ನಗರಸಭೆಯ ಉಪಚುನಾವಣೆ -ಮತದಾರರ ತೀರ್ಪಿಗೆ ತಲೆಬಾಗುತ್ತೇವೆ: ಅರುಣ್ ಪುತ್ತಿಲ

0

ಪುತ್ತೂರು: ಪುತ್ತೂರು ನಗರಸಭೆಯ ಎರಡು ವಾರ್ಡ್ ಗಳಿಗೆ ನಡೆದ ಉಪಚುನಾವಣೆಯಲ್ಲಿ ಮತದಾರರು ನೀಡಿರುವ ತೀರ್ಪಿಗೆ ತಲೆಬಾಗುತ್ತೇವೆ ಎಂದು ಪುತ್ತಿಲ ಪರಿವಾರದ ಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಹೇಳಿದ್ದಾರೆ.
ಉಪಚುನಾವಣೆಯ ಫಲಿತಾಂಶ ಪ್ರಕಟ ಹಿನ್ನೆಲೆಯಲ್ಲಿ ಡಿ.30ರಂದು ಪುತ್ತಿಲ ಪರಿವಾರದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅರುಣ್ ಕುಮಾರ್ ಪುತ್ತಿಲ, ಉಪಚುನಾವಣೆ ನಡೆದ ಎರಡೂ ವಾರ್ಡ್ ಗಳಲ್ಲಿ ಪುತ್ತಿಲ ಪರಿವಾರ ಸ್ಪರ್ಧಿಸಿತ್ತು. ಒಂದು ವಾರ್ಡ್ ನಲ್ಲಿ ನಮ್ಮ ಅಭ್ಯರ್ಥಿ ಎರಡನೇ ಸ್ಥಾನ ಪಡೆದಿದ್ದಾರೆ. ಇನ್ನೊಂದರಲ್ಲಿ ಸ್ಪರ್ಧೆ ನೀಡಿದ್ದಾರೆ. ಮತದಾರರು ನೀಡಿರುವ ತೀರ್ಪಿಗೆ ತಲೆಬಾಗುತ್ತೇವೆ ಎಂದು ಹೇಳಿದರು.

ನಮ್ಮಲ್ಲಿ ಯಾರೇ ರಾಜ್ಯ, ರಾಷ್ಟ್ರ ನಾಯಕರು ಬಂದು ಮತ ಯಾಚನೆ ಮಾಡಿಲ್ಲ. ನಮ್ಮಲ್ಲಿ ಸ್ಥಳೀಯ ನಾಯಕರೇ ಇರುವುದು. ಪುತ್ತಿಲ ಪರಿವಾರದ ಮೂಲಕ ನಡೆದ ಶ್ರೀನಿವಾಸ ಕಲ್ಯಾಣ ಹಿಂದೆ ನಮ್ಮ ಕಾರ್ಯಕರ್ತರು, ನಾಯಕರು ತೊಡಗಿಸಿಕೊಂಡಿದ್ದರು. ಹೀಗಾಗಿ ಮನೆ ಮನೆ ಸಂಪರ್ಕ ಕಷ್ಟ ಸಾಧ್ಯವಾಯ್ತು. ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ನಮ್ಮ ಸ್ಪರ್ಧೆ ಇತ್ತು. ಮತದಾರರು ಎರಡೂ ಕ್ಷೇತ್ರದಲ್ಲಿ ನಮಗೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಎರಡೂ ವಾರ್ಡ್ ಗಳಲ್ಲಿ ಸಕ್ರಿಯವಾಗಿ ನಮ್ಮ ಕಾರ್ಯಕರ್ತರು ಕೆಲಸ ಮಾಡ್ತಾರೆ. ಚುನಾವಣೆಯಲ್ಲಿ ಆಶೀರ್ವಾದ ಮಾಡಿ ಸಹಕರಿಸಿದವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ, ಪ್ರಮುಖರಾದ ಪ್ರಸಾದ್ ರೈ ಸಿ.ಎಚ್., ಉಮೇಶ್ ಕೋಡಿಬೈಲ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here