ಪುತ್ತೂರು: ಸಹ್ಯಾದ್ರಿ ಕನ್ನಡ ಸಂಘ ಕೈಗಾ ಇದರ ಕರ್ನಾಟಕ ಸಂಭ್ರಮ-50 ಸಲುವಾಗಿ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದಡಿ ಪುತ್ತೂರಿನ ನೃತ್ಯೋಪಾಸನಾ ಕಲಾ ಕೇಂದ್ರ ಇದರ
ಕಲಾ ತಂಡದಿಂದ ‘ನೃತ್ಯೋಹಂ’ ವೈವಿಧ್ಯಮಯ ಶಾಸ್ತ್ರೀಯ ನೃತ್ಯ ಪ್ರದರ್ಶನ ಭಾನುವಾರ ಉತ್ತರ ಕನ್ನಡ ಜಿಲ್ಲೆಯ ಕೈಗಾ ವಸತಿ ಸಂಕೀರ್ಣದ ಶಾಲಾ ಕ್ರೀಡಾಂಗಣದ ರಂಗ ಮಂಟಪದಲ್ಲಿ ನಡೆಯಿತು.
ಕಲಾ ಕೇಂದ್ರದ ನೃತ್ಯಗುರು, ವಿದುಷಿ ಶಾಲಿನಿ ಆತ್ಮಭೂಷಣ್ ನಿರ್ದೇಶನದಲ್ಲಿ ನೃತ್ಯ ಕೇಂದ್ರದ ವಿದ್ಯಾರ್ಥಿಗಳು ವಿಶೇಷ ಶಾಸ್ತ್ರೀಯ ನೃತ್ಯ ಪ್ರದರ್ಶಿಸಿದರು. ಈ ಸಂದರ್ಭ ಸಹ್ಯಾದ್ರಿ ಕನ್ನಡ ಸಂಘದ ಅಧ್ಯಕ್ಷ ಜಿತೇಂದ್ರ ಕುಮಾರ್, ಪ್ರಧಾನ ಕಾರ್ಯದರ್ಶಿ ಸಂತೋಷ್ ಮೆಹಂದಳೆ, ಸಾಂಸ್ಕೃತಿಕ ಕಾರ್ಯದರ್ಶಿ ಶಿವಕುಮಾರ್ ಉಪಸ್ಥಿತರಿದ್ದರು.