ಪುತ್ತೂರು: ಪುತ್ತೂರಿನ 2ನೇ ಅತಿ ದೊಡ್ಡ ಇತಿಹಾಸ ಪ್ರಸಿದ್ದ ಜಾತ್ರೋತ್ಸವ ಎಂದೇ ಕರೆಯಲ್ಪಡುವ ಕಲ್ಲೇಗ ಶ್ರೀ ಕಲ್ಕುಡ ದೈವಸ್ಥಾನದಲ್ಲಿ ಜರುಗುವ ಜ.24 ರಂದು ಶ್ರೀ ಕಲ್ಕುಡ, ಕಲ್ಲುರ್ಟಿ ದೈವಗಳ ವರ್ಷಾವಧಿ ಜಾತ್ರೋತ್ಸವದ ಆಮಂತ್ರಣ ಪತ್ರವನ್ನು ಡಿ.26ರಂದು ದೈವಸ್ಥಾನದ ನಡೆಯಲ್ಲಿ ಬಿಡುಗಡೆ ಮಾಡಲಾಯಿತು.
ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಅಜಿತ್ ಕುಮಾರ್, ಕಲ್ಲೇಗ ರೂರಲ್ ಡೆವೆಲಪ್ಮೆಂಟ್ ಟ್ರಸ್ಟ್ ಅಧ್ಯಕ್ಷ ಸಂಜೀವ ನಾಯಕ್ ಕಲ್ಲೇಗ, ಜಿನ್ನಪ್ಪ ಗೌಡ, ನಗರಸಭೆ ನಿಟಕಪೂರ್ವ ಅಧ್ಯಕ್ಷ ಕೆ.ಜೀವಂಧರ್ ಜೈನ್, ಮಾದವ ಪಟ್ಲ, ಲೋಕೇಶ್ ಹೆಗ್ಡೆ, ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ, ವಿನಯ ಕುಮಾರ್ ಕಲ್ಲೇಗ, ರವಿಕಿರಣ್ ನೆಲಪ್ಪಾಲು, ರಾಘವೇಂದ್ರ ಪ್ರಭು, ಜಯರಾಮ ನೆಲಪ್ಪಾಲು, ಅಣ್ಣಿ ಪೂಜಾರಿ, ಸತೀಶ್ ಕರ್ಮಲ, ಸುನೀತ, ರೋಹಿಣಿ, ಪ್ರಕಾಶ್, ಗಣೇಶ್ ಮತ್ತು ಚಾಕರಿ ವರ್ಗದವರು ಉಪಸ್ಥಿತರಿದ್ದರು.