ಶ್ರೀ ಸತ್ಯಸಾಯಿ ಸೇವಾ ಸಮಿತಿಯ ಆಶ್ರಯದಲ್ಲಿ ಡಿ.24ರ ಭಾನುವಾರ ಪುತ್ತೂರಿನ ಕೋರ್ಟ್ ರಸ್ತೆಯಲ್ಲಿರುವ ಶ್ರೀ ಸತ್ಯಸಾಯಿ ಮಂದಿರದಲ್ಲಿ ಶ್ರೀಮದ್ಭಗವದ್ಗೀತಾ ಜಯಂತಿ ಕಾರ್ಯಕ್ರಮವು ನಡೆಯಿತು.
ಕಾರ್ಯಕ್ರಮವನ್ನು ಜಿಲ್ಲಾ ಆಧ್ಯಾತ್ಮಿಕ ಸಂಯೋಜಕಿ ಮುಕ್ತಾ ಕಿಣಿಯವರು ಉದ್ಘಾಟಿಸಿದರು. ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಪ್ರಸನ್ನ ಎನ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಚಂದ್ರಶೇಖರ್ ನಾಯಕ್ ಮಂಗಳೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ದ.ಕ ಜಿಲ್ಲಾ ಮಹಿಳಾ ಸದಸ್ಯರು ಭಗವದ್ಗೀತೆಯ 15ನೇ ಅಧ್ಯಾಯದ ಶ್ಲೋಕಗಳನ್ನು ಪಠಣ ಮಾಡಿದರು. ಶ್ಲೋಕಗಳಿಗೆ ರಾಮಕುಂಜೇಶ್ವರ ಕಾಲೇಜಿನ ಪ್ರಾಂಶುಪಾಲ ಹಾಗೂ ಪ್ರಸಿದ್ದ ವಾಗ್ಮಿ ಗಣರಾಜ ಕುಂಬ್ಳೆ ವ್ಯಾಖ್ಯಾನ ನೀಡಿದರು. ಸಾಯಿಲಕ್ಷ್ಮೀ ಪ್ರಾರ್ಥಿಸಿ, ಸಾಯೀಶ್ವರೀ, ಯಕ್ಷಿತಾ, ಜೀವಿತಾ ದುರ್ಗಾ ಸೂಕ್ತ ಪಠಿಸಿದರು. ಸದಾಶಿವ ನಾಯಕ್ ಅಥಿತಿಗಳನ್ನು ಪರಿಚಯಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಖಾಯಂ ವಾಹನ ಚಾಲಕ ಜೆ.ಮಮ್ಮಿ ಇವರನ್ನು ಗೌರವಿಸಲಾಯಿತು.
ಬಳಿಕ ಸಂಸ್ಥೆಯ ಯುವ ಕಲಾವಿದರಿಂದ ಶ್ರೀ ಕೃಷ್ಣ ಗಾನಾರ್ಚನೆ ಜರಗಿತು. ಕಾರ್ಯಕ್ರಮದಲ್ಲಿ ಡಾ|ಸತ್ಯಸುಂದರ ರಾವ್, ನಿರಂಜನ್ ಹೆಬ್ಬಾರ್, ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷ ಮಹಾಬಲೇಶ್ವರ ಭಟ್, ಜಿಲ್ಲಾ ಆಧ್ಯಾತ್ಮಿಕ ಸಂಯೋಜಕ ಜಯರಾಮ ಭಾರದ್ವಾಜ್, ಜಿಲ್ಲಾ ಯುವ ಸಂಯೋಜಕ ಉಮೇಶ್ ಹೂಳಿ, ಜಿಲ್ಲಾ ಸೇವಾ ಸಂಯೋಜಕಿ ಶಾಂತಿ ಭಟ್ ಜಿಲ್ಲಾ ಯುವ ಸಂಯೋಜಕಿ ವೀಣಾ ಲಕ್ಷ್ಮಿ,ಹಿರಿಯರಾದ ಪದ್ಮನಾಭ ನಾಯಕ್, ಸಮಿತಿಗಳ ಸಂಚಾಲಕರು ಮತ್ತು ಸದಸ್ಯರು ಭಾಗವಹಿಸಿದ್ದರು. ಪುತ್ತೂರು ಸಮಿತಿ ಸಂಚಾಲಕರಾದ ರಘುನಾಥ ರೈ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.