ಉಜಿರೆ ಗ್ರಾಮ ಪಂಚಾಯತಿಯಿಂದ ಡಾ.ರವೀಶ್ ಪಡುಮಲೆಗೆ ಸನ್ಮಾನ

0

ಉಜಿರೆ:ಕೇಂದ್ರದ ಯೋಜನೆಗಳನ್ನು ಗ್ರಾಮ ಪಂಚಾಯತ್ ಮಟ್ಟದಲ್ಲಿ ಪರಿಚಯಿಸುವ ಸಲುವಾಗಿ ಆಯೋಜಿಸಿರುವ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಉಜಿರೆಗೆ ಆಗಮಿಸಿತು. ಈ ಸಂದರ್ಭದಲ್ಲಿ ಜಾನಪದ ಕ್ಷೇತ್ರದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ದೈವ ನರ್ತಕ ಹಾಗೂ ಸಿವಿಲ್ ಇಂಜಿನಿಯರ್ ಡಾಕ್ಟರ್ ರವೀಶ್ ಪಡುಮಲೆ ರವರಿಗೆ ಗ್ರಾಮ ಪಂಚಾಯತ್ ವತಿಯಿಂದ ಸನ್ಮಾನ ಮಾಡಿ ಗೌರವಿಸಲಾಯಿತು.ಕೇಂದ್ರದ ಯೋಜನೆಗಳನ್ನು ಗ್ರಾಮ ಪಂಚಾಯತ್ ಮಟ್ಟದಲ್ಲಿ ಪರಿಚಯಿಸುವ ಸಲುವಾಗಿ ಆಯೋಜಿಸಿರುವ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಸಂದರ್ಭದಲ್ಲಿ ಸಮಾಜದಲ್ಲಿ ಗುರುತಿಸಿಕೊಂಡಿರುವ ಹಲವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್, ಪಂಚಾಯತ್ ಅಧ್ಯಕ್ಷರಾದ ಉಷಾ ಕಾರಂತ್, ಪಂಚಾಯತ್ , ಸದಸ್ಯರುಗಳು ಮತ್ತು ಬೇರೆ ಬೇರೆ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ತುಳುನಾಡಿನ ದೈವಾರಾಧನೆಯ ನರ್ತನ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಮೂಲ ಪದ್ದತಿಗೆ ಮೌಲ್ಯವನ್ನು ಕೊಟ್ಟು, ಅದನ್ನು ಉಳಿಸಿ ಬೆಳೆಸುತ್ತಾ ಬರುವ ರವೀಶ್ ರವರು ದೈವನರ್ತಕ ಸಮುದಾಯದಲ್ಲಿ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಡಾಕ್ಟರೇಟ್ ಪಡೆದ ಮೊದಲ ದೈವನರ್ತಕರಾಗಿದ್ದಾರೆ.

LEAVE A REPLY

Please enter your comment!
Please enter your name here