ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯಲ್ಲಿ ಹೊನಲು ಬೆಳಕಿನ ಕ್ರೀಡೋತ್ಸವ,ವಾರ್ಷಿಕೋತ್ಸವ

0

ಪುತ್ತೂರು: ಉಡುಪಿಯ ಶ್ರೀಕೃಷ್ಣನ ಕ್ಷೇತ್ರದಿಂದ ನಾನು ಬಂದಿದ್ದೇನೆ. ಶ್ರೀಕೃಷ್ಣನೇ ನನ್ನನ್ನು ಇಲ್ಲಿಗೆ ಕಳಿಸಿದ್ದಾನೆ. ಇಲ್ಲಿನ ದೊಡ್ಡ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ತುಂಬಾ ಸಂತೋಷವಾಗುತ್ತಿದೆ. ಈ ವಿದ್ಯಾಲಯವನ್ನು ಹೆಮ್ಮೆ ಪಡುವ ರೀತಿಯಲ್ಲಿ ನಡೆಸುತ್ತಾ ಇದ್ದೀರಿ ಎಂದು ಉಡುಪಿ ಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರ ಸ್ವಾಮೀಜಿ ಹೇಳಿದರು. ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ನಡೆದ ಹೊನಲು ಬೆಳಕಿನ ಕ್ರೀಡೋತ್ಸವ ಮತ್ತು ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಉಡುಪಿಯಲ್ಲಿ ಕೆಲವೇ ದಿನಗಳಲ್ಲಿ ಪರ್ಯಾಯ ಕಾರ್ಯಕ್ರಮ ನಡೆಯುತ್ತದೆ. ಇದನ್ನು ವಿಶ್ವಗೀತಾ ಪರ್ಯಾಯ ಎಂದು ಕರೆಯಲಾಗುತ್ತಿದೆ. ಉಡುಪಿಯಲ್ಲಿ ನಡೆಯುವ ಚತುರ್ಥ ಪರ್ಯಾಯಕ್ಕೆ ನಿಮ್ಮೆಲ್ಲರನ್ನು ಆಮಂತ್ರಿಸುತ್ತಿದ್ದೇನೆ. ಪರ್ಯಾಯದ ಪ್ರಯುಕ್ತ ಕೋಟಿ ಗೀತಾ ಲೇಖನ ಯಜ್ಞ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಜಗತ್ತಿನಾದ್ಯಂತ ಒಂದು ಕೋಟಿ ಜನರು ಭಗವದ್ಗೀತೆ ಬರೆದು ಕೃಷ್ಣನಿಗೆ ಸಮರ್ಪಣೆ ಮಾಡುವ ಕಾರ್ಯಕ್ರಮ ಇದಾಗಿದೆ ಎಂದರು. ಕೃಷ್ಣನಿಗೆ ಪ್ರಿಯವಾದ ಸಾಂದೀಪನಿಯಲ್ಲಿ ಓದುವ ವಿದ್ಯಾರ್ಥಿಗಳಾದ ನೀವೆಲ್ಲರೂ ಕೂಡ ಬಗವದ್ಗೀತೆ ಬರೆದು ಭಾಗವಹಿಸಿ. ಈ ಮೂಲಕ ಸಾಂದೀಪನಿಯಲ್ಲಿ ಕಲಿತದಕ್ಕೆ ಸಾರ್ಥಕ ಪಡೆಯಿರಿ ನಮ್ಮ ಪರ್ಯಾಯದಲ್ಲಿ ನೀವೆಲ್ಲರೂ ಪಾಲ್ಗೊಳಬೇಕು. ನಿಮಗೆಲ್ಲರಿಗೂ ಶ್ರೀಕೃಷ್ಣನ ಅನುಗ್ರಹ ಸಿಗಲಿ ಎಂದರು.

ರಾಷ್ಟ್ರಭಕ್ತರ ನಿರ್ಮಾಣದ ಕಾರ್ಯ ಸಂಸ್ಥೆ ಮಾಡುತ್ತಿದೆ-ಸಂಸದ ನಳಿನ್:
ಮಾಜಿ ಬಿಜೆಪಿ ಅಧ್ಯಕ್ಷ, ಸಂಸದ ನಳಿನ್ ಕುಮಾರ್ ಮಾತನಾಡಿ ದ.ಕ. ಜಿಲ್ಲೆ ಶಿಕ್ಷಣದ ಕಾಶಿ. ಇಡೀ ದೇಶದಲ್ಲಿ ಅಧ್ಯಯನ ಮಾಡಿದರೆ ದ.ಕ.ಜಿಲ್ಲೆಯಲ್ಲಿ ಹಲವಾರು ಶಿಕ್ಷಣಸಂಸ್ಥೆಗಳಿವೆ. ಮೌಲ್ಯಾಧಾರಿತ, ನೈತಿಕಕತೆಯ ಸಂಸ್ಕಾರಯುತವಾದ ರಾಷ್ಟ್ರೀಯ ಶಿಕ್ಷಣದ ಜೊತೆಗೆ ರಾಷ್ಟ್ರಧರ್ಮವನ್ನು ತಿಳಿಸಿಕೊಡುವ ಕೆಸವನ್ನು ಗ್ರಾಮೀಣ ಭಾಗದ ಸಾಂದೀಪನಿ ವಿದ್ಯಾಸಂಸ್ಥೆ ಮಾಡುತ್ತಿದೆ ಎಂದರು. ಜ ಗತ್ತಿನ ಜನ ಅನಾಗರಿಕರಾಗಿದ್ದಾಗ ಭಾರತದ ಶಿಕ್ಷಣ ವ್ಯವಸ್ಥೆ ಉತ್ತಮವಾಗಿತ್ತು. ಗುರುಕುಲ ಮಾದರಿ ಶಿಕ್ಷಣ ಇತ್ತು. ಇದರಲ್ಲಿ ಜ್ಞಾನದ ವಿಕಸನದ ಶಿಕ್ಷಣ ಇತ್ತು. ಕೇವಲ ಡಾಕ್ಟರ್, ಇಂಜಿನಿಯರ್ ಮಾತ್ರ ಅಲ್ಲ ರಾಷ್ಟ್ರಭಕ್ತರ ನಿರ್ಮಾಣದ ಕಾರ್ಯವನ್ನು ಸಾಂದೀಪನಿ ಸಂಸ್ಥೆ ಮಾಡುತ್ತಿದೆ. ಇಲ್ಲಿ ಕಲಿತವರು ಮಾನವ ಬಾಂಬರ್‌ಗಳಾಗದೆ ರಾಷ್ಟ್ರಭಕ್ತರಾಗುತ್ತಾರೆ ಎನ್ನುವ ನಂಬಿಕೆ ನನಗಿದೆ. ಶೀಕ್ಷಣ ವ್ಯಾಪಾರೀಕರಣವಾಗುವ ಕಾಲದಲ್ಲಿ ಸೇವಾರೂಪದಲ್ಲಿ ಶಿಕ್ಷಣ ನೀಡುವ ಸಂಸ್ಥೆಯಾಗಿದೆ ಎಂದರು. ಪ್ರಧಾನಿ ಮೋದಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರುತ್ತಿದೆ. ಇದಕ್ಕೆ ಪೂರಕವಾಗಿ ನಮ್ಮ ಸಂಸ್ಕೃತಿ, ಧರ್ಮವನ್ನು ಕಲಿಸುವ ಶಿಕ್ಷಣ ಆಗುತ್ತಿದೆ ಎಂದು ಹೇಳಿ ಸಂಸ್ಥೆಗೆ ಅಭಿನಂದನೆ ಸಲ್ಲಿಸಿದರು.

ಎಲ್ಲರನ್ನು ವಿದ್ಯಾವಂತ, ಸಂಸ್ಕಾರಯುತರನ್ನಾಗಿ ಮಾಡಿ-ಉಮಾಶಂಕರ್:
ಚೆನ್ನಾರಾಯಪಟ್ಟಣದ ಉದ್ಯಮಿ, ಶಾಲೆಯ ಪೋಷಕರಾದ ಉಮಾಶಂಕರ್ ಮಾತನಾಡಿ ಮಕ್ಕಳಿಗೆ ಸಂಸ್ಕೃತಿ ಕಲಿಸಿಕೊಡಲಾಗುತ್ತಿದೆ. ಇದರ ಜೊತೆಗೆ ಸಂಸ್ಕಾರಯುತ ವಿದ್ಯೆ ಕೂಡ ಕಲಿಸಲಾಗುತ್ತಿದೆ. ಎಲ್ಲಾ ಮಕ್ಕಳನ್ನು ವಿದ್ಯಾವಂತರು ಹಾಗೂ ಸಂಸ್ಕಾರಯುತರನ್ನಾಗಿ ಮಾಡಿ ಎಂದು ಹೇಳಿ ಶುಭಹಾರೈಸಿದರು.

ಒಳ್ಳೆಯ ಪ್ರಜೆಗಳನ್ನು ಕೊಡುವ ಕೆಲಸ ಸಂಸ್ಥೆ ಮಾಡುತ್ತಿದೆ-ಅರುಣ್ ಪುತ್ತಿಲ:
ಪುತ್ತಿಲ ಪರಿವಾರದ ಸ್ಥಾಪಕರಾದ ಅರುಣ್ ಕುಮಾರ್ ಪುತ್ತಿಲ ಮಾತನಾಡಿ ಕಳೆದ 23 ವರ್ಷಗಳಿಂದ ಗುರುಕುಲ ಮಾದರಿಯ, ಗುಣಮಟ್ಟದ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನು ಪರಿಪೂರ್ಣವಾಗಿಸಿ ನಾಡಿಗೆ ಒಳ್ಳೆಯ ಪ್ರಜೆಗಳನ್ನು ಕೊಡುವ ಕೆಲಸವನ್ನು ಸಂಸ್ಥೆ ಮಾಡುತ್ತಿದೆ. ಅನೇಕ ಪ್ರತಿಭೆಗಳನ್ನು ಹೊತರುವ ಕಾರ್ಯ ಮಾಡಲಾಗುತ್ತಿದೆ. ಈ ಊರಿನ ಜನತೆಯ ಆಶಯದಂತೆ ಇಲ್ಲಿ ಪದವಿಪೂರ್ವ ಶಿಕ್ಷಣವನ್ನು ಕೂಡ ಪ್ರಾರಂಭಿಸಬೇಕು. ಇದು ಇಲ್ಲಿನ ಜನರ ಆಶಯವೂ ಆಗಿದೆ. ಎಂದು ಹೇಳಿದರು. ಉಡುಪಿ ಪರ್ಯಾಯದ ಅವಧಿಯಲ್ಲಿ ಮಾಡುವ ಕೋಟಿ ಗೀತಾ ಲೇಖನ ಯಜ್ಷ ಕಾರ್ಯಕ್ರಮದಲ್ಲಿ ನಾವೆಲ್ಲರೂ ಪಾಲ್ಗೊಳ್ಳೊಣ ಎಂದರು.

ಸಂಸ್ಥೆಯ ಪೋಷಕನಾಗಿ ಹೆಮ್ಮೆ ಪಡೆದುಕೊಂಡಿದ್ದೇನೆ-ರಾಕೇಶ್ ರೈ:
ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ ಮಾತನಾಡಿ ಸಾಂದೀಪನಿ ನಾನು ಈ ಸಂಸ್ಥೆಯ ಪೋಷಕನಾಗಿ ಅತ್ಯಂತ ಹೆಮ್ಮೆ ಪಡೆದುಕೊಂಡಿದ್ದೇನೆ. ರಾಷ್ಟ್ರಭಕ್ತರನ್ನು, ಹಾಗೂ ಸಭ್ಯ ನಾಗರಿಕರನ್ನು ಸೃಷ್ಟಿ ಮಾಡುವ ಪುಣ್ಯ ಸ್ಥಳ. ಇಲ್ಲಿ ನಡೆಯುವ ಕ್ರೀಡೋತ್ಸವವನ್ನು ಪೋಷಕರು ಸೇರಿದಂತೆ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ ಎಂದು ಹೇಳಿ ಶುಭಹಾರೈಸಿದರು.

ವಿದ್ಯಾರ್ಥಿಗಳು ಸಮಾಜದಲ್ಲಿ ಗೌರವಾನ್ವಿತರಾಗಿ ಬಾಳಬೇಕೆಂಬ ಕನಸು-ಭಾಸ್ಕರ್ ಆಚಾರ್:
ಸಂಚಾಲಕ ಭಾಸ್ಕರ್ ಆಚಾರ್ ಹಿಂದಾರು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ ಈ ಪರಿಸರದಲ್ಲಿ ಶಾಲೆ ಬೆಳಗಬೇಕಾದರೆ ದೈವಿಕ ಶಕ್ತಿಯೇ ಪ್ರೇರಣೆ. ಜಯರಾಮ ಕೆದಿಲಾಯರ ಕನಸಿನಂತೆ ಶಾಲೆ ಸ್ಥಾಪನೆ ಮಾಡಲಾಗಿದೆ. ಒಳ್ಳೆಯ ವಿದ್ಯಾರ್ಥಿಗಳು ಇಲ್ಲಿಂದ ಹೊರಗೆ ಬರಬೇಕು. ಸಮಾಜಕ್ಕೆ ಕಂಟಕವಾಗದೆ ಸಮಾಜದಲ್ಲಿ ಗೌರವಾನ್ವಿತರಾಗಿ ಬಾಳಬೇಕೆಂಬ ಕನಸು ಆಗಿದೆ ಎಂದರು.

ಶ್ರೀಕೃಷ್ಣ ಪರಮಾತ್ಮ ನಮ್ಮೊಂದಿಗೆ ಇದ್ದಾನೆ-ಜಯರಾಮ ಕೆದಿಲಾಯ:
ಅಧ್ಯಕ್ಷತೆ ವಹಿಸಿದ್ದ ಜಯರಾಮ ಕೆದಿಲಾಯ ಮಾತನಾಡಿ ಕೃಷ್ಣ ಮತ್ತು ಗಣಪತಿಯ ಆಶೀರ್ವಾದದಿಂದ ಕಾರ್ಯಕ್ರಮ ನಡೆಯುತ್ತಿದೆ. ಶ್ರೀಕೃಷ್ಣ ಪರಮಾತ್ಮ ನಮ್ಮೊಟ್ಟಿಗೆ ಇದ್ದಾನೆ. ಈ ಕಲ್ಪನೆಯಲ್ಲಿ ಸಂಸ್ಥೆ ಬೆಳಗುತ್ತಿದೆ. ನಿಮ್ಮ ಮಕ್ಕಳು ಉತ್ತಮ ಸಾಧನೆ ಮಾಡಲಿ ಎಂದು ಹೇಳಿ ಶುಭಹಾರೈಸಿದರು.

ಅಭಿನಂದನೆ: 2019-20ನೇ ಸಾಲಿನ ಎಸ್‌ಎಸ್‌ಎಲ್‌ಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅವರ ಪೋಷಕರೊಂದಿಗೆ ಅಭಿನಂದಿಸಲಾತು. ಶಾಲೆಗೆ ಪ್ರಥಮ ಸ್ಥಾನ ಪಡೆದ ಪ್ರಸಾದ್ ಜೆ.ಆರ್., ದ್ವಿತೀಯ ಸ್ಥಾನ ಪಡೆದ ಅಶ್ವಿತ್ ಮತ್ತು ಅಶ್ವಿಜಾ, ತೃತೀಯ ಸ್ಥಾನ ಪಡೆದ ಶ್ರಾವ್ಯ ಭಟ್‌ರವರನ್ನು ಅವರ ಪೋಷಕರೊಂದಿಗೆ ಅಭಿನಂದಿಸಲಾಯಿತು. ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾದ ಧವನ್, ಅರ್ಮನ್, ಕೆ.ರಂಜಿತಾ ಬೋರ್ಕರ್, ಜೆ.ಪಿ.ಪ್ರವೀಣ್ ರವರನ್ನು ಅಭಿನಂದಿಸಲಾಯಿತು.

ದತ್ತಿನಿಧಿ ವಿತರಣೆ/ಸನ್ಮಾನ: 2022-23ನೇ ಸಾಲಿನ ಎಸ್‌ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ದಿ. ಗೋಪಾಲಕೃಷ್ಣ ಕಡಂಬಲಿತ್ತಾಯರವರ ಸ್ಮರಣಾರ್ಥ ಸ್ಥಾಪಿತವಾದ ದತ್ತಿನಿಧಿ ವಿತರಿಸಲಾಯಿತು. ರಾಜ್ಯಕ್ಕೆ ತೃತೀಯ ರ‍್ಯಾಂಕ್ ಹಾಗೂ ಶಾಲೆಯ ಪ್ರಥಮ ಟಾಪರ್ ತೇಜಸ್ ಎಸ್.ಆರ್., ಎರಡನೇ ಟಾಪರ್ ಕೆ.ವಿ.ಅಶ್ವಥ್, ತೃತೀಯ ಟಾಪರ್ ಮಾನ್ವಿ ರೈ, ಮತ್ತು ಅಭಿನವ್‌ರವರನ್ನು ಸನ್ಮಾನಿಸಲಾಯಿತು. ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಡಾ.ಶಿವಾನಂದ, ಸದಸ್ಯರಾದ ಹರೀಶ್ ಪುತ್ತೂರಾಯ, ಅಶೋಕ್ ಕುಮಾರ್ ಪುತ್ತಿಲ, ಸುಬ್ರಾಯ ಬಿ.ಎಸ್., ಪ್ರಸನ್ನ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಘೋಷ್ ತಂಡದಿಂದ ಆಕರ್ಷಕ ಪ್ರದರ್ಶನ ನಡೆಯಿತು. ಬ್ಯಾಂಡ್ ಘೋಷ್‌ನೊಂದಿಗೆ ಅತಿಥಿಗಳನ್ನು ವೇದಿಕೆಗೆ ಕರೆತರಲಾಯಿತು. ಲಕ್ಷಣ ಕರಂದ್ಲಾಜೆ, ಹರೀಶ್ ಪುತ್ತೂರಾಯ, ಅಶೋಕ್ ಕುಮಾರ್ ಪುತ್ತಿಲ, ಶಿಕ್ಷಕ ಸುಚೇತ್‌ರವರು ಅತಿಥಿಗಳನ್ನು ಗೌರವಿಸಿದರು. ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಿದ ಲಕ್ಕಿ ಕೂಪನ್ ಡ್ರಾ ನಡೆಯಿತು. 10ನೇ ತರಗತಿಯ ಸಿದ್ದಾಂತ್ ತಾನೇ ರಚಿಸಿದ ಶ್ರೀಕೃಷ್ಣನ ಚಿತ್ರವನ್ನು ಸ್ವಾಮೀಜಿಯವರಿಗೆ ನೀಡಲಾಯಿತು. ಮುಖ್ಯಶಿಕ್ಷಕಿ ಜಯಮಾಲ ವರದಿ ವಾಚಿಸಿದರು. ಅಕ್ಷರ ಮತ್ತು ಆರಾಧ್ಯ ಪ್ರಾರ್ಥಿಸಿದರು. ಆಡಳಿತ ಮಂಡಳಿ ಕಾರ್ಯದರ್ಶಿ ಕೃಷ್ಣ ಪ್ರಸಾದ್ ಕೆದಿಲಾಯ ವಂದಿಸಿದರು.

ಸಾಹಸ ಮೆರೆದ ವಿದ್ಯಾರ್ಥಿಗಳು ಮನರಂಜಿಸಿದ ಕ್ರೀಡೋತ್ಸವ
ವಿದ್ಯಾರ್ಥಿಗಳಿಂದ ನೃತ್ಯ, ಯಕ್ಷಗಾನ ರೂಪಕ, ಸಾಂಸ್ಕೃತಿಕ ವೈವಿಧ್ಯ ನಡೆಯಿತು. ವಿದ್ಯಾರ್ಥಿಗಳನ್ನು ಶಾರೀರಿಕವಾಗಿ, ಬೌತಿಕವಾಗಿ ಸದೃಢಗೊಳಿಸುವ ಸಾಹಸ ಕ್ರೀಡೋತ್ಸವ ನಡೆಯಿತು. ಯೋಗಾಸನ, ಕರಾಟೆ, ಹುಲಿಕುಣಿತ, ಕುಣಿತ ಭಜನೆ, ಯಕ್ಷಗಾನ, ದೀಪಾರತಿ ಹಾಗೂ ಮಲ್ಲಕಂಬ, ತಾಲೀಮು, ಮುಂತಾದ ಸಾಹಸ ಕ್ರೀಡೆಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.

LEAVE A REPLY

Please enter your comment!
Please enter your name here