ಪುತ್ತೂರು: ಕೊಬುಡೋ ಬುಡೋಕಾನ್ ಕರಾಟೆ ಡೋ ಅಸೋಸಿಯೇಷನ್ ಕರ್ನಾಟಕ ಇವರ ವತಿಯಿಂದ ಉಡುಪಿ ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಸ್ಟೇಡಿಯಂ ನಲ್ಲಿ ಡಿ. 14ರಂದು ನಡೆದ ರಾಷ್ಟ್ರ ಮಟ್ಟದ ಮುಕ್ತ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿರುವ ಪುರುಷರಕಟ್ಟೆ ಸರಸ್ವತಿ ಶಾಲೆಯ 8ನೇ ತರಗತಿಯ ಆತ್ಮಿ ಮತ್ತು 9ನೇ ತರಗತಿಯ ದಿಗಂತ್ ಕೆ ಇವರು ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ಆತ್ಮಿ ಇವರು ಮುಂಡೂರು ಕನ್ನರ್ ನೂಜಿ ನಿವಾಸಿ ರಮೇಶ ಮತ್ತು ಸಾವಿತ್ರಿ ದಂಪತಿಗಳ ಪುತ್ರಿಯಾಗಿರುತ್ತಾರೆ. ದಿಗಂತ್ ಕೆ ಇವರು ಕುರೆಮಜಲು ಗುರುವಪ್ಪ ಮತ್ತು ಸುಭಾಷಿಣಿ ದಂಪತಿಗಳ ಪುತ್ರನಾಗಿರುತ್ತಾರೆ.
