಕಟಣೆ ತಿಳಿಸಿದೆ.