ಡಾಂಬಾರ್‌ಗೆ ಸಿಲುಕಿದ ನಾಗರ ಹಾವಿನ ರಕ್ಷಣೆ ಮಾಡಿದ ಉರಗ ಪ್ರೇಮಿ ತೇಜಸ್

0

ಪುತ್ತೂರು: ನೆಹರುನಗರ ರಕ್ತೇಶ್ವರಿ ವಠಾರದ ಸಮೀಪ ಡಾಂಬಾರು ಶೇಖರಣಾ ಸ್ಥಳದಲ್ಲಿ ಡಾಂಬಾರ್‌ಗೆ ಸಿಲುಕಿ ನರಳಾಡುತ್ತಿದ್ದ ನಾಗರ ಹಾವೊಂದನ್ನು ಉರಗ ಪ್ರೇಮಿ ತೇಜಸ್ ಕುಮೇರಡ್ಕ ಅವರು ರಕ್ಷಣೆ ಮಾಡಿ ರಕ್ಷಿತಾರಣ್ಯಕ್ಕೆ ಬಿಡುವ ಮೂಲಕ ನಾಗರ ಹಾವಿಗೆ ಜೀವದಾನ ನೀಡಿದ್ದಾರೆ.


ನೆಹರುನಗರ ರಕ್ತೇಶ್ವರಿ ವಠಾರದಲ್ಲಿ ಡಾಂಬಾರು ಶೇಖರಣಾ ಸ್ಥಳದಲ್ಲಿ ಡಾಂಬಾರ್‌ಗೆ ಸಿಲುಕಿ ಒದ್ದಾಡುತ್ತಿದ್ದ ನಾಗರಹಾವೊಂದನ್ನು ಗಮನಿಸಿದ ಸ್ಥಳೀಯರು ಉರಗ ಪ್ರೇಮಿ ತೇಜಸ್ ಅವರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಅಗಮಿಸಿದ ತೇಜಸ್ ಅವರು ನಾಗರ ಹಾವನ್ನು ಡಾಂಬಾರಿನಿಂದ ಪ್ರತ್ಯೇಕಿಸಿ ಬಳಿಕ ಅದನ್ನು ಮನೆಗೆ ಕೊಂಡು ಹೋಗಿ ಅದರ ಚರ್ಮದಿಂದ ಡಾಂಬಾರು ತೆಗೆಯಲು ಎರಡು ದಿನಗಳ ಕಾಲ ಶ್ರಮ ಪಟ್ಟಿದ್ದಾರೆ. ಶುದ್ದ ಕೊಬ್ಬರಿ ಎಣ್ಣೆಯಲ್ಲಿ ಎರಡು ದಿನ ನಾಗರಹಾವನ್ನು ಬಿಟ್ಟು ಬಳಿಕ ಮೆಲ್ಲ ಮೆಲ್ಲನೆ ನಾಗರ ಹಾವಿನ ಚರ್ಮದಿಂದ ಡಾಂಬಾರುನ್ನು ತೆಗೆದಿದ್ದಾರೆ. ಸುಮಾರು 2 ಫೀಟ್ ಉದ್ದದ ನಾಗರ ಹಾವಿನ ಮೇಲಿದ್ದ ಡಾಂಬಾರು ಸಂಪೂರ್ಣ ತೆಗೆದ ಬಳಿಕ ಅದನ್ನು ಸುರಕ್ಷಿತವಾಗಿ ರಕ್ಷಿತಾರಣ್ಯಕ್ಕೆ ಬಿಡುವ ಮೂಲಕ ನಾಗರ ಹಾವಿಗೆ ಮರು ಜೀವ ನೀಡಿದ್ದಾರೆ.

LEAVE A REPLY

Please enter your comment!
Please enter your name here