ಪುತ್ತೂರು: ಮರಾಟಿ ಸಮಾಜ ಸೇವಾ ಸಂಘ ಪುತ್ತೂರು ತಾಲೂಕು, ಮರಾಟಿ ಯುವ ವೇದಿಕೆ, ಮರಾಟಿ ಮಹಿಳಾ ವೇದಿಕೆ ಇವುಗಳ ಆಶ್ರಯದಲ್ಲಿ 2023-24 ನೇ ಸಾಲಿನ ವಾರ್ಷಿಕ ಕ್ರೀಡಾಕೂಟ ಡಿ.31 ರಂದು ಕೊಂಬೆಟ್ಟಿನಲ್ಲಿರುವ ತಾಲೂಕು ಕ್ರೀಡಾಂಗಣದಲ್ಲಿ ಜರುಗಲಿದೆ ಎಂದು ಮರಾಟಿ ಸಮಾಜ ಸೇವಾ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥ ಎನ್ ಎಸ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸುಮಾರು 45 ವರ್ಷದ ಹಿಂದಿನಿಂದಲೇ ಆರಂಭಗೊಂಡಿರುವ ಹಿರಿಯ ಸಮಾಜವಾಗಿರುವ ಮರಾಟಿ ಸಮಾಜ ಸೇವಾ ಸಂಘ ಪ್ರತಿ ವರ್ಷ ಕ್ರೀಡಾಕೂಟ, ಧಾರ್ಮಿಕ ಸಹಿತ ಹಲವು ಕಾರ್ಯಕ್ರಮ ನಡೆಸುತ್ತಾ ಬಂದಿದ್ದು, ಕೋವಿಡ್ ಸಂದರ್ಭ ಕ್ರೀಡಾಕೂಟ ಮಾಡಿರಲಿಲ್ಲ ಇದೀಗ ಮತ್ತೆ ಕ್ರೀಡಾಕೂಟ ಆರಂಭಿಸಿದ್ದು ಕ್ರೀಡಾಕೂಟದಲ್ಲಿ ಅಂಗನವಾಡಿ ಮಕ್ಕಳಿಂದ ಹಿಡಿದು ಕಿರಿಯರು, ಹಿರಿಯರಿಗೆ ಕ್ರೀಡಾಕೂಟ ನಡೆಯಲಿದೆ. ಕ್ರೀಡಾಕೂಟವನ್ನು ಹೊಸಪೇಟೆ ವಿಭಾಗದ ಅಬಕಾರಿ ಜಂಟಿ ಆಯುಕ್ತ ಬಾಲಕೃಷ್ಣ ನಾಯ್ಕ ಕೆ ಎ ಎಸ್ ಅವರು ಉದ್ಘಾಟಿಸಲಿದ್ದಾರೆ.
ಪುತ್ತೂರು ಯೂನಿಯನ್ ಬ್ಯಾಂಕ್ ಸೀನಿಯರ್ ಮ್ಯಾನೇಜರ್ ಸುರೇಶ್ ನಾಯ್ಕ್, ಪಿ ಡಬ್ಲ್ಯೂ ಡಿ ಗುತ್ತಿಗೆದಾರ ಬಾಲಕೃಷ್ಣ , ನಿವೃತ್ತ ಪೊಲೀಸ್ ಉಪನಿರೀಕ್ಷಕ ರಾಮ ನಾಯ್ಕ, ಲ್ಯಾಂಪ್ಸ್ ಅಧ್ಯಕ್ಷ ಪೂವಪ್ಪ ನಾಯ್ಕ ಆಲಂಕಾರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಜೆ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ನೀಡಲಾಗುವುದು. ಈ ಸಂದರ್ಭ ಶ್ರೀ ಮಹಾಮ್ಮಯಿ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಶೀನ ನಾಯ್ಕ, ನಗರಸಭೆ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್, ನಗರ ಪೊಲೀಸ್ ಠಾಣೆ ಎಸ್.ಐ ಸೇಸಮ್ಮ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕ್ರೀಡಾಕೂಟದಲ್ಲಿ ಸುಮಾರ್ 1 ಸಾವಿರ ಮಂದಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಕ್ರೀಡಾ ಸಂಚಾಲಕ ಮಹಾಲಿಂಗ ನಾಯ್ಕ ನರಿಮೊಗರು, ಸಂಘದ ಕಾರ್ಯದರ್ಶಿ ಅಶೋಕ್ ಕುಮಾರ್ ಬಲ್ನಾಡು, ಖಜಾಂಚಿ ಬಾಬು ನಾಯ್ಕ ತೆಂಕಿಲ ಉಪಸ್ಥಿತರಿದ್ದರು.