ಸಾಯ ಎಂಟರ್‌ಪ್ರೈಸಸ್‌ನವರ ಸಹ ಸಂಸ್ಥೆ ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರ ಶುಭಾರಂಭ

0

ಪುತ್ತೂರು: ಪುತ್ತೂರಿನ ಪ್ರತಿಷ್ಠಿತ ಕೃಷಿ ಯಂತ್ರೋಪಕರಣಗಳ ಮಾರಾಟ ಮತ್ತು ಸೇವಾ ಮಳಿಗೆ ಎಪಿಎಂಸಿ ರಸ್ತೆಯಲ್ಲಿರುವ ಸಾಯ ಎಂಟರ್‌ಪ್ರೈಸಸ್‌ನ ಸಹ ಸಂಸ್ಥೆ ಪ್ರಧಾನ ಮಂತ್ರಿ ಭಾರತೀಯ ಜನ ಔಷಧ ಕೇಂದ್ರ ಜ.8ರಂದು ಎಪಿಎಂಸಿ ರಸ್ತೆಯ ಜೆಎಂಜೆ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಂಡಿತು.

ನೂತನ ಮಳಿಗೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಆದರ್ಶ ಆಸ್ಪತ್ರೆಯ ಹಿರಿಯ ವೈದ್ಯರಾಗಿರುವ ಡಾ. ಶ್ಯಾಮ್ ಭಟ್ ಮಾತನಾಡಿ, ಸಾಮಾನ್ಯವಾಗಿ ರೋಗ ಲಕ್ಷಣಗಳು ಕಡಿಮೆಯಾದಾಗ ಔಷಧಿ ಸೇವನೆಯನ್ನು ನಿಲ್ಲಿಸುತ್ತಾರೆ. ಇದಕ್ಕೆ ಆರ್ಥಿಕ ಅಡಚಣೆ, ಮಾಹಿತಿ ಕೊರತೆಯೂ ಕಾರಣವಿರಬಹುದು. ಇಂತಹ ಪ್ರವೃತ್ತಿಯಿಂದ ಕಾಯಿಲೆ ವಾಸಿಯಾಗಲು ಸಾಧ್ಯವಿಲ್ಲ. ವೈದ್ಯರು ಸೂಚಿಸಿದ ನಿಗದಿತ ಸಮಯಗಳ ಕಾಲ ಪಡೆದುಕೊಳ್ಳಬೇಕು. ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಧಾನಿ ಮೋದಿಯವರು ಜನ ಔಷಧಿ ಕೇಂದ್ರಗಳ ಮೂಲಕ ಕಡಿಮೆ ಬೆಲೆಯಲ್ಲಿ ಔಷಧಿಯನ್ನು ನೀಡುತ್ತಿದ್ದಾರೆ. ಇತರ ಮೆಡಿಕಲ್ ಹಾಗೂ ಜನ ಔಷಧಿ ಕೇಂದ್ರಗಳಿಗೂ ತುಂಬಾ ವ್ಯತ್ಯಾಸವಿದೆ. ಜನರಿಕ್ ಔಷಧಿಗಳಲ್ಲಿ ಗುಣಮಟ್ಟದಲ್ಲಿ ವ್ಯತ್ಯಾಸವಿಲ್ಲ. ಯಾವುದೇ ರೀತಿಯ ಕೀಳು ಮಟ್ಟದಲ್ಲ. ಉತ್ಪಾದಕರಿಂದಲೇ ನೇರವಾಗಿ ಬರುತ್ತಿದ್ದು ಜನರಿಗೆ ಕಡಿಮೆ ಬೆಲೆಯಲ್ಲಿ ಔಷಧಿಗಳು ದೊರೆಯುತ್ತಿದ್ದು ಜನರ ಇದರ ಸದುಪಯೋಗ ಪಡೆದುಕೊಳ್ಳುವಂತೆ ಅವರು ತಿಳಿಸಿದರು.


ಮುಖ್ಯ ಅತಿಥಿಯಾಗಿದ್ದ ತಾಲೂಕು ವೈದ್ಯಾಧಿಕಾರಿ ಡಾ.ದೀಪಕ್ ರೈ ಮಾತನಾಡಿ, ಪುತ್ತೂರಿನಲ್ಲಿ ಇದೀಗ 7ನೇ ಜನ ಔಷಧಿ ಕೇಂದ್ರ ಪ್ರಾರಂಭವಾಗಿದೆ. ಇಲ್ಲಿ ಕಡಿಮೆ ಬೆಲೆಯಲ್ಲಿ ದೊರೆಯುತ್ತಿದೆ. ಈ ಔಷಧಿಗಳು ಶೇ.100ರಷ್ಟು ಗುಣಮಟ್ಟದಿಂದ ಕೂಡಿದೆ. ಇತರ ಔಷಧಿಗಳನ್ನು ಬ್ರ್ಯಾಂಡ್ ಮಾಡುವುದರಿಂದ ಅವುಗಳ ಬೆಲೆ ಅಧಿಕವಾಗಿದೆ. ನಾನು ಜನ ಔಷಧಿಯನ್ನೇ ಪಡೆಯುತ್ತಿರುವುದಲ್ಲದೆ ನನ್ನ ರೋಗಿಗಳಿಗೂ ಜನ ಔಷಧಿಯನ್ನು ಪಡೆದುಕೊಳ್ಳುವಂತೆ ಸಲಹೆ ನೀಡುವುದಾಗಿ ತಿಳಿಸಿದ ಅವರು ಲಾಭದ ದೃಷ್ಠಿ ನೋಡದೇ ರೋಗಿಗಳಿಗಾಗಿ ಸಾಮಾನ್ಯ ಮೆಡಿಕಲ್‌ನ ಜೊತೆಗೆ ಜನ ಔಷಧಿ ಕೇಂದ್ರವನ್ನು ಪ್ರಾರಂಭಿಸಿದರುವುದನ್ನು ಶ್ಲಾಘಿಸಿದರು.


ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಪುತ್ತೂರು ಇದರ ಅಧ್ಯಕ್ಷ ಜೈರಾಜ್ ಭಂಡಾರಿ ಮಾತನಾಡಿ, ಕೃಷಿ ಯಂತ್ರೋಪಕರಣಗಳ ಮಾರಾಟ ಮತ್ತು ಸೇವೆಯಲ್ಲಿ ಜನಪ್ರಿಯತೆಗಳಿಸಿರುವ ಮಾಲಕ ಗೋವಿಂದ ಪ್ರಕಾಶ್ ಸಾಯ ಈಗ ಆರೋಗ್ಯ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಇವರ ಸೇವೆಯನ್ನು ರೋಟರಿ ಕ್ಲಬ್‌ಗೂ ಹಂಚಿದ್ದಾರೆ. ರೋಟರಿ ಕ್ಲಬ್ ಮೂಲಕವೂ ಆರೋಗ್ಯ ಸಂಬಂಧಿಸಿದಂತೆ ಸೇವೆ ಸಲ್ಲಿಸುತ್ತಿದೆ. ಇದಕ್ಕೆ ಪೂರಕವಾಗಿ ಜನ ಔಷಧಿ ಕೇಂದ್ರದ ಮೂಲಕ ನಿಸ್ವಾರ್ಥ ಸೇವೆ ದೊರೆಯಲಿ. ಜನರಿಗೆ ಕಡಿಮೆ ಬೆಲೆಯಲ್ಲಿ ಔಷಧಿಗಳು ದೊರೆಯುವಂತಾಗಲಿ ಎಂದರು.

ಸಂಸ್ಥೆಯ ಮಾಲಕ ಗೋವಿಂದ ಪ್ರಕಾಶ್ ಸಾಯ ಮಾತನಾಡಿ, ಕಳೆದ 15 ವರ್ಷಗಳಿಂದ ಕೃಷಿ ಯಂತ್ರೋಪಕರಣಗಳು ಮಾರಾಟ ಮತ್ತು ಸೇವೆ ಮುನ್ನಡೆಸಿಕೊಂಡು ಬರಲಾಗುತ್ತಿದೆ. ಈ ಮಳಿಗೆ ಪ್ರಾರಂಭದಲ್ಲಿಯೇ ನ್ನ ಪತ್ನಿಯು ಮೆಡಿಕಲ್ ಪ್ರಾರಂಬಿಸುವ ಕನಸು ಕಂಡಿದ್ದು ಅದಕ್ಕೆ ಪೂರಕವಾದ ಶಿಕ್ಷಣ ಅವರು ಪಡೆದಿದ್ದಾರೆ. ಮೆಡಿಕಲ್ ಪ್ರಾರಂಭಿಸಿರುವುದು ಲಾಭಕ್ಕಾಗಿ ಅಲ್ಲ. ಜನರ ಸೇವೆ ಮಾಡುವ ಉದ್ದೇಶದಿಂದ ಜನೌಷಧಿ ಕೇಂದ್ರವನ್ನು ಪ್ರಾರಂಭಿಸಲಾಗಿದ್ದು ಇಲ್ಲಿ ಅತೀ ಕಡಿಮೆ ದರದಲ್ಲಿ ಜನರಿಗೆ ಔಷಧಿಗಳು ದೊರೆಯಲಿದೆ ಎಂದರು.


ವ್ಹೀಲ್ ಚೆಯರ್, ಕೊಮೊಡೋ ಕೊಡುಗೆ:
ಜನ ಔಷಧಿ ಕೇಂದ್ರದ ಶುಭಾರಂಭದ ಅಂಗವಾಗಿ ವಿಶೇಷ ಚೇತನ ಫಲಾನುಭವಿಗಳಾದ ಇಬ್ಬರಿಗೆ ವ್ಹೀಲ್ ಚೆಯುರ್ ಹಾಗೂ ಓರ್ವರಿಗೆ ಕೊಮೊಡೋವನ್ನು ಕೊಡುಗೆಯಾಗಿ ನೀಡಲಾಯಿತು.

ಮಾಜಿ ಶಾಸಕ ಸಂಜೀವ ಮಠಂದೂರು, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ ಕೃಷ್ಣ ಭಟ್, ನಿರ್ದೇಶಕ ಜಯಂತಿ ನಾಯಕ್, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಮದಾಸ ಗೌಡ, ಕ್ಯಾಂಪ್ಕೋ ನಿರ್ದೇಶಕ ರಾಘವೇಂದ್ರ ಭಟ್ ಕೆದಿಲ, ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ರಫೀಕ್, ಸುಜಿತ್ ರೈ, ದತ್ತಾತ್ರೆಯ ರಾವ್, ರಾಮಕೃಷ್ಣ, ಇನ್ನರ್ ವ್ಹೀಲ್ ಕ್ಲಬ್‌ನ ರಾಜೀ ಬಲರಾಮ ಆಚಾರ್ಯ, ಅಶ್ವಿನಿಕೃಷ್ಣ ಮುಳಿಯ ಸೇರಿದಂತೆ ಹಲವು ಮಂದಿ ಗಣ್ಯರು ಆಗಮಿಸಿ ಶುಭಹಾರೈಸಿದರು. ಜಯಶ್ರೀ ಪ್ರಾರ್ಥಿಸಿದರು. ಸಂಸ್ಥೆಯ ಮಾಲಕಿ ಸಂಧ್ಯಾ ಸಾಯ ಸ್ವಾಗತಿಸಿದರು. ರಾಘವೇಂದ್ರ ಕೆದಿಲ, ಪ್ರಜ್ವಲ್ ಸಾಯ ಅತಿಥಿಗಳಿಗೆ ಹೂ ಗುಚ್ಚ ನೀಡಿ ಸ್ವಾಗತಿಸಿದರು. ಸಂಸ್ಥೆ ಮಾಲಕ ಗೋವಿಂದ ಪ್ರಕಾಶ ಸಾಯ ವಂದಿಸಿದರು.

LEAVE A REPLY

Please enter your comment!
Please enter your name here