ಬಡಗನ್ನೂರುಃ ಅರಿಯಾಡ್ಕ ವಲಯದ ಪಡುವನ್ನೂರು ಕಾರ್ಯಕ್ಷೇತ್ರದ ಸರ್ವೋದಯ ಪ್ರೌಢಶಾಲೆ ಸುಳ್ಯಪದವು ಇಲ್ಲಿ ಮಹಿಳಾ ಕಾರ್ಯಕ್ರಮದಡಿಯಲ್ಲಿ ಟ್ಯೂಷನ್ ಕ್ಲಾಸ್ ತರಬೇತಿ ಕಾರ್ಯಕ್ರಮವನ್ನು ಡಿ.20 ರಂದು ಉದ್ಘಾಟನೆ ಮಾಡಲಾಯಿತು. ಕಲಿಕೆಯಲ್ಲಿ ಹಿಂದಿರುವ ಮಕ್ಕಳನ್ನು ಆಯ್ಕೆ ಮಾಡಿ ಮೂರು ತಿಂಗಳು ನಡೆಯುವ ಟ್ಯೂಷನ್ ಕ್ಲಾಸ್ ಕಾರ್ಯಕ್ರಮವನ್ನು ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯಾಶಂಕರ್ ಭಟ್ ರವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿ ಕ್ಷೇತ್ರದಿಂದ ನಮ್ಮ ಶಾಲೆಗೆ ಒದಗಿಸಿಕೊಟ್ಟ ಈ ಟ್ಯೂಷನ್ ಕ್ಲಾಸ್ ತರಬೇತಿ ಕಾರ್ಯಕ್ರಮ ನಮ್ಮ ಮಕ್ಕಳಿಗೆ ಸದುಪಯೋಗ ವಾಗಲಿ ಎಂದು ಶುಭ ಹಾರೈಸಿದರು.
ಅರಿಯಡ್ಕ ಭಜನಾ ಪರಿಷತ್ತಿನ ವಲಯ ಅಧ್ಯಕ್ಷ ಗಂಗಾಧರ ರೈ ಮಾತನಾಡಿ ಯೋಜನೆ ವತಿಯಿಂದ ಹಲವಾರು ಪ್ರೇರೇಪಣಾ ಕಾರ್ಯಕ್ರಮಗಳು ನಡೆಯುತ್ತಿದೆ. ಈ ಒಂದು ಟ್ಯೂಷನ್ ಕ್ಲಾಸ್ ತರಬೇತಿ ಕಾರ್ಯಕ್ರಮ ಮಕ್ಕಳ ಉಜ್ವಲ ಭವಿಷ್ಯಕ್ಕೆ ಸ್ಪೂರ್ತಿದಾಯಕವಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಅರಿಯಡ್ಕ ವಲಯದ ವಲಯಾಧ್ಯಕ್ಷ ದಿನೇಶ್ ರೈ ಕುತ್ಯಾಳ, ಶಾಲಾ ಶಿಕ್ಷಕಿ ಪ್ರಶಾಂತಿ, ತರಬೇತಿ ಜ್ಞಾನವಿಕಾಸ ಸಮನ್ವಯಾಧಿಕಾರಿ ಜ್ಞಾನದೀಪ ಶಿಕ್ಷಕ ಜ್ಯೋತಿ,ಸೇವಾ ಪ್ರತಿನಿಧಿ, ಪದಾಧಿಕಾರಿಗಳು, ಶಾಲಾ ಶಿಕ್ಷಕ ವೃಂದ, ಮಕ್ಕಳು, ಉಪಸ್ಥಿತರಿದ್ದರು. ಸೇವಾ ಪ್ರತಿನಿಧಿ ಪುಷ್ಪಾವತಿ ಸ್ವಾಗತಿಸಿದರು.ಜ್ಞಾನವಿಕಾಸ ಸಮನ್ವಯಾಧಿಕಾರಿ ಕಾವ್ಯಶ್ರೀ ವಂದಿಸಿದರು.