ಕ್ಯಾಪ್ ಫೌಂಡೇಶನ್ ವತಿಯಿಂದ ಕೆಮ್ಮಾರ ಸರಕಾರಿ ಶಾಲೆಗೆ ಕಂಪ್ಯೂಟರ್, ಸೇರಿದಂತೆ ಹಲವು ಉಪಯುಕ್ತ ಸಾಮಾಗ್ರಿಗಳ ಕೊಡುಗೆ

0

ಉಪ್ಪಿನಂಗಡಿ: ಡಿ.23; ಕೆಮ್ಮಾರ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಗೆ ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಕಾಳಜಿ ಹೊಂದಿರುವ ಕ್ಯಾಪ್ ಫೌಂಡೇಶನ್ ಸಂಸ್ಥೆಯು ಕಂಪ್ಯೂಟರ್, ಸ್ಟೀಲ್ ಡ್ರಮ್, ಕಥೆ ಪುಸ್ತಕಗಳು, ಬ್ಯಾಟ್-ವಿಕೇಟ್, ಕೇರಮ್ ಬೋರ್ಡ್, ಡಿಸ್ಕಸ್, ಚೆಸ್, ಸೇರಿದಂತೆ ಮಕ್ಕಳಿಗೆ ಅವಶ್ಯಕವಾದ ಹಲವಾರು ಕ್ರೀಡಾಪರಿಕರಗಳನ್ನು ಕೊಡುಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಜಯಶ್ರೀ ಎಂ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಝೀಝ್ ಬಿ.ಕೆ, ಪ್ರವೀಣ್ ಕೆಮ್ಮಾರ,ಶಾಲಾಭಿವೃದ್ಧಿ ಸಮಿತಿ ಸದಸ್ಯ ಪದ್ಮನಾಭ ಶೆಟ್ಟಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕ್ಯಾಪ್ ಫೌಂಡೇಶನ್ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಮಾಡುತ್ತಿರುವ ಸಮಾಜಮುಖಿ ಕಾರ್ಯಕ್ಕೆ ಕೆಮ್ಮಾರ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ, ಅಧ್ಯಾಪಕ ವೃಂದ, ವಿದ್ಯಾರ್ಥಿಗಳ, ಪೋಷಕರ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.

ಮಾತ್ರವಲ್ಲದೇ ಈ ಒಂದು ಕಾರ್ಯಕ್ಕೆ ಶ್ರಮಿಸಿದ ವಾಮನ ಬರಮೇಲು ಮತ್ತು ಪ್ರವೀಣ್ ಕೆಮ್ಮಾರ ಇವರಿಗೆ ಅಭಿನಂದನೆ ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here