ಪುತ್ತೂರು: ರೂ 5 ಲಕ್ಷ ಅನುದಾನದಲ್ಲಿ ಆರ್ಯಾಪು ಗ್ರಾಮದ ಕರಿಮೊಗೆರು ರಸ್ತೆಯ ಕಾಂಕ್ರಿಟೀಕರಣವಾಗಲಿದ್ದು ಇದರ ಗುದ್ದಲಿ ಪೂಜೆಯನ್ನು ಶಾಸಕ ಅಶೋಕ್ ರೈ ನೆರವೇರಿಸಿದರು.
ಬಳಿಕ ಮಾತನಾಡಿದ ಶಾಸಕ ಅಶೋಕ್ ರೈ ರವರು ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಜನ ನೆಮ್ಮದಿಯಿಂದ ಕಾಲ ಕಳೆಯುವಂತಾಗಿದೆ. ಐದು ಗ್ಯಾರಂಟಿ ಯೋಜನೆಗಳು ಪ್ರತೀ ಕುಟುಂಬಕ್ಕೂ ತಲುಪಿದ್ದು ಎಲ್ಲರೂ ಸಂತೃಪ್ತರಾಗಿದ್ದಾರೆ. ಇದೀಗ ಅಭಿವೃದ್ದಿ ಕಾಮಗಾರಿಗೆ ಸರಕಾರ ಅನುದಾನ ನೀಡುತ್ತಿದ್ದು ಜನತೆಯ ಬಹುಕಾಲದ ಬೇಡಿಕೆಗಳು ಒಂದೊಂದಾಗಿ ಈಡೇರುತ್ತಿದೆ ಎಂದು ಹೇಳಿದ ಅವರು ಗ್ಯಾರಂಟಿ ಯೋಜನೆಯ ಮೂಲಕ ಜನರಿಗೆ ನೆಮ್ಮದಿಯ ಜೀವನ ತಂದ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಗ್ರಾಪಂ ಅಧ್ಯಕ್ಷ ರಶೀದ್ ಹಾಜಿ,ಬೂತ್ ಅಧ್ಯಕ್ಷ ಶಾಫಿ ,ವಲಯಾಧ್ಯಕ್ಷ ಪ್ರಜ್ವಲ್ ರೈ ತೊಟ್ಲ, ಡಿಸಿಸಿ ಸದಸ್ಯ ಅಶೋಕ್ ಸಂಪ್ಯ,ಗ್ರಾಪಂ ಸದಸ್ಯರಾದ ಪವಿತ್ರ ರೈ, ಪೂರ್ಣಿಮಾ ರೈ, ಖಾದರ್ ಕಲ್ಲರ್ಪೆ, ಆದಂ ಕಲ್ಲರ್ಪೆ, ಶಿವಪ್ರಸಾದ್ ನಾಯಕ್ ಹಾರಿಸ್ ಸಂಟ್ಯಾರ್ ,ದಾಮೋದರ್ ಮಣಿಯಾಣಿ, ಉದಯ ರೈ ಮೇರ್ಲ, ಕೇಶವ ಸುವರ್ಣ ಮೇರ್ಲ, ಮಹೇಸ್ ರೈ ಮಲಾರ್, ಸಲಾಂ ಸಂಪ್ಯ, ಬಾಲಕೃಷ್ಣ ಗೌಡ ಕಾಣಿಕೆ, ಗುತ್ತಿಗೆದಾರ ಬಿ ಕೆ ಬಶೀರ್ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು. ಲಿಂಗಪ್ಪ ಕರಿಮೊಗೆರು ಸ್ವಾಗತಿಸಿ ವಂದಿಸಿದರು.