ಬಪ್ಪಳಿಗೆಯಲ್ಲಿ ಯು.ಆರ್.ಪ್ರಾಪರ್ಟೀಸ್ ಪ್ರವರ್ತಿತ ‘ಶ್ರೀಮಾ ಹಿಲ್ಸ್’ ವಸತಿ ಬಡಾವಣೆ ಉದ್ಘಾಟನೆ

0


*ಚಾಮುಂಡಿಬೆಟ್ಟದಲ್ಲಿ ನಿಂತು ಮೈಸೂರು ನಗರ ನೋಡಿದ ಅನುಭವವಾಗುತ್ತಿದೆ- ಡಾ. ಎಂ.ಕೆ.ಪ್ರಸಾದ್
*ನಗರದ ಅಭಿವೃದ್ಧಿ ರಿಯಲ್ ಎಸ್ಟೇಟ್‌ನಿಂದ ಮಾತ್ರ ಸಾಧ್ಯ – ಅಶೋಕ್ ಕುಮಾರ್ ರೈ
*ಬಡಾವಣೆಯಿಂದ ಜನರಿಗೆ ನೆಮ್ಮದಿಯ ವಾಸ್ತವ್ಯ – ಸಂಜೀವ ಮಠಂದೂರು
*ಉಜ್ವಲ್‌ರವರು ಯುವಕರಿಗೆ ರೋಲ್ ಮೋಡೆಲ್ – ಬಲರಾಮ ಆಚಾರ್ಯ
*ಉಜ್ವಲ್‌ರವರಿಂದ ಪುಣ್ಯದ ಕೆಲಸ -ಸಂತೋಷ್ ರೈ ನಳೀಲು
*ಯೋಜನಾ ಪ್ರಾಧಿಕಾರದಿಂದ ಅನೇಕ ಕೆಲಸ ಆಗಿದೆ – ಭಾಮಿ ಅಶೋಕ್ ಶೆಣೈ
*ಯಶಸ್ಸನ್ನು ಸಿಬ್ಬಂದಿವರ್ಗ, ಸ್ನೇಹಿತರಿಗೆ ಅರ್ಪಣೆ -ಉಜ್ವಲ್ ಪ್ರಭು

ಪುತ್ತೂರು: ಪುತ್ತೂರು ನಗರವನ್ನು ಆಧುನೀಕರಣದ ಜೊತೆಗೆ ಸ್ವಚ್ಛ ಮತ್ತು ಸುಂದರ ನಗರವನ್ನಾಗಿಸುವ ನಿಟ್ಟಿನಲ್ಲಿ ಪ್ರಾಧಿಕಾರದ ನಿಯಮಾವಳಿಯಂತೆ ಬಪ್ಪಳಿಗೆಯಲ್ಲಿ ನಿರ್ಮಾಣಗೊಂಡಿರುವ ಯು.ಆರ್.ಪ್ರಾಪರ್ಟಿಸ್ ಪ್ರವರ್ತಿತ ’ಶ್ರೀಮಾ ಹಿಲ್ಸ್’ ಬಡಾವಣೆಯ ಉದ್ಘಾಟನಾ ಸಮಾರಂಭ ಡಿ.31ರಂದು ಸಂಜೆ ನಡೆಯಿತು. ಪುತ್ತೂರು ಆದರ್ಶ ಆಸ್ಪತ್ರೆಯ ಡಾ.ಎಂ.ಕೆ.ಪ್ರಸಾದ್ ಅವರು ’ಶ್ರೀಮಾ ಹಿಲ್ಸ್’ ವಸತಿ ಬಡಾವಣೆಯನ್ನು ಉದ್ಘಾಟಿಸಿದರು. ಶಾಸಕ ಅಶೋಕ್ ಕುಮಾರ್ ರೈ ಅವರು ಸಭಾ ಕಾರ್ಯಕ್ರಮ ಉದ್ಘಾಟಿಸಿದರು.
ಚಾಮುಂಡಿಬೆಟ್ಟದಲ್ಲಿ ನಿಂತು ಮೈಸೂರು ನಗರ ನೋಡಿದ ಅನುಭವ: ’ಶ್ರೀಮಾ ಹಿಲ್ಸ್’ ಉದ್ಘಾಟಿಸಿದ ಪುತ್ತೂರು ಆದರ್ಶ ಆಸ್ಪತ್ರೆಯ ಡಾ.ಎಮ್.ಕೆ.ಪ್ರಸಾದ್ ಅವರು ಮಾತನಾಡಿ, ಈ ರೀತಿಯಲ್ಲಿ ಶ್ರೀಮಾ ಹಿಲ್ಸ್ ಇರುತ್ತದೆ ಎಂಬು ಗ್ರಹಿಸಿರಲಿಲ್ಲ. ಗುಡ್ಡದ ಮೇಲೆ ಮನೆ ಮಾಡುವುದೆಂದಿದ್ದೆ. ಆದರೆ ಇಲ್ಲಿ ಬರುವಾಗ ಎಕ್ಸ್‌ಪರ್ಟ್ ಆಗಿರುವುದನ್ನು ನೋಡಿದ್ದೇನೆ. ಉಜ್ವಲ್ ಅವರು ಸಾಧಾರಣ ಮನುಷ್ಯ ಅಲ್ಲ. ಇವರಲ್ಲಿ ತುಂಬಾ ಯೋಜನೆ ಇದೆ. ಮೊದಲು ಇಲ್ಲ ಬರಿ ಕಾಡು ಇತ್ತು. ಇವತ್ತು ಅದು ಪೂರ್ಣ ಅಭಿವೃದ್ದಿಗೊಂಡಿದೆ. ಗ್ರೌಂಡ್‌ನಲ್ಲಿ ಮನೆ ಕಟ್ಟುವುದು ಯಾವತ್ತು ಶಾಶ್ವತ. ಹಾಗಾಗಿ ಇಂತಹ ಬಡವಾವಣೆ ಅಗತ್ಯ ಎಂದ ಅವರು ಶ್ರೀಮಾ ಹಿಲ್ಸ್ ಮೇಲೆ ನಿಂತು ನೋಡುವಾಗ ಪುತ್ತೂರು ನಗರ ಪೂರ್ಣ ಕಾಣುತ್ತಿದೆ. ಚಾಮುಂಡಿಬೆಟ್ಟದ ಮೇಲೆ ನಿಂತು ಮೈಸೂರು ನಗರವನ್ನು ನೋಡಿದಂತಾಗಿದೆ. ಮಂಗಳೂರಿನಲ್ಲಿ 10ನೇ ಮಹಡಿಯಲ್ಲಿ ನಿಂತು ಮಂಗಳೂರು ನಗರವನ್ನು ನೋಡುವಂತ ರೀತಿಯಲ್ಲಿ ಉಜ್ವಲ್‌ರವರು ಯೋಜನೆ ರೂಪಿಸಿದ್ದಾರೆ. ಅವರಿಗೆ ಶುಭವಾಗಲಿ ಎಂದರು.



ನಗರದ ಅಭಿವೃದ್ಧಿ ರಿಯಲ್ ಎಸ್ಟೇಟ್‌ನಿಂದ ಮಾತ್ರ ಸಾಧ್ಯ: ಸಭಾ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಅಶೋಕ್ ಕುಮಾರ್ ರೈ ಅವರು ಮಾತನಾಡಿ, ಉಜ್ವಲ್ ಅವರು ಪುತ್ತೂರಿಗೆ ಉತ್ತಮ ಕೊಡುಗೆ ಕೊಟ್ಟಿದ್ದಾರೆ. ಪುತ್ತೂರಿನಲ್ಲೂ ಈ ರೀತಿಯ ಲೇ ಔಟ್ ಮಾಡಬಹುದು ಎಂಬುದನ್ನು ನಮೆಗೆಲ್ಲ ತಿಳಿಸುವ ವಿಚಾರ ಆಗಿದೆ. ನಾನು ಕೂಡಾ ರಿಯಲ್ ಎಸ್ಟೇಟ್ ಉದ್ಯಮಿ. ಉಜ್ವಲ್ ಅವರು ಈ ಉದ್ಯಮ ಆರಂಭ ಮಾಡುವಾಗ ನನ್ನಲ್ಲಿ ನಿರಂತರ ಚರ್ಚೆ, ಮಾರ್ಗದರ್ಶನ ಕೇಳುತ್ತಿದ್ದರು. ರಿಯಲ್ ಎಸ್ಟೇಟ್ ಮಾಡುವವರು ಕಳ್ಳರು ಎಂಬ ಮನೋಭಾವ ಜನರಲ್ಲಿ ಇದೆ. ಆದರೆ ನಿಜವಾಗಿ ರಿಯಲ್‌ಎಸ್ಟೇಟ್‌ನಿಂದ ರಾಜ್ಯಕ್ಕೆ ಬರುವ ತೆರಿಗೆ ಬೇರೆ ಯಾವ ಉದ್ಯಮದಿಂದಲೂ ಬರುವುದಿಲ್ಲ. ನಗರದ ಅಭಿವೃದ್ದಿ ರಿಯಲ್‌ಎಸ್ಟೇಟ್‌ನಿಂದ ಮಾತ್ರ ಸಾಧ್ಯ ಎಂದರು. ರಿಯಲ್ ಎಸ್ಟೇಟ್ ಉದ್ಯಮ ಬೆಳೆಯಬೇಕು. ರಿಯಲ್ ಎಸ್ಟೇಟ್‌ಗೆ ಪೂರಕವಾಗಿ ಉದ್ದಿಮೆಗಳೂ ಪುತ್ತೂರಿಗೆ ಬರಬೇಕು. ಈ ನಿಟ್ಟಿನಲ್ಲಿ ರೂ.70 ಕೋಟಿಯಲ್ಲಿ ಕೆ.ಎಮ್.ಎಫ್‌ ಪುತ್ತೂರಿಗೆ ಬರಲಿದೆ. ಕೊಲದಲ್ಲಿ ಪಶುವೈದ್ಯಕೀಯ ಕಾಲೇಜಿಗೆ ರೂ. 50 ಕೋಟಿ ಅನುದಾನ ಮಂಜೂರಾಗಿದೆ. 3 ಸಾವಿರ ಮಕ್ಕಳು ಅಲ್ಲಿ ವ್ಯಾಸಂಗ ಮಾಡಲಿದ್ದಾರೆ. ಆಗ ಅಲ್ಲಿ ಮತ್ತೆ ಮನೆ ಬೇಡಿಕೆ ಹೆಚ್ಚುತ್ತದೆ ಎಂದ ಅಶೋಕ್ ಕುಮಾರ್ ರೈಯವರು, ನಾನು ಶಾಸಕನಾಗಿ ಬಂದಾಗ ಇಲ್ಲಿನ ಉದ್ಯಮಿಗಳು ಎಫ್ಎಆರ್ ಮತ್ತು ಕವರೇಜ್ ಏರಿಯ ಅನ್ನು ಜಾಸ್ತಿ ಮಾಡುವಂತೆ ನನ್ನಲ್ಲಿ ಮನವಿ ಮಾಡಿದ್ದರು. 2 ತಿಂಗಳಲ್ಲೇ ಅದು ಆಗಿದೆ. ಆದರೆ ಮುಂದೆ ಇಲ್ಲಿ ಅಧಿಕಾರಿಗಳು ಏನಾದರು ತೊಂದರೆ ಕೊಟ್ಟರೆ ನನ್ನಲ್ಲಿ ಹೇಳಿ ಎಂದರು. ಪುತ್ತೂರಿನಲ್ಲಿ ಅಭಿವೃದ್ಧಿಯ ಕೆಲಸ ಆಗಬೇಕು. ಪುತ್ತೂರನ್ನು ಟೂರಿಸಮ್ ಆಗಿ ಮಾಡಬೇಕೆಂಬ ಚಿಂತನೆ ಇದೆ. ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಬೀರಮಲೆ ಗುಡ್ಡೆಯನ್ನು ಅಭಿವೃದ್ಧಿ ಮಾಡಲಾಗುವುದು ಎಂದರು.


ಬಡಾವಣೆಯಿಂದ ಜನರಿಗೆ ನೆಮ್ಮದಿಯ ವಾಸ್ತವ್ಯ: ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ, ಪುತ್ತೂರು ನಗರದಲ್ಲಿ 70 ಸಾವಿರ ಜನಸಂಖ್ಯೆ ಇದೆ. ಜನಸಂಖ್ಯೆ 1 ಲಕ್ಷಕ್ಕೆ ಏರಿದಾಗ ಪುತ್ತೂರು ನಗರ ಹೇಗೆ ಬೆಳೆಯಬೇಕು. ಇಲ್ಲಿನ ಜನರಿಗೆ ಮೂಲಭೂತ ಸೌಕರ್ಯ ಹೇಗೆ ದೊರಕಬೇಕೆಂಬ ಚಿಂತನೆ ಇಟ್ಟುಕೊಂಡು ಯುವಕ ಉಜ್ವಲ್ ಯೋಜನೆ ರೂಪಿಸಿದ್ದಾರೆ. ಬಹಳಷ್ಟು ಯುವಕರು ಸರಕಾರಿ ಉದ್ಯೋಗ ಬಯಸಿ ಬದುಕು ಕಟ್ಟಿಕೊಳ್ಳುವ ಯೋಚನೆಯಲ್ಲಿ ಇರುತ್ತಾರೆ. ಆದರೆ ಉಜ್ವಲ್‌ರವರು ತನ್ನ ಮಾತೃಭೂಮಿಯಲ್ಲಿ ಉದ್ಯಮ ಆರಂಭಿಸಿ ಒಂದಷ್ಟು ರಿಸ್ಕ್ ತೆಗೆದುಕೊಂಡು ಯುವಕರನ್ನು ಒಟ್ಟುಗೂಡಿಸಿ ತನ್ನ ಉದ್ಯಮವನ್ನು ಎತ್ತರಕ್ಕೆ ಬೆಳೆಸಿ ಇತರರಿಗೆ ಆದರ್ಶ ಆಗಿದ್ದಾರೆ. ಅವರ ಆದರ್ಶ ಎಲ್ಲಾ ಯುವಕರಲ್ಲಿ ಇರಲಿ ಎಂದು ಹಾರೈಸಿದರು. ಪುತ್ತೂರು ನಗರಸಭೆ ಆಗಿ ಪರಿವರ್ತನೆ ಆದ ಬಳಿಕ ಪುತ್ತೂರಿನ ಜನತೆ ಬೇರೆ ಬೇರೆ ಸೌಲಭ್ಯ ಪಡೆಯುವ ಸಂದರ್ಭದಲ್ಲಿ ಮೂಲಭೂತವಾಗಿ ಕುಡಿಯುವ ನೀರು, ರಸ್ತೆ, ವಿದ್ಯುತ್, ಡ್ರೈನೇಜ್, ಪಾರ್ಕ್ ಇರಬೇಕು. ಇಂತಹ ಸಂದರ್ಭದಲ್ಲಿ ವ್ಯವಸ್ಥಿತವಾದ ಬಡಾವಣೆ ಇದ್ದಾಗ ಖಂಡಿತ ಜನ ನೆಮ್ಮದಿಯಿಂದ ವಾಸ್ತವ್ಯ ಮಾಡಲು ಸಾಧ್ಯ. 400 ವರ್ಷಗಳ ಹಿಂದೆ ನಾಡಪ್ರಭು ಕೆಂಪೇಗೌಡರು ಬೆಂಗಳೂರನ್ನು ವ್ಯವಸ್ಥಿತ ನಗರವನ್ನಾಗಿಸಿದಾರೋ ಅದೇ ಮಾದರಿಯ ನಗರ ಪುತ್ತೂರು ಆಗಲು ಸಾಧ್ಯ. ಅದಕ್ಕೆ ಯು.ಆರ್ ಪ್ರಾಪರ್ಟೀಸ್ ದೊಡ್ಡ ಕೊಡುಗೆ ಕೊಟ್ಟಿದೆ ಎಂದು ಸಂಜೀವ ಮಠಂದೂರು ಹೇಳಿದರು.
ಉಜ್ವಲ್ ಯುವಕರಿಗೆ ರೋಲ್ ಮೋಡೆಲ್: ಜಿ.ಎಲ್. ಆಚಾರ್ಯ ಜ್ಯುವೆಲ್ಲರ‍್ಸ್‌ನ ಮಾಲಕ ಜಿ.ಎಲ್. ಬಲರಾಮ ಆಚಾರ್ಯ ಅವರು ಮಾತನಾಡಿ, ಉಜ್ವಲ್ ಅವರು ಬಹಳ ಅತ್ಯುತ್ತಮ ಸಾಧನೆ ಮಾಡುತ್ತಿದ್ದಾರೆ. ಎಲ್ಲರೂ ಇವತ್ತು ಕೆಲಸ ಬೇಕೆಂದು ಹೋಗುತ್ತಿರುವ ಸಂದರ್ಭದಲ್ಲಿ ಇವರು ಸ್ವಂತ ಉದ್ಯಮದ ಮೂಲಕ ಯುವಕರಿಗೆ ಕೆಲಸ ಕೊಡುತ್ತಿರುವುದು ಉತ್ತಮ ವಿಚಾರ. ಅವರು ಆಯ್ದುಕೊಂಡ ಉದ್ಯಮ ಸುಲಭದಲ್ಲವಾದರೂ ಅದರಲ್ಲಿ ಅವರು ಯಶಸ್ವಿಯಾಗಿದ್ದಾರೆ. ಒಂದು ಬೋರ್ ಗುಡ್ಡೆಯನ್ನು ನೋಡಿ ಲೇ ಔಟ್ ಮಾಡುವ ಕಲ್ಪಣೆ ಮೂಡಬೇಕು. ಅಂತಹ ಕಲ್ಪಣೆ ಉಜ್ವಲ್ ಅವರಲ್ಲಿದೆ. ಹಾಗಾಗಿ ಅವರು ಯುವಕರಿಗೆ ರೋಲ್ ಮೋಡೆಲ್ ಆಗಿದ್ದಾರೆ ಎಂದರು.

ಉಜ್ವಲ್‌ರವರಿಂದ ಪುಣ್ಯದ ಕೆಲಸ: ನಳಿಲು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಮತ್ತು ಕುಂಕುಮ್ ಅಸೋಸಿಯೇಟ್ಸ್‌ನ ಮಾಲಕ ಸಂತೋಷ್ ಕುಮಾರ್ ರೈ ಅವರು ಮಾತನಾಡಿ, ಲೇ ಔಟ್ ಮಾಡುವ ರಿಯಲ್ ಎಸ್ಟೇಟ್ ಉದ್ಯಮ ಪ್ರಪಂಚದಲ್ಲಿ ಅತೀ ದೊಡ್ಡ ಉದ್ಯಮ. ಆದರೆ ಇಂತಹ ಉದ್ಯಮ ಮಾಡಿದವರು ಬಹಳ ದುಡ್ಡು ಮಾಡುತ್ತಾರೆ ಎಂಬುದು ಇದರ ಅರ್ಥವಲ್ಲ. ರಿಯಲ್ ಎಸ್ಟೇಟ್‌ನಿಂದ ಎಲ್ಲಾ ವರ್ಗದ ಜನರಿಗೆ ಮನೆ ನಿರ್ಮಾಣ ಮಾಡಲು ಸಹಾಯ ಆಗುತ್ತದೆ. ಈ ಉದ್ಯಮ ಅಷ್ಟು ಸುಲಭವಲ್ಲ. ಇದರಲ್ಲಿ ನಮಗೆ ರಾತ್ರಿ ನಿದ್ದೆ ಬಾರದ ಸ್ಥಿತಿಯೂ ಇದೆ. ಇಲ್ಲಿನ ಶ್ರೀಮಾ ಹಿಲ್ಸ್ ಅದ್ಭುತವಾಗಿ ಕಾಣುತ್ತಿದೆ. ಆದರೆ ಉಜ್ವಲ್ ಪ್ರಭು ಅವರ ಇದರ ಹಿಂದಿನ ಶ್ರಮವನ್ನು ನಾನು ಕಣ್ಣಾರೆ ಕಂಡಿದ್ದೇನೆ. ಉಜ್ವಲ್ ಪ್ರಭು ಅವರು ಪುತ್ತೂರಿನ ಸಾವಿರಾರು ಮಂದಿಗೆ ಮನೆ ಸೈಟ್ ಮಾಡಿಕೊಟ್ಟಿದ್ದಾರೆ. ಒಂದು ಕುಟುಂಬಕ್ಕೆ ಮನೆ ಸೂರು ಮಾಡಿಕೊಟ್ಟಿರುವುದು ಪುಣ್ಯದ ಕೆಲಸ ಎಂದು ಹೇಳಿದರು.

ಯೋಜನಾ ಪ್ರಾಧಿಕಾರದಿಂದ ಅನೇಕ ಕೆಲಸ ಆಗಿದೆ: ನಗರಸಭಾ ಸದಸ್ಯರಾಗಿರುವ ಪುಡಾ ನಿಕಟಪೂರ್ವ ಅಧ್ಯಕ್ಷ ಭಾಮಿ ಅಶೋಕ್ ಶೆಣೈ ಅವರು ಮಾತನಾಡಿ, ಪುತ್ತೂರು ನಗರಕ್ಕೆ ಅನೇಕ ಕೊಡುಗೆಯನ್ನು ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಶಾಸಕ ಸಂಜೀವ ಮಠಂದೂರು, ಮಂಗಳೂರು ಶಾಸಕ ವೇದವ್ಯಾಸ ಕಾಮತ್ ನೀಡಿದ್ದಾರೆ. ಅದರಲ್ಲಿ ಒಂದಾದ ನಾನು ಯೋಜನಾ ಪ್ರಾಧಿಕಾರದಲ್ಲಿ ಅಧ್ಯಕ್ಷನಾಗಿದ್ದ ಸಂದರ್ಭ ಬಿರಮಲೆಗುಡ್ಡೆಗೆ ರೂ. 1.50 ಕೋಟಿ ಬಜೆಟ್‌ನಲ್ಲಿ ಮೀಸಲಿರಿಸಿದ್ದೆ. ಕಟ್ಟಡ ನಿವೇಶನ ಎಫ್ಎಆರ್‌ಗೆ ಸಂಬಂಧಿಸಿ ರಾಘವೇಂದ್ರ ಪ್ರಭು, ರವಾಳ್‌ನಾಥ್ ಪ್ರಭು, ಉಜ್ವಲ್ ಪ್ರಭು ಅವರು ನನ್ನಲ್ಲಿ ಮನವಿ ಮಾಡಿದಂತೆ ಒಂದೂವರೇ ವರ್ಷದ ಮೊದಲು ಅದರ ಬಗ್ಗೆ ನಿರ್ಣಯ ಮಾಡಿ ನಾನು ಸರಕಾರಕ್ಕೆ ಸಲ್ಲಿಸಿ ಅಲ್ಲಿ ಅದಕ್ಕೆ ಸಹಿ ಕೂಡಾ ಆಗಿತ್ತು. ಅದು ಇವತ್ತು ಎಲ್ಲರಿಗೂ ಪ್ರಯೋಜನ ಆಗಿದೆ. ಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಣಿಗೆ ರೂ.90ಲಕ್ಷ ಮತ್ತು ಬಲ್ನಾಡಿನಲ್ಲಿ ಕೆರೆ ಅಭಿವೃದ್ಧಿಗೆ ರೂ. 60 ಲಕ್ಷ ಅನುದಾನ ಇಡಲಾಗಿತ್ತು ಎಂದ ಹೇಳಿದ ಅವರು ಯೋಜನಾ ಪ್ರಾಧಿಕಾರಕ್ಕೆ ಇಷ್ಟೇ ಇತಿಮಿತಿ ಇದೆ. ಅದು ಪ್ಲಾನಿಂಗ್ ಅತೋರಿಟಿ ಮಾತ್ರ. ಸೈಟ್ ಖರೀದಿಸಿ, ಕಟ್ಟುವ ಅಧಿಕಾರ ಯೋಜನಾ ಪ್ರಾಧಿಕಾರಕ್ಕೆ ಇಲ್ಲ ಎಂದರು.

ಯಶಸ್ಸು ಸಿಬ್ಬಂದಿವರ್ಗ, ಸ್ನೇಹಿತರಿಗೆ ಅರ್ಪಣೆ: ಯು ಎಂದರೆ ಉಜ್ವಲ್ ಆರ್ ಎಂದರೆ ನನ್ನ ಧರ್ಮಪತ್ನಿ ರಕ್ಷಾ, ಶ್ರೀಮಾ ಅಂದರೆ ನನ್ನ ಮಗಳು ಎಂದು ತಮ್ಮ ಪರಿಚಯ ಮಾಡಿಕೊಂಡು ಪ್ರಾಸ್ತಾವಿಕವಾಗಿ ಮಾತನಾಡಿದ ಉಜ್ವಲ್ ಅವರು, 2016ರಲ್ಲಿ ಯು.ಆರ್ ಪ್ರಾಪರ್ಟೀಸ್ ಸಂಸ್ಥೆಯನ್ನು ಪುತ್ತೂರಿನ ಜಿ.ಎಲ್ ಟ್ರೇಡ್‌ನಲ್ಲಿ ಆರಂಭಿಸಿದ್ದೆವು. 8 ವರ್ಷದಿಂದ ಅಲ್ಲೇ ಉತ್ತಮ ಕಚೇರಿ ಹೊಂದಿದ್ದೇವೆ. ಆರಂಭದಲ್ಲಿ ಸಣ್ಣ ಕನ್‌ಸ್ಟ್ರಕ್ಷನ್ ಕಂಪೆನಿ ಮಾಡಿದ್ದೆವು. ಮತ್ತೆ ಒಂದೊಂದೆ ಲ್ಯಾಂಡ್ ತೆಗೆದು, ಸೈಟ್ ಮಾಡಿಕೊಡಿಸುವ ಎಂದೆನಿಸಿತು. ಇದಕ್ಕೆಲ್ಲ ಕಾರಣ ನಮ್ಮ ಸಿಬ್ಬಂದಿವರ್ಗ ಮತ್ತು ನನ್ನ ಸ್ನೇಹಿತರು. ಇದು ಒಬ್ಬರಿಂದಾಗುವ ಸಾಧನೆಯಲ್ಲ. ಎಲ್ಲರೂ ಬೇಕಾಗುತ್ತದೆ. ಅಧಿಕಾರಿ ವರ್ಗದವರು, ಶಾಸಕರು, ಪೊಲೀಸ್ ಇಲಾಖೆ, ಸಹಪಾಠಿಗಳೂ ಬೇಕಾಗುತ್ತಾರೆ. ನನ್ನ ಎಲ್ಲಾ ಯೋಜನೆಗೆ ಸಂಬಂಧಿಸಿ ಅನೇಕ ಸಲ ಶಾಸಕ ಅಶೋಕ್ ಕುಮಾರ್ ರೈ ಅವರಲ್ಲಿ ಸಲಹೆ ಕೇಳಿದ್ದೆವು. ಅದಕ್ಕೆ ಅವರು ಹಲವು ಮಾರ್ಗದರ್ಶನ ನೀಡಿದ್ದಾರೆ. ಈ ಎಲ್ಲಾ ಯಶಸ್ಸು ಇವತ್ತು ನನ್ನ ಸಿಬ್ಬಂದಿ ವರ್ಗ ಮತ್ತು ಸ್ನೇಹಿತರಿಗೆ ಅರ್ಪಿಸಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮುಂದೆ ಬೇರೆ ಬೇರೆ ಯೋಜನೆ ಇದೆ. ನಮ್ಮ ಮೇಲೆ ಪ್ರೀತಿ ಇಟ್ಟ ಪುತ್ತೂರಿನ ಜನತೆಗೆ ಅಬಾರಿಯಾಗಿದ್ದೇನೆ ಎಂದರು.

ಕ್ಯಾಂಪ್ಕೋ ಮಾಜಿ ಅಧ್ಯಕ್ಷ ಎಸ್.ಆರ್ ರಂಗನಾಥ್, ಉಜ್ವಲ್ ಅವರ ತಾಯಿ ಉಷಾ ಪ್ರಭು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀಮಾ ಉಜ್ವಲ್ ಪ್ರಾರ್ಥಿಸಿದರು. ವೆಬ್‌ಪೀಪಲ್ ಪಾಲುದಾರ ಶ್ರೀನಿವಾಸ್ ಸ್ವಾಗತಿಸಿ, ವಂದಿಸಿದರು. ನವೀನ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ಅಡ್ವಕೇಟ್ ಜನರಲ್ ಅರುಣ್ ಶ್ಯಾಮ್, ನ್ಯಾಯವಾದಿಗಳಾದ ಮೋಹನ್ ಭಟ್, ಮಹೇಶ್ ಕಜೆ, ಬೆಟ್ಟ ಈಶ್ವರ ಭಟ್, ಕ್ಯಾಂಪ್ಕೋ ಮಾಜಿ ಅಧ್ಯಕ್ಷ ಎಸ್.ಆರ್ ಸತೀಶ್ಚಂದ್ರ, ಚಂದ್ರಶೇಖರ್ ರಾವ್ ಬಪ್ಪಳಿಗೆ, ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಎಸ್.ಅಪ್ಪಯ್ಯ ಮಣಿಯಾಣಿ, ತಾ.ಪಂ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಶ್ರೀಧರ್ ಪಟ್ಲ, ಭಾಮಿ ಜಗದೀಶ್ ಶೆಣೈ, ನಗರಸಭೆ ನಿಕಟಪೂರ್ವ ಉಪಾಧ್ಯಕ್ಷೆ ವಿದ್ಯಾ ಗೌರಿ, ರಾಮ್ ಭಟ್, ಕರುಣಾಕರ ರೈ, ಅಚ್ಚುತ ನಾಯಕ್, ಉದಯ ಶಂಕರ್ ಭಟ್ ಮಚ್ಚಿಮಲೆ, ಜಯಶ್ಯಾಮ್ ನೀರ್ಕಜೆ, ಸಹಜ್ ರೈ ಬಳಜ್ಜ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಡಾ. ಶ್ರೀಪತಿ ರಾವ್, ನಗರಸಭೆ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್, ಮಾಜಿ ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ, ಮುರಳಿಕೃಷ್ಣ ಹಸಂತಡ್ಕ, ರಾಜಶೇಖರ್ ಜೈನ್, ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಅಧ್ಯಕ್ಷ ಉಮೇಶ್ ನಾಯಕ್, ಭಾಸ್ಕರ್ ರೈ ಕಂಟ್ರಮಜಲು, ಸಚಿನ್ ಶೆಣೈ ಸಹಿತ ಹಲವಾರು ಮಂದಿ ಸಭೆಯಲ್ಲಿ ಉಪಸ್ಥಿತರಿದ್ದರು.

ಯು.ಆರ್ ಪ್ರಾಪರ್ಟೀಸ್‌ನಿಂದ ಪುತ್ತೂರು ಬೆದ್ರಾಳದಲ್ಲಿ 12 ಎಕ್ರೆ ವಿಸ್ತೀರ್ಣದಲ್ಲಿ ಟೌನ್‌ಶಿಪ್ ಮಾದರಿಯ ವಸತಿ ಬಡಾವಣೆಯು ನಿರ್ಮಾಣಗೊಳ್ಳುತ್ತಿದೆ. ಇದು ಪುತ್ತೂರಿಗೆ ಪ್ರಥಮವಾಗಲಿದೆ. ಈಜುಕೊಳ, ವಾಕಿಂಗ್ ಪಾಥ್, ಮಕ್ಕಳ ಉದ್ಯಾನವನ, ಮಕ್ಕಳ ಆಟದ ಕೇಂದ್ರ, ಅತ್ಯಾಧುನಿಕ ಜಿಮ್, ಯೋಗ ಕೇಂದ್ರ ಒಳ್ಳಗೊಳ್ಳಲಿದೆ.

ಕ್ವಾಲಿಟಿ ಲೇ ಔಟ್

ಸಾಮಾನ್ಯವಾಗಿ ಬಿಲ್ಡರ‍್ಸ್‌ಗಳು ಬಡಾವಣೆಯು ಚಂದ ಕಾಣುವ ರೀತಿಯಲ್ಲಿ ಡಾಮರು ಹಾಕಿ ಕೊಡುತ್ತಾರೆ. ಕ್ರಮೇಣ ಡಾಮರು ಎದ್ದು ಹೋಗುತ್ತದೆ. ಆದರೆ ಉಜ್ವಲ್ ಅವರು ರಸ್ತೆಯನ್ನು ಪೂರ್ಣ ಕಾಂಕ್ರೀಟ್‌ಗೊಳಿಸಿದ್ದಾರೆ. ಇದರ ಜೊತೆಗೆ ಡ್ರೈನೇಜ್ ಕೂಡಾ ಮಾಡಿಸುವ ಮೂಲಕ ಕ್ವಾಲಿಟಿ ಲೇ ಔಟ್ ಅನ್ನುವಷ್ಟರ ಮಟ್ಟಿಗೆ ಕೆಲಸ ಮಾಡಿಸಿದ್ದಾರೆ. ಕ್ವಾಲಿಟಿ ಕಸ್ಟಮರ್ ಕೂಡ ಅವರ ಜೊತೆಯಲ್ಲಿದ್ದಾರೆ. ಪುತ್ತೂರಿನ ಅಭಿವೃದ್ಧಿಗೆ ಉಜ್ವಲ್ ಅವರು ಒಳ್ಳೆಯ ಕೆಲಸ ಮಾಡಲಿ.
-ಅಶೋಕ್ ಕುಮಾರ್ ರೈ ಶಾಸಕರು ಪುತ್ತೂರು

LEAVE A REPLY

Please enter your comment!
Please enter your name here