ಡಿ.28- 30: ಪುಣಚ ದಲ್ಕಾಜೆಗುತ್ತು ಜಠಾಧಾರಿ, ಮಲರಾಯ ಹಾಗೂ ಪರಿವಾರ ದೈವಗಳ ವಾರ್ಷಿಕ ನೇಮೋತ್ಸವ

0

ಪುಣಚ: ಪುಣಚ ದಲ್ಕಾಜೆಗುತ್ತು ಶ್ರೀ ಜಠಾಧಾರಿ, ಮಲರಾಯ ಹಾಗೂ ಪರಿವಾರ ದೈವಗಳ ವಾರ್ಷಿಕ ನೇಮೋತ್ಸವ ಡಿ.28 ರಿಂದ ಡಿ‌.30ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಡಿ.28ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ನಾಗತಂಬಿಲ, ವೆಂಕಟರಮಣ ದೇವರ ಹರಿಸೇವೆ ನಡೆದು ಮಧ್ಯಾಹ್ನ ಸಮಾರಾಧನೆ ನಡೆಯಲಿದೆ. ಸಾಯಂಕಾಲ ರಕ್ತೇಶ್ವರಿ ದೈವದ ಭಂಡಾರ ತೆಗೆದು, ರಾತ್ರಿ ಪುದುಕೋಲ ಕಾಡೆತ್ತಿ ಭೂತ, ಸಮಾರಾಧನೆ ನಡೆದು ಶ್ರೀ ಜಠಾಧಾರಿ ದೈವದ ಮಹಿಮೆ, ರಕ್ತೇಶ್ವರಿ ದೈವದ ನೇಮ, ಗುಳಿಗ ದೈವದ ನೇಮ, ಧೂಮಾವತಿ ದೈವದ ನೇಮ ನಡೆಯಲಿದೆ.ಡಿ.29ರಂದು ಬೆಳಿಗ್ಗೆ ಮಲರಾಯ ದೈವದ ನರ್ತನಾದಿ ಉತ್ಸವ ನಡೆದು ಮಧ್ಯಾಹ್ನ ಸಮಾರಾಧನೆ, ಸಾಯಂಕಾಲ ಪೊಟ್ಟ ಪಂಜುರ್ಲಿ ನೇಮ, ಅಂಗಾರಕ್ಕುಡ ನೇಮ, ಸತ್ಯ ದೇವತೆ ನೇಮ, ಉಟೋಪಚಾರ ನಡೆಯಲಿದೆ. ಬಳಿಕ ಪಂಜುರ್ಲಿ ದೈವದ ನೇಮ ಹಾಗೂ ಸೂರ್ಯೋದಯದ ತನಕ ಉಪ ದೈವಗಳಿಗೆ ನೇಮೊತ್ಸವ ನಡೆಯಲಿದೆ.

ಡಿ.30ರಂದು ರಾತ್ರಿ ಭೈರವ ದೈವ ಹಾಗೂ ರಾಹು ಗುಳಿಗ ದೈವಗಳಿಗೆ ತಂಬಿಲ ನಡೆಯಲಿದೆ ಎಂದು ದಲ್ಕಾಜೆಗುತ್ತು ಕುಟುಂಬಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here