ಪುತ್ತೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದ.ಕ.ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ನೀಡುವಂತೆ ತಾನು ಯಾರ ಪರವಾಗಿಯೂ ಹೈಕಮಾಂಡ್‌ಗೆ ಲೆಟರ್ ಬರೆದಿಲ್ಲ ಎಂದು ಡಾ.ಎಂ.ಕೆ.ಪ್ರಸಾದ್ ಅವರು ಸ್ಪಷ್ಟನೆ ನೀಡಿದ್ದಾರೆ.
ಮೇ 13ರ ವಿಧಾನಸಭಾ ಚುನಾವಣೆಯ ಬಳಿಕ ನಾನು ಪಕ್ಷದಿಂದಲೇ ದೂರ ಇದ್ದೇನೆ.ಅಭ್ಯರ್ಥಿ ಆಯ್ಕೆ ಮಾಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ.ಅವರು ಯಾರನ್ನು ಆಯ್ಕೆ ಮಾಡಿದರೂ ನಾನು ಬೆಂಬಲಿಸುತ್ತೇನೆ ಎಂದು ಡಾ.ಎಂ.ಕೆ.ಪ್ರಸಾದ್ ಅವರು ತಿಳಿಸಿದ್ದಾರೆ.ಲೋಕಸಭಾ ಚುನಾವಣೆಗೆ ಸಂಬಂಧಿಸಿ ಡಾ|ಅರುಣ್‌ಶ್ಯಾಂ ಅವರ ಪರವಾಗಿ ತಾನು ಹೈಕಮಾಂಡ್‌ಗೆ ಲೆಟರ್ ಬರೆದು ಸಂಚಲನ ಸೃಷ್ಟಿಸಿರುವುದಾಗಿ ಪತ್ರಿಕೆಯಲ್ಲಿ ಬಂದ ವರದಿಗೆ ಸಂಬಂಧಿಸಿ ಅವರು ಈ ಸ್ಪಷ್ಟನೆ ನೀಡಿದ್ದಾರೆ.ಅಭ್ಯರ್ಥಿ ವಿಚಾರದಲ್ಲಿ ನಾನು ಯಾವುದೇ ಹೇಳಿಕೆ ನೀಡಿಲ್ಲ.
ನಾನು ಮೇ 13ರ ನಂತರ ಪಕ್ಷದಿಂದ ದೂರ ಸರಿದಿದ್ದೇನೆ.ಈಗ ಪಕ್ಷದ ಯಾವುದೇ ಸಭೆಗಳಿಗೆ ಹೋಗುವುದನ್ನೂ ಕಡಿಮೆ ಮಾಡಿದ್ದೇನೆ.ಹೀಗಿರುವಾಗ ಜನರ ಅಭಿಪ್ರಾಯ ಏನಿದೆ ಎಂದು ನನಗೆ ಗೊತ್ತಿಲ್ಲ.ಇಂತಹ ಸಂದರ್ಭದಲ್ಲಿ ಪಕ್ಷದಿಂದ ಯಾರನ್ನು ಲೋಕಸಭಾ ಚುನಾವಣೆಗೆ ಅಭ್ಯರ್ಥಿಯಾಗಿ ಆಯ್ಕೆ ಮಾಡಿದರೂ ಅವರಿಗೆ ಬೆಂಬಲ ಕೊಡುತ್ತೇನೆ.ಯಾವುದೇ ಕಾರಣಕ್ಕೂ, ಯಾರ ಪರವಾಗಿಯೂ ಹೈಕಮಾಂಡ್‌ಗೆ ಲೆಟರ್ ಬರೆದಿಲ್ಲ ಮತ್ತು ಶಿಫಾರಸ್ಸು ಮಾಡಿಲ್ಲ.ಅಂತಿಮವಾಗಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆಯಾದ ಬಳಿಕ ಅವರಿಗೆ ಬೆಂಬಲ ಕೊಡುತ್ತೇನೆ ಎಂದವರು ತಿಳಿಸಿದ್ದಾರೆ.