ಡಿ.23-25:ರೋಟರಿ ಸೆಂಟ್ರಲ್‌ನಿಂದ ವ್ಯವಹಾರವನ್ನು ವೃದ್ಧಿಸುವ ವಿನೂತನ ಕಾರ್ಯಕ್ರಮ ‘ರೋಟರಿ ಬ್ಯುಸಿನೆಸ್ ಎಕ್ಸ್‌ಪೋ’

0

100 ಸ್ಟಾಲ್‌ಗಳು | ಫುಡ್ ಫೆಸ್ಟಿವಲ್ | ಸಾಂಸ್ಕೃತಿಕ ವೈವಿಧ್ಯ | ಆದರ್ಶ ದಂಪತಿ ಸ್ಪರ್ಧೆ

ಪುತ್ತೂರು: ಪುತ್ತೂರಿನಲ್ಲಿ ಏಳು ರೋಟರಿ ಸಂಸ್ಥೆ ಇದ್ದು ಈ ಏಳೂ ರೋಟರಿ ಸಂಸ್ಥೆಯವರು ಸಮಾಜಮುಖಿ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡವರಾಗಿದ್ದಾರೆ. ಈ ನಿಟ್ಟಿನಲ್ಲಿ ತಮ್ಮ ವ್ಯವಹಾರವನ್ನು ವೃದ್ಧಿಸಿಕೊಳ್ಳಲು ಪುತ್ತೂರಿನಲ್ಲಿ ಪ್ರಥಮ ಬಾರಿಗೆ ‘ರೋಟರಿ ಬ್ಯುಸಿನೆಸ್ ಎಕ್ಸ್‌ಪೋ’ ಎಂಬ ಹೆಸರಿನಲ್ಲಿ ವಿನೂತನವಾದ, ವಿಶೇಷವಾದ ಕಾರ್ಯಕ್ರಮವನ್ನು ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಇವರು ಹಮ್ಮಿಕೊಳ್ಳುತ್ತಿದ್ದಾರೆ.


ಡಿ.23 ರಿಂದ 25ರ ತನಕ ಬಪ್ಪಳಿಗೆ ಬೈಪಾಸ್ ರಸ್ತೆಯಲ್ಲಿರುವ ಸಮೃದ್ಧಿ ಸಂಕೀರ್ಣದಲ್ಲಿ ‘ರೋಟರಿ ಬ್ಯುಸಿನೆಸ್ ಎಕ್ಸ್‌ಪೋ’ ಕಾರ್ಯಕ್ರಮ ಅದ್ದೂರಿಯಾಗಿ ಜರಗಲಿದೆ. ಈ ಮೂರು ದಿನದ ಕಾರ್ಯಕ್ರಮದಲ್ಲಿ 100 ವಿವಿಧ ಸ್ಟಾಲ್‌ಗಳಿದ್ದು ಇಲ್ಲಿ ಒಂದು ವಸ್ತು, ಒಂದು ಸ್ಟಾಲ್ ರೂಪದಲ್ಲಿ ಇರಲಿದೆ. ಸ್ಪರ್ಧೆಗೆ ಅವಕಾಶವಿಲ್ಲ. ಫುಡ್ ಕೋರ್ಟ್ ಇರಲಿದ್ದು ಪರಸ್ಪರ ವ್ಯವಹಾರ ವೃದ್ಧಿಗೆ ವೇದಿಕೆಯನ್ನು ಕಲ್ಪಿಸಿಕೊಡಲಾಗುತ್ತದೆ. ಡಿ.24ರಂದು ಮಧ್ಯಾಹ್ನ ಆದರ್ಶ ದಂಪತಿ ಸ್ಪರ್ಧೆ ನಡೆಯಲಿದ್ದು ಈ ಸ್ಪರ್ಧೆಯಲ್ಲಿ ಸಾರ್ವಜನಿಕರಿಗೆ ಭಾಗವಹಿಸಲು ಅವಕಾಶವಿದೆ. ಅದೇ ದಿನ ಕಾಮಿಡಿ ಕಿಲಾಡಿ ಖ್ಯಾತಿಯ ಶಿವಮೊಗ್ಗದ ಕವಿತಾ ಸುಧೀಂದ್ರರವರು ಭಾಗವಹಿಸಿ ಕಾರ್ಯಕ್ರಮದ ಕಳೆಯನ್ನು ಮತ್ತಷ್ಟು ಹೆಚ್ಚಿಸಲಿದ್ದಾರೆ. ಪುತ್ತೂರಿನ ವಿವಿಧ ಉದ್ಯಮ ಸಂಸ್ಥೆಗಳಿಗೆ ತಮ್ಮ ವಿಶೇಷ ಗಿಫ್ಟ್ ಕೂಪನ್‌ಗಳನ್ನು ಇಲ್ಲಿ ನೀಡಲು ಅವಕಾಶವಿದೆ. ಪ್ರತಿದಿನ ಆಕರ್ಷಕ ಬಹುಮಾನಗಳು, ಮೂರು ದಿನವೂ ವೈದ್ಯಕೀಯ ಶಿಬಿರ, ರಕ್ತ ಪರಿಶೋಧನಾ ಶಿಬಿರ, ವ್ಯವಹಾರಗಳಿಗೆ ವಿಚಾರ ಸಂಕಿರಣ, ನೂತನ ಉತ್ಪನ್ನಗಳ ಬಿಡುಗಡೆಗೆ ವೇದಿಕೆ ಕಲ್ಪಿಸಲಾಗುವುದು. ಸ್ವಚ್ಛತಾ ದೃಷ್ಟಿಯಿಂದ ಹಳೆ ವಸ್ತುಗಳ ಅಥವಾ ಪೇಪರ್‌ಗಳ ಮಾರಾಟಕ್ಕೂ ಅವಕಾಶ ನೀಡಲಾಗುತ್ತದೆ.


‘ನಮ್ಮ ವೇದಿಕೆ-ನಿಮ್ಮ ಪ್ರತಿಭೆ’ ಎಂಬ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ಬೈಪಾಸ್ ರಸ್ತೆಯ ಆಶ್ಮಿ ಕಂಫರ್ಟ್‌ನ ಪಂಚಮಿ ಸಭಾಂಗಣದಲ್ಲಿ ನಡೆಯಲಿದ್ದು ಭರತನಾಟ್ಯ, ಸುಗಮ ಸಂಗೀತ, ಜಾನಪದ ಹಾಡು, ವೈಯಕ್ತಿಕ ನೃತ್ಯ, ವೈಯಕ್ತಿಕ ಸಂಗೀತ, ಜಾನಪದ ನೃತ್ಯ, ಸಮೂಹ ನೃತ್ಯ, ಸಮೂಹ ಗಾನ ಇತ್ಯಾದಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ನೀಡಲು ಅವಕಾಶವಿದ್ದು ಧ್ವನಿ ಮತ್ತು ಬೆಳಕು ಒದಗಿಸಲಾಗುವುದು.


ಎಕ್ಸ್ಪೋದಲ್ಲಿ ಮಿಂಚಲಿರುವ ಸ್ಟಾಲ್‌ಗಳು:
ನ್ಯಾಚುರಲ್ ಐಸ್‌ಕ್ರೀಮ್, ಕೈಮಗ್ಗದ ಎಲ್ಲಾ ವಯೋಮಾನದ ಉಡುಪುಗಳು, ಖಾದಿ(ಪುರುಷ ಮತ್ತು ಸ್ತ್ರೀಯರ ಉಡುಪು), ಆಯುರ್ವೇದಿಕ್ ಉತ್ಪನ್ನಗಳು, ಸಾವಯವ ಉತ್ಪನ್ನಗಳು, ಹಲಸಿನ ಹೋಳಿಗೆ, ಚಟ್ನಿ ಹುಡಿ, ಗೆರಟೆಯ ಉತ್ಪನ್ನಗಳು, ಟೈಲ್ಸ್, ಪೀಠೋಪಕರಣಗಳು, ರಾಸಾಯನಿಕ ಮುಕ್ತ ಶುದ್ದೀಕರಣ ಉತ್ಪನ್ನಗಳು, ಅಲೆವೆರಾ ತಂಪು ಉತ್ಪನ್ನಗಳು, ರಿಯಾಯಿತಿ ದರದ ಬ್ಯಾಗುಗಳು, ಕೈ ನೇಯ್ಗೆ ಬ್ಯಾಗುಗಳು, ರಾಗಿ ಬೋಟಿ, ತರಕಾರಿ ಕತ್ತರಿಸುವ ಸಾಧನಗಳು, ಮಸಾಜ್ ಸಾಧನಗಳು, ಡಿಟರ್ಜಂಟ್, ಮಕ್ಕಳ ಆಟಿಕೆಗಳು, ಗೋಮಯ ಉತ್ಪನ್ನಗಳು, ರುಮಾಲಿ ರೋಟಿ, ಸ್ವೀಟ್ ಕೋರ್ನ್, ಗ್ಯಾಸ್ ಸ್ಟೌವ್ ಉತ್ಪನ್ನಗಳು, ಚರುಂಬುರಿ, ನರ್ಸರಿ, ಮ್ಯಾಜಿಕ್ ಟವೆಲ್, ಗುಜುರಿ ಖರೀದಿ ಅಂಗಡಿ, ಕರಿದ ತಿಂಡಿ ತಿನಸು, ಸೋಡಾ, ತರಕಾರಿ ಬೀಜ, ಅಯಸ್ಕಾಂತೀಯ ಚಾಪೆಗಳು, ಗಾಳಿಪಟ, ಸಿದ್ದ ಚಪಾತಿ(ನಿತ್ಯ ಚಪಾತಿ), ವಿದ್ಯುತ್ ಉಳಿಕೆ ಉಪಕರಣಗಳು, ಚೋಳಮಂಡಲ ಫೈನಾನ್ಸ್, ರಿಯಲ್ ಎಸ್ಟೇಟ್, ನ್ಯಾಚುರಲ್ ಜ್ಯೂಸ್, ಆಕರ್ಷಣ್, ಹಳೆಯ ಅನುಪಯುಕ್ತ ನ್ಯೂಸ್ ಪೇಪರ್, ಕಬ್ಬಿಣ, ಇತರ ವಸ್ತುಗಳನ್ನು ಕೊಂಡುಕೊಳ್ಳುವ ಸ್ಟಾಲ್ ಹೀಗೆ ನೂರಕ್ಕೂ ಮಿಕ್ಕಿ ಸ್ಟಾಲ್‌ಗಳು ಎಕ್ಸ್ಪೋದಲ್ಲಿ ಕಾಣ ಸಿಗಲಿದೆ.


ಉದ್ಘಾಟನೆ:
ಡಿ.23 ರಂದು ಬೆಳಿಗ್ಗೆ 11 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ಜರಗಲಿದ್ದು, ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3181 ಇದರ ನಿಕಟಪೂರ್ವ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್‌ರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರೋಟರಿ ಅಸಿಸ್ಟೆಂಟ್ ಗವರ್ನರ್ ಪುರಂದರ ರೈ, ಪುತ್ತೂರು ವರ್ತಕರ ಸಂಘದ ಅಧ್ಯಕ್ಷ ವಾಮನ್ ಪೈ, ರೋಟರಿ ಪಬ್ಲಿಕ್ ಇಮೇಜ್ ಚೇರ್‌ಮ್ಯಾನ್ ವಿಶ್ವಾಸ್ ಶೆಣೈ, ಪುತ್ತೂರು ಪೇಸ್ ಅಧ್ಯಕ್ಷ ಸತ್ಯಗಣೇಶ್‌ರವರು ಭಾಗವಹಿಸಲಿದ್ದಾರೆ.


ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ:
ಡಿ.23 ರಂದು ಸಂಜೆ ಐದು ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದ್ದು ಇದರ ಉದ್ಘಾಟನೆಯನ್ನು ನೆಲ್ಯಾಡಿ ಸೈಂಟ್ ಜಾರ್ಜ್ ಶಿಕ್ಷಣ ವಿದ್ಯಾಸಂಸ್ಥೆಯ ಸಂಚಾಲಕ ಅಬ್ರಾಹಂ ವರ್ಗೀಸ್‌ರವರು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್ ಪುತ್ತೂರು ಸಿಟಿ ಅಧ್ಯಕ್ಷೆ ಗ್ರೇಸಿ ಗೊನ್ಸಾಲ್ವಿಸ್, ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಅಧ್ಯಕ್ಷ ಸುಂದರ್ ರೈ ಬಲ್ಕಾಡಿ, ರೋಟರಿ ಕ್ಲಬ್ ಪುತ್ತೂರು ಎಲೈಟ್ ಅಧ್ಯಕ್ಷ ಅಬ್ದುಲ್ ರಝಾಕ್ ಕಬಕಕಾರ‍್ಸ್, ಪುತ್ತೂರು ಲಯನ್ಸ್ ಕ್ಲಬ್ ಅಧ್ಯಕ್ಷ ಸದಾಶಿವ ನಾಕ್‌ರವರು ಭಾಗವಹಿಸಲಿದ್ದಾರೆ.


ಆದರ್ಶ ದಂಪತಿ ಕಾರ್ಯಕ್ರಮ:
ಡಿ.24 ರಂದು ಸಂಜೆ ಐದು ಗಂಟೆಗೆ ಆದರ್ಶ ದಂಪತಿ ಕಾರ್ಯಕ್ರಮ ನೆರವೇರಲಿದ್ದು, ಕಾರ್ಯಕ್ರಮವನ್ನು ಸಹಕಾರ ರತ್ನ ದಂಬೆಕ್ಕಾನ ಸದಾಶಿವ ರೈಯವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ, ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಜೈರಾಜ್ ಭಂಡಾರಿ, ಜಿಲ್ಲಾ ಪ್ರಾಜೆಕ್ಟ್ ರಸ್ತೆ ಸುರಕ್ಷತಾ ಜಾಗೃತಿ ಚೇರ್‌ಮ್ಯಾನ್ ಹರ್ಷ ಕುಮಾರ್ ರೈ ಮಾಡಾವು, ಎ.ಸಿ.ಸಿ.ಇ ಪುತ್ತೂರು ಚಾಪ್ಟರ್ ಅಧ್ಯಕ್ಷ ಪ್ರಮೋದ್ ಕುಮಾರ್, ತೆಂಗು ರೈತ ಉತ್ಪಾದನಾ ಕಂಪೆನಿಯ ಅಧ್ಯಕ್ಷ ಕುಸುಮಾಧರ್ ಎಸ್.ಕೆ, ಪುತ್ತೂರು ಜೇಸಿಐ ಅಧ್ಯಕ್ಷ ಸುಹಾಸ್ ಮರಿಕೆರವರು ಭಾಗವಹಿಸಲಿದ್ದಾರೆ.


ಸಮಾರೋಪ:
ಡಿ.25 ರಂದು ಸಂಜೆ ಸಮಾರೋಪ ಕಾರ್ಯಕ್ರಮ ಜರಗಲಿದ್ದು, ಮುಖ್ಯ ಅತಿಥಿಗಳಾಗಿ ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3181 ಇದರ ತರಬೇತುದಾರ ಬಿ.ಭಾಸ್ಕರ್ ಶೆಟ್ಟಿ, ರೋಟರಿ ವಲಯ ನಾಲ್ಕರ ಅಸಿಸ್ಟೆಂಟ್ ಗವರ್ನರ್ ನರಸಿಂಹ ಪೈ, ರೋಟರಿ ಕ್ಲಬ್ ಪುತ್ತೂರು ಯುವ ಅಧ್ಯಕ್ಷ ಪಶುಪತಿ ಶರ್ಮ, ಚಾರ್ಟರ್ಡ್ ಎಕೌಂಟೆಂಟ್ ಅರವಿಂದ ಕೃಷ್ಣರವರು ಭಾಗವಹಿಸಲಿದ್ದಾರೆ ಎಂದು ರೋಟರಿ ಸೆಂಟ್ರಲ್ ಅಧ್ಯಕ್ಷ ಡಾ.ರಾಜೇಶ್ ಬೆಜ್ಜಂಗಳ, ಸ್ಥಾಪಕಾಧ್ಯಕ್ಷ ಸಂತೋಷ್ ಶೆಟ್ಟಿ, ಕಾರ್ಯದರ್ಶಿ ಡಾ.ರಾಮಚಂದ್ರ, ವಲಯ ಸೇನಾನಿ ನವೀನ್‌ಚಂದ್ರ ನಾಕ್, ಸ್ಟಾಲ್ ಜವಾಬ್ದಾರಿ ಶಿವರಾಮ ಎಂ.ಎಸ್‌ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here