ಕೊಕ್ಕಡದಲ್ಲಿ ‘ಮುಸಾಬಖ’ ಕಲಾ ಸಾಹಿತ್ಯ ಸ್ಪರ್ಧೆ

0

ಉಪ್ಪಿನಂಗಡಿ: ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಮೀನ್ ಉಪ್ಪಿನಂಗಡಿ ರೇಂಜ್ ಹಾಗೂ ಮದರಸಾ ಮೆನೇಜ್‌ಮೆಂಟ್ ಉಪ್ಪಿನಂಗಡಿ ರೇಂಜ್ ಇದರ ವತಿಯಿಂದ ದಕ್ಷಿಣ ಭಾರತದ ಅತಿ ದೊಡ್ಡ 17ನೇ ಕಲಾ ಸಾಹಿತ್ಯ ಸ್ಪರ್ಧೆ ‘ಮುಸಾಬಖ೨ಕೆ 23’ ಕೊಕ್ಕಡದ ಖುವ್ವತುಲ್ ಇಸ್ಲಾಂ ಮದ್ರಸದ ಸಭಾಂಗಣದಲ್ಲಿ ನಡೆಯಿತು.


ಮದ್ರಸಾ ಮೆನೇಜ್‌ಮೆಂಟ್ ಅಧ್ಯಕ್ಷ ಅಬ್ದುರ್ರಹ್ಮಾನ್ ಹಾಜಿ ಕೊಲ್ಲೆಜಾಲ್ ಧ್ಜಜಾರೋಹಣಗೈದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕೊಕ್ಕಡ ಜುಮಾ ಮಸೀದಿ ಅಧ್ಯಕ್ಷ ಹೈದರ್ ಎಂ.ಎಸ್. ಕೊಕ್ಕಡ ವಹಿಸಿದ್ದರು. ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್‌ನ ತಪಾಸಣಗಾರ ಅಬ್ದುಲ್ ರಶೀದ್ ಮುಸ್ಲಿಯಾರ್ ದುವಾ ನೆರವೇರಿಸಿದರು. ಸ್ಥಳೀಯ ಖತೀಬ್ ಅಬ್ದುಲ್ ಸಮದ್ ಬಾಖವಿ ಕಾರ್ಯಕ್ರಮ ಉದ್ಘಾಟಿಸಿದರು.

ಮುಸಾಬಖ ಸ್ವಾಗತ ಸಮಿತಿಯ ಜನರಲ್ ಕನ್ವೀನರ್ ತಮೀಮ್ ಅನ್ಸಾರಿ ಪಟ್ರಮೆ ಸ್ವಾಗತಿಸಿದರು.ವಿದ್ಯಾರ್ಥಿಗಳ ಆರು ವಿಭಾಗಗಳ ಸ್ಪರ್ಧಾ ಕಾರ್ಯಕ್ರಮ ನಾಲ್ಕು ವೇದಿಕೆಗಳಲ್ಲಿ ನಡೆಯಿತು. ಮಧ್ಯಾಹ್ನ ಲುಹ್ರ್ ನಮಾಝ್‌ ಬಳಿಕ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕೇಂದ್ರ ಮುಶಾವರ ಸದಸ್ಯ ಶೈಖುನಾ ಅಬ್ದುಲ್ ಖಾದರ್ ಮುಸ್ಲಿಯಾರ್ ಅಲ್ ಖಾಸಿಮಿ ಬಂಬ್ರಾನರವರ ನೇತೃತ್ವದಲ್ಲಿ, ಅಗಲಿದ ಸಮಸ್ತ ನೇತಾರರ ಅನುಸ್ಮರಣಾ ಕಾರ್ಯಕ್ರಮ ನಡೆಯಿತು.

ಬಳಿಕ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಉಪ್ಪಿನಂಗಡಿ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಕೆ.ಎಚ್. ಅಶ್ರಫ್ ಹನೀಫಿ ಕರಾಯ ವಹಿಸಿದ್ದರು. ಸೈಯ್ಯದ್ ಅನಾಸ್ ಅನಸ್ ತಂಙಳ್ ಕರ್ವೇಲು ದುವಾ ನೆರವೇರಿಸಿದರು. ಬೆಳ್ತಂಗಡಿ ದಾರುಸ್ಸಲಾಂ ಸ್ಥಾಪಕ ಪ್ರಾಂಶುಪಾಲರಾದ ಕರಾಯ ಜುಮಾ ಮಸೀದಿಯ ಮುದರ್ರಿಸ್ ಅಸೈಯ್ಯದ್ ಜಿಫ್ರಿ ತಂಙಳ್ ಉದ್ಘಾಟನೆ ನೆರವೇರಿಸಿದರು. ಉಪ್ಪಿನಂಗಡಿ ರೇಂಜ್ ಮುಖ್ಯ ಕಾರ್ಯದರ್ಶಿ ಅಬ್ದುಲ್ ಜಬ್ಬಾರ್ ಅಸ್ಲಮಿ ಸ್ವಾಗತಿಸಿದರು.

ಮುಖ್ಯ ಅತಿಥಿಗಳಾಗಿ ಕೋಲ್ಪೆ ಮುದರ್ರಿಸ್ ಮುಹಮ್ಮದ್ ಶರೀಫ್ ದಾರಿಮಿ ಅಲ್ ಹೈತಮಿ ಕೋಲ್ಪೆ, ಆಡಳಿತ ಸಮಿತಿ ಅಧ್ಯಕ್ಷ ಕೆ.ಕೆ. ಅಬೂಬಕ್ಕರ್, ಕೊಕ್ಕಡ ಆಡಳಿತ ಸಮಿತಿ ಅಧ್ಯಕ್ಷ ಎಂ.ಎಸ್. ಹೈದರ್, ಮುಸಾಬಖ ಸ್ವಾಗತ ಸಮಿತಿ ಉಸ್ತುವಾರಿಗಳಾದ ಇಸ್ಮಾಯಿಲ್ ತಂಙಳ್ ಬೋಳದ ಬೈಲ್, ಖತೀಬರಾದ ಮುಸ್ತಫ ಫೈಝಿ ಮಲ್ಲಿಗೆಮಜಲು, ಹಾಶಿಮ್ ಫೈಝಿ ಉಪ್ಪಿನಂಗಡಿ, ಮದ್ರಸ ಮೆನೇಜ್‌ಮೆಂಟ್ ಕಾರ್ಯದರ್ಶಿ ಎಚ್. ಯೂಸುಫ್ ಹಾಜಿ, ಮುಸಾಬಖ ಸ್ವಾಗತ ಸಮಿತಿಯ ಉಸ್ತುವಾರಿ ಯೂಸುಫ್ ಕೊಕ್ಕಡ, ಕೊಕ್ಕಡ ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಅನ್ಸಾರ್ ಬಂಗೇರಕಟ್ಟೆ, ಆಡಳಿತ ಸಮಿತಿ ಅಧ್ಯಕ್ಷ ಅಬ್ದುಲ್ ಹಕೀಂ ಬೋಳದ ಬೈಲ್, ಯೂನಿಟ್ ಅಧ್ಯಕ್ಷ ಅಶ್ರಫ್ ಬಿ.ಕೆ. ಬೋಳದಬೈಲ್, ಮುಖ್ಯ ಕಾರ್ಯದರ್ಶಿ ಅಬ್ದುರ್ರಹ್ಮಾನ್, ಎಸ್ಕೆಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲೆ ಕಾರ್ಯದರ್ಶಿ ಹಾರಿಸ್ ಕೌಸರಿ, ಪಟ್ರಮೆ ಆಡಳಿತ ಸಮಿತಿ ಅಧ್ಯಕ್ಷ ಮುಹಮ್ಮದ್ ಶರೀಫ್, ಮುಸಾಬಖ ಸ್ವಾಗತ ಸಮಿತಿ ಕೋಶಾಧಿಕಾರಿ ಉಮರ್ ಬೈಲಂಗಡಿ, ಎಸ್ಕೆಸ್ಸೆಸ್ಸೆಫ್ ಕೊಕ್ಕಡ ಶಾಖೆ ಅಧ್ಯಕ್ಷ ಅಶ್ರಫ್ ಅಲ್ಲಿಂಗೇರಿ, ಎಸ್ಕೆಎಸ್ಸೆಸ್ಸೆಫ್ ಮಲ್ಲಿಗೆಮಜಲು ಶಾಖೆಯ ಅಧ್ಯಕ್ಷರಾದ ಕರೀಂ, ಕೊಕ್ಕಡ ಶಾಖೆ ಯಂಗ್ ಮೆನ್ಸ್ ಕಾರ್ಯದರ್ಶಿ ಮುಸ್ತಾಫ ಸೌತಡ್ಕ, ಕೊಕ್ಕಡ ಯಂಗ್‌ಮೆನ್ಸ್ ಅಧ್ಯಕ್ಷ ರಝಾಕ್ ಎಂ.ಎಚ್., ಕಾರ್ಯದರ್ಶಿ ನೌಫಲ್ ಭಾಗವಹಿಸಿದ್ದರು.


ಸ್ಪರ್ಧೆಯಲ್ಲಿ ಸಮಗ್ರ ಚಾಂಪಿಯನ್ ಆಗಿ ಬಂಗೇರಕಟ್ಟೆಯ ನೂರುಲ್ ಹುದಾ ಮದ್ರಸ, ಪ್ರಥಮ ರನ್ನರ್ ಆಫ್ ಆಗಿ ಉಪ್ಪಿನಂಗಡಿಯ ತನ್ವೀರುಲ್ ಇಸ್ಲಾಂ ಮದ್ರಸ, ದ್ವಿತೀಯ ರನ್ನರ್ ಆಫ್ ಆಗಿ ನೂರಾನಿಯ ಮದ್ರಸ ಕುದ್ಲೂರು ಹಾಗೂ ಮುಅಲ್ಲಿಂ ವಿಭಾಗದ ಚಾಂಪಿಯನ್ ಆಗಿ ಬಂಗೇರಕಟ್ಟೆಯ ನೂರುಲ್ ಹುದಾ ಮದ್ರಸ, ರನ್ನರ್‌ಆಪ್ ಆಗಿ ಕುದ್ಲೂರಿನ ನೂರಾನಿಯ ಮದ್ರಸ ಪ್ರಶಸ್ತಿ ಪಡೆದುಕೊಂಡವು. ಉಪ್ಪಿನಂಗಡಿ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಮದ್ರಸ ವ್ಯಾಪ್ತಿಯಲ್ಲಿ ಸತತವಾಗಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿದ ಉಸ್ತಾದರನ್ನು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ಹಲವಾರು ಸಾಧಕ ಗಣ್ಯರನ್ನೂ ಈ ಸಂದರ್ಭ ಸನ್ಮಾನಿಸಲಾಯಿತು.
ಉಪ್ಪಿನಂಗಡಿ ರೇಂಜ್ ಜೊತೆ ಕಾರ್ಯದರ್ಶಿ ಅಬ್ದುಲ್ ಸಮದ್ ಫೈಝಿ ಬಂಗೇರ ಕಟ್ಟೆ ವಂದಿಸಿದರು. ಕುದ್ಲೂರ್‌ನ ಖತೀಬ್ ಹಸನ್ ಅದ್ನಾನ್ ಅನ್ಸಾರಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here