ಪುತ್ತೂರು: ಸವಣೂರು ಶ್ರೀರಾಮ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ 2022-23ನೇ ಸಾಲಿನ ವಾರ್ಷಿಕ ಮಹಾಸಭೆ ಸವಣೂರು ಪಂಚಾಯತ್‌ನ ಕುಮಾರಧಾರ ಸಭಾಂಗಣದಲ್ಲಿ ಒಕ್ಕೂಟದ ಅಧ್ಯಕ್ಷೆ ರೇವತಿ ಕೆ.ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಂದರಿ, ತಾಲೂಕು ಕಾರ‍್ಯಕ್ರಮ ವ್ಯವಸ್ಥಾಪಕ ಜಗತ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂದೇಶ್‌ರವರು ದೀಪ ಬೆಳಗಿಸಿ ಕಾರ‍್ಯಕ್ರಮಕ್ಕೆ ಚಾಲನೆ ನೀಡಿದರು.
ತಾಲೂಕು ಕಾರ‍್ಯಕ್ರಮ ವ್ಯವಸ್ಥಾಪಕ ಜಗತ್ ಮಾತನಾಡಿ NRLM ಯೋಜನೆಯ ಬಗ್ಗೆ ಮಹಿಳೆಯರಿಗೆ ಸ್ವಉದ್ಯೋಗದ ಬಗ್ಗೆ ಬೇರೆ ಕಾರ‍್ಯಕ್ರಮ, ಒಕ್ಕೂಟ ಸಿಬ್ಬಂದಿಗಳ ಕಾರ‍್ಯವೈಖರಿ, ಕೌಶಲ್ಯ ಅಭಿವೃದ್ದಿಯ ಮಾಹಿತಿ ನೀಡಿದರು. ವಲಯ ಮೇಲ್ವೀಚಾರಕಿ ನಮಿತಾ ವಾರ್ಡ್ ಮಟ್ಟದ ಒಕ್ಕೂಟ, ಮಾರ್ಕೆಟಿಂಗ್ ಮತ್ತು ಬಿ.ಸಿ ಸಖಿ, ಪಶುಸಖಿ, ಕೃಷಿ ಸಖಿ ಅವರು ಕಾರ‍್ಯನಿರ್ವಹಿಸುವ ಇಲಾಖೆ ಮಾಹಿತಿ ನೀಡಿದರು. ಒಕ್ಕೂಟದ ಪಶು ಸಖಿ ಹೇಮಲತಾ ವಾರ್ಷಿಕ ವರದಿ ಓದಿದರು. ಒಃಏ ಗೀತಾ ಆಶಿಯವರು ಲೆಕ್ಕ ಪರಿಶೋಧನೆಯ ವರದಿ ಮಂಡನೆ ಮಾಡಿದರು. ಪಶು ಸಖಿ, ಬಿ.ಸಿ ಸಖಿ ಉಪಸ್ಥಿತರಿದ್ದರು. ಸ್ತ್ರೀ ಶಕ್ತಿ ಸಂಘದ ಸದಸ್ಯೆ ಅನಿತಾ ಪ್ರಾರ್ಥಿಸಿದರು. ಒಃಏ ಗೀತಾ ಜಿ.ಎಸ್ ಕಾರ‍್ಯಕ್ರಮ ನಿರೂಪಿಸಿದರು. ಕೃಷಿ ಸಖಿ ಜಯಂತಿ ಸ್ವಾಗತಿಸಿ WCRP ಉಷಾ ವಂದಿಸಿದರು.
ನೂತನ ಪದಾಧಿಕಾರಿಗಳ ಆಯ್ಕೆ: ಸಭೆಯಲ್ಲಿ ಒಕ್ಕೂಟದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಒಕ್ಕೂಟದ ನೂತನ ಅಧ್ಯಕ್ಷರಾಗಿ ವಿಜಯ ಈಶ್ವರಗೌಡ, ಉಪಾಧ್ಯಕ್ಷರಾಗಿ ದಮಯಂತಿ ಬಸ್ತಿ, ಕಾರ‍್ಯದರ್ಶಿಯಾಗಿ ಪೂರ್ಣಿಮಾ ಮಹೇಶ್, ಜತೆ ಕಾರ‍್ಯದರ್ಶಿಯಾಗಿ ಸುಶ್ಮಿತಾ ಉಪ್ಪೊಳಿಗೆ, ಕೋಶಾಧಿಕಾರಿ ಸರೋಜ ಚೆನ್ನಾವರ, ಸದಸ್ಯರುಗಳಾಗಿ ಚಂದ್ರಾವತಿ, ನವ್ಯಯತೀಶ್, ಯಶೋಧ, ಭಾಗೀರಥಿ, ಶುಭಶಂಕರಿ, ಯಶೋದ ಪೆರಿಯಡ್ಕ, ವಸಂತಿ, ಲೀಲಾವತಿ, ಜೊಹಾರಬಾನು ಹಾಗೂ ಶಕುಂತಲಾರವನ್ನು ಆಯ್ಕೆ ಮಾಡಲಾಯಿತು. ನಿಕಟಪೂರ್ವ ಪದಾಧಿಕಾರಿಗಳಿಗೆ ಹೂ ಶಾಲು ಕೊಟ್ಟು ಗೌರವಾರ್ಪಣೆ ಮಾಡಲಾಯಿತು.