ಬ್ಯಾಂಕ್ ಆಫ್ ಬರೋಡಾದಿಂದ ಪಿಡ್ಲ್ಯೂಡಿ ಗುತ್ತಿಗೆದಾರರ ಸಂಘದ ಸದಸ್ಯರಿಗೆ ಮಾಹಿತಿ ಶಿಬಿರ

0

ಪುತ್ತೂರು: ಬ್ಯಾಂಕ್ ಆಫ್ ಬರೋಡಾದಿಂದ ಪುತ್ತೂರು ತಾಲೂಕು ಪಿಡ್ಲ್ಯೂಡಿ ಗುತ್ತಿಗೆದಾರರ ಸಂಘದ ಸದಸ್ಯರಿಗೆ ಮಾಹಿತಿ ಶಿಬಿರ ಡಿ.27ರಂದು ಪತ್ತೂರು ಬೈಪಾಸ್ ರಸ್ತೆಯಲ್ಲಿರುವ ಹೋಟೆಲ್ ಉದಯಗಿರಿಯ ಸಭಾಂಗಣದಲ್ಲಿ ಪಿಡ್ಲ್ಯೂಡಿ ಗುತ್ತಿಗೆದಾರರ ಸಂಘ ಮಂಗಳೂರು ಇದರ ಅಧ್ಯಕ್ಷ ರಾಧಾಕೃಷ್ಣ ನಾೖಕ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಬ್ಯಾಂಕ್ ಅಫ್ ಬರೋಡಾದ ರೀಜನಲ್ ಆಫೀಸ್‌ನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ದೇವಿ ಪ್ರಸಾದ್ ಶೆಟ್ಟಿ, ಪುತ್ತೂರು ಮುಖ್ಯ ಶಾಖೆಯ ಸೀನಿಯರ್ ಮ್ಯಾನೇಜರ್ ಅರುಣಾ ದೀಪ್ತಿ, ದರ್ಬೆ ಶಾಖೆಯ ಜನರಲ್ ಮ್ಯಾನೇಜರ್ ಸಿದ್ದಿಕ್ ಎಸ್.ಎಂ., ಶಿಬಿರದಲ್ಲಿ ಉಪಸ್ಥಿತರಿದ್ದು ಮಾತನಾಡಿ ಬ್ಯಾಂಕ್‌ನಿಂದ ಸಿಗುವ ವಿವಿಧ ಸಾಲ ಸೌಲಭ್ಯಗಳ ಬಗ್ಗೆ, ಅದರ ಮರು ಪಾವತಿಯ ಬಗ್ಗೆ. ಬಡ್ಡಿ ದರದ ಕುರಿತು, ಸರಿಯಾದ ದಾಖಲೆಗಳ ನೀಡುವಿಕೆ. ಸರಿಯಾದ ಸಮಯದಲ್ಲಿ ಸಾಲ ಮರು ಪಾವತಿ ಮಾಡಿದರೆ ಸಿಗುವ ಪ್ರಯೋಜನ ಮತ್ತು ಬ್ಯಾಂಕ್ ಮತ್ತು ಗ್ರಾಹಕರ ನಡುವಿನ ಬಾಂಧವ್ಯ ಹೇಗಿರಬೇಕು, ಸಂವಹನದ ಕೊರತೆಯಿಂದಾಗಿ ಆಗುವ ತೊಂದರೆಗಳು, ಉತ್ತಮ ಸಂವಹನದಿಂದ ಆಗುವ ಪ್ರಯೋಜನದ ಬಗ್ಗೆ ಮಾಹಿತಿ ನೀಡಿದರು. ಯಾವುದೇ ಉದ್ದಿಮೆಗಳನ್ನು ಮಾಡಬೇಕಾದರೆ ಬಂಡವಾಳದ ಅವಶ್ಯಕತೆ ಅತ್ಯಗತ್ಯ. ಇದರ ಕ್ರೂಡಿಕರಣಕ್ಕಾಗಿ ಬ್ಯಾಂಕಿನ ಸಹಕಾರ ಬೇಕಾಗುತ್ತದೆ. ಗ್ರಾಹಕರಿಗೆ ಬ್ಯಾಂಕಿನ ಅವಶ್ಯಕತೆ ಎಷ್ಟಿದೆಯೋ ಅಷ್ಟೇ ಗ್ರಾಹಕರ ಅವಶ್ಯಕತೆ ಬ್ಯಾಂಕಿಗೂ ಇದೆ. ಎಲ್ಲರೂ ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದರು.

ಪಿಡ್ಲ್ಯೂಡಿ ಗುತ್ತಿಗೆದಾರರ ಸಂಘ ಮಂಗಳೂರು ಇದರ ಅಧ್ಯಕ್ಷರಾದ ರಾಧಾಕೃಷ್ಣ ನಾೖಕ್ ಮಾತನಾಡಿ ಯಾವುದೇ ಉದ್ದಿಮೆ ಮಾಡಬೇಕಾದರೆ ಹಣದ ಅವಶ್ಯಕತೆ ಅತ್ಯಗತ್ಯ.ಬ್ಯಾಂಕಿನ ಜೊತೆ ಉತ್ತಮ ವ್ಯವಹಾರವನ್ನು ಮಾಡಿ ಅವರ ವಿಶ್ವಾಸವನ್ನು ಉಳಿಸಿಕೊಳ್ಳುವುದು ಮುಖ್ಯ. ಬ್ಯಾಂಕಿನ ವ್ಯವಹಾರದಲ್ಲಿ ಮೋಸ ವಂಚನೆ ಇರಬಾರದು. ಒಮ್ಮೆ ಧೈರ್ಯದಿಂದ ಬಂಡಾವಾಳ ಹೂಡಿ ಗೆದ್ದರೆ ನಾವು ಎಂದೂ ಜೀವನದಲ್ಲಿ ಹಿಂದೆ ತಿರುಗಿ ನೋಡ ಬೇಕಾಗಿಲ್ಲ. ಯಶಸ್ಸು ನಮ್ಮನ್ನು ಹುಡುಕಿಕೊಂಡು ಬರುತ್ತದೆ ಇದಕ್ಕೆ ನಾನೆ ಉದಾಹರಣೆ ನನ್ನ ಉದ್ದಿಮೆಯ ಯಶಸ್ಸಿನಲ್ಲಿ ಬ್ಯಾಂಕಿನ ಪಾತ್ರ ಬಹಳ ದೊಡ್ಡದು ಎಂದರು. .
ಪಿಡ್ಲ್ಯೂಡಿ ಗುತ್ತಿಗೆದಾರರ ಸಂಘ ಮಂಗಳೂರು ಇದರ ಕಾರ್ಯದರ್ಶಿ ಬಿ.ಎಸ್.ಸತೀಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಇದೊಂದು ಉತ್ತಮ ಕಾರ್ಯಕ್ರಮವಾಗಿದ್ದು ಶಿಬಿರದ ಸದುಪಯೋಗವನ್ನು ಪ್ರತಿಯೊಬ್ಬರು ಪಡೆದು ಉದ್ದಿಮೆಯನ್ನು ಇನ್ನಷ್ಟು ಬೆಳೆಸಿ ಯಶಸ್ವಿಯಾಗಬೇಕೆಂದರು.

ಬ್ಯಾಂಕ್ ಆಫ್ ಬರೋಡಾ ಸಿಬ್ಬಂದಿಗಳಾದ ಸರಿತಾ, ವೆಂಕಟೇಶ್,ಪ್ರಶಾಂತ್, ಮತ್ತು ಗುತ್ತಿಗೆದಾರರ ಸಂಘದ ಸದಸ್ಯರಾದ ಸಂದೀಪ್ ನಾಯಕ್, ಗುರು ಪ್ರಸಾದ್ ರೈ, ರೋಹಿತ್, ವಿಜಯಕುಮಾರ್ ಸುಲೈಮಾನ್, ಆನಂದ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಪುತ್ತೂರು ತಾಲೂಕು ಪಿಡ್ಲ್ಯೂಡಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಗಿರೀಶ್ ನಾಯಕ್ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಅಕ್ಷಯ್ ಕಾರ್ಯಕ್ರಮ ನಿರೂಪಿಸಿದರು ಕಾರ್ಯದರ್ಶಿ ಲೊಕೇಶ್ ವಂದಿಸಿದರು.

LEAVE A REPLY

Please enter your comment!
Please enter your name here