ವಿಟ್ಲ: ಇಲ್ಲಿನ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಕಾಲಾವಧಿ ಜಾತ್ರೆಯು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಡಿ.31 ಮತ್ತು ಜ.1ರಂದು ಜರಗಲಿದೆ ಎಂದು ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಅರುಣ್ ವಿಟ್ಲ ತಿಳಿಸಿದರು.
ಅವರು ದೇವಸ್ಥಾನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಡಿ.31ರಂದು ಗಣಪತಿಹವನ,ನಾಗತಂಬಿಲ, ಕಲಶಾಭಿಷೇಕ, ತುಲಾಭಾರ ಸೇವೆ ರಂಗಪೂಜೆ, ದುರ್ಗಾಪೂಜೆ,ಉತ್ಸವ ಬಲಿ ಜರಗಲಿದೆ. ಜ.1ರಂದು ಭೂತಬಲಿ, ದರ್ಶನಬಲಿ,ರಾಜಾಂಗಣ ಪ್ರಸಾದ, ಕಲಶಪೂರಣ, ಪೇಟೆ ಸವಾರಿ, ಕಲಶಾಭಿಷೇಕ ಮತ್ತು ಮಂತ್ರಾಕ್ಷತೆ ಜರಗಲಿದೆ. ಸಂಜೆ ಏಳರಿಂದ ಮಂಗಳಾದೇವಿ ಮೇಳದವರಿಂದ ಧಕ್ಷಾಧ್ವರ- ಮಕರಜ್ಯೋತಿ ಯಕ್ಷಗಾನ ಪ್ರದರ್ಶನ ಆಯೋಜಿಸಲಾಗಿದೆ. ಪ್ರತೀದಿನ ಮಧ್ಯಾಹ್ನ ಮತ್ತು ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟಿ ರಮಾನಾಥ ವಿಟ್ಲ, ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಮತ್ತು ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ಪದಾಧಿಕಾರಿಗಳಾದ ಧರ್ಣಪ್ಪ ಗುರುಸ್ವಾಮಿ, ಯಾದವ ಮಂಗಿಲಪದವು, ಲೋಕೇಶ್, ಬಾಲಕೃಷ್ಣ , ಹರೀಶ್, ಸುರೇಶ್ , ಅರ್ಚಕ ವಿಜೇತ ಭಟ್ ಮೊದಲಾದವರು ಉಪಸ್ಥಿತರಿದ್ದರು