ಅಪ್ರಾಪ್ತೆಯ ಅತ್ಯಾಚಾರ ಪ್ರಕರಣದ ಆರೋಪಿಗೆ ಜಾಮೀನು

0

ಪುತ್ತೂರು:ತನ್ನ ಸಮುದಾಯದ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಯಾಗಿರುವ ಪಾಣಾಜೆಯ ನಿವಾಸಿ ಅಬ್ದುಲ್ ಶೆಹನಾದ್ ಸಮೀಮ್ ಎಂಬವರಿಗೆ ಜಿಲ್ಲಾ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.

ತನ್ನ ಮನೆಯ ಸಮೀಪದ ವಾಸಿ ಅಪ್ರಾಪ್ತ ಬಾಲಕಿಯನ್ನು ಆಕೆಯ ಮನೆಯಲ್ಲಿ ಮರಳು ಮಾಡಿ ಬಲಾತ್ಕಾರದಿಂದ ಲೈಂಗಿಕ ಸಂಪರ್ಕ ನಡೆಸಿ ಬೆದರಿಕೆ ಒಡ್ಡಿದ್ದಲ್ಲದೆ 23/10/2023ರಂದು ರಾತ್ರಿ ಗಂಟೆಗೆ ಅಪ್ರಾಪ್ತ ಬಾಲಕಿಯು ತಾಯಿ ಮನೆ ಹತ್ತಿರದಲ್ಲಿರುವ ಅಜ್ಜಿ ಮನೆಗೆ ಬೀಡಿ ಕಟ್ಟಲು ಹೋಗಿದ್ದ ಸಂದರ್ಭ ಆರೋಪಿಯು ಅಲ್ಲಿಗೆ ಹೋಗಿ, ಅಪ್ರಾಪ್ತ ಬಾಲಕಿಯ ಮೈಗೆ ಕೈ ಹಾಕಿದ್ದು, ಆಕೆ ಬೊಬ್ಬೆ ಹೊಡೆದಾಗ, ಈ ವಿಚಾರವನ್ನು ಬೇರೆಯವರಲ್ಲಿ ಹೇಳಿದರೆ ಕೊಲ್ಲುವುದಾಗಿ ಜೀವ ಬೆದರಿಕೆ ಒಡ್ಡಿ ಮನೆಯಿಂದ ಓಡಿ ಹೋಗಿದ್ದಾಗಿ ಆರೋಪಿಸಿ ಅಪ್ರಾಪ್ತ ಬಾಲಕಿಯು ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈ ದೂರಿನಂತೆ ಪೊಲೀಸರು ಭಾರತೀಯ ದಂಡ ಸಂಖ್ಯೆಯ ಕಲಂ 376,354(A),506 ಮತ್ತು ಪೋಕ್ಸೋ ಕಾಯ್ದೆಯ ಕಲಂ 4 ರನ್ವಯ ಪ್ರಕರಣ ದಾಖಲಿಸಿದ್ದರು.ನಂತರ ತನಿಖೆ ಮುಂದುವರಿಸಿ ಆರೋಪಿ ಅಬ್ದುಲ್ ಶೆಹನಾದ್ ಸಮೀಮ್‌ರವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಮಾಡಿದ್ದು ಆತನಿಗೆ ನ್ಯಾಯಾಂಗ ಬಂದನ ವಿಧಿಸಲಾಗಿತ್ತು.ಆರೋಪಿಯು ತನ್ನ ಪರ ವಕೀಲರಾದ ಮಹೇಶ್ ಕಜೆ ಮತ್ತು ಶ್ರೀಮತಿ ರಮ್ಲತ್ ಅವರ ಮುಖಾಂತರ, ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.ವಾದ-ಪ್ರತಿವಾದವನ್ನು ಆಲಿಸಿದ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಭಾರ ನ್ಯಾಯಾಧೀಶರಾದ ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಾಂತರಾಜು ಎಸ್.ವಿ.ರವರು ಆರೋಪಿಗೆ ಜಾಮೀನು ಮಂಜೂರು ಮಾಡಿದ್ದಾರೆ.

LEAVE A REPLY

Please enter your comment!
Please enter your name here