ಪುತ್ತೂರು: ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕ ಇದರ ಜಿಲ್ಲಾಧ್ಯಕ್ಷರಾಗಿ ಕಡೇಶಿವಾಲಯದ ವಿಂಧ್ಯಾ ಎಸ್ ರೈ ಅವರು ಆಯ್ಕೆಯಾಗಿದ್ದಾರೆ. ಆ.17ರಂದು ಮೂಡಬಿದ್ರೆ ಸಮಾಜ ಮಂದಿರದಲ್ಲಿ ನಡೆದ ಮಹಾಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿದೆ. ಆಮಂತ್ರಣ ಪರಿವಾರದ ಜಿಲ್ಲಾಧ್ಯಕ್ಷೆ ನಿರೀಕ್ಷಿತಾ ಮಂಗಳೂರ ಅವರ ಅಧ್ಯಕ್ಷತೆಯಲ್ಲಿ ಮಹಾಸಭೆ ನಡೆದಿತ್ತು.
ಈ ಸಂದರ್ಭ ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ಮಾತನಾಡಿದರು. ಬಳಿಕ ವೇದಿಕೆಯ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷರಾಗಿ ಸಾಹಿತಿ ಮತ್ತು ಸಂಪನ್ಮೂಲ ವ್ಯಕ್ತಿಯಾಗಿರುವ ಕಡೇಶಿವಾಲಯದ ವಿಂಧ್ಯಾ ಎಸ್ ರೈ ಆಯ್ಕೆಗೊಂಡರು. ಉಪಾಧ್ಯಕ್ಷರಾಗಿ ಉಪನ್ಯಾಸಕಿ ಹಾಗೂ ಸಾಹಿತಿ ಅನಿತಾ ಶೆಟ್ಟಿ ಮೂಡಬಿದ್ರೆ ಆಯ್ಕೆಯಾಗಿದ್ದಾರೆ. ಈ ಆಯ್ಕೆಯ ಸಭೆಯಲ್ಲಿ ರಾಜ್ಯ ಪ್ರತಿನಿಧಿಗಳು ಉಪಸ್ಥಿತರಿದ್ದರು. ವಿಂಧ್ಯಾ ರೈ ಅವರು ಶೀಂಟೂರು ಗುತ್ತು ಶ್ರೀ ಭೋಜರಾಜ ಶೆಟ್ಟಿ ಮತ್ತು ದಿ ಲೀಲಾವತಿ ಶೆಟ್ಟಿ ಯವರ ಪುತ್ರಿ ಮತ್ತು ಬಂಟ್ವಾಳ ತಾಲೂಕು ಕಡೇಶಿವಾಲಯ ಗ್ರಾಮನಿವಾಸಿ ಕುರುoಬ್ಲಾಜೆಗುತ್ತು ಸುಂದರ್. ರೈಯವರ ಪತ್ನಿ. ಅವರು ಕವನ ,ಲೇಖನ ಬರೆಯುವ ಹವ್ಯಾಸದ ಜೊತೆಗೆ ಸಮಾಜ ಸೇವೆ, ಕ್ರೀಡೆ, ಧಾರ್ಮಿಕ, ಸಾಂಸ್ಕೃತಿಕ, ಸಮುದಾಯಿಕ ಕ್ಷೇತ್ರದಲ್ಲಿ ಸಕ್ರಿಯ ಪಾಲುದಾರಿಕೆ ಹಾಗು ಆಕಾಶವಾಣಿ, ಟಿವಿ ಮಾಧ್ಯಮ, ಪತ್ರಿಕೆಯಲ್ಲಿ ಇವರ ಲೇಖನ, ಕವಿತೆ, ಸಂದರ್ಶನ ಪ್ರಸಾರಗೊಂಡಿರುತ್ತದೆ. ಇವರ ಸಾಹಿತ್ಯದಲ್ಲಿ ತುಳು ಆಲ್ಬಮ್ ಹಾಡು ಬಿಡುಗಡೆಗೊಂಡಿದೆ.