ವಿಟ್ಲ: ಸಮಾಜ ಸೇವೆಯಲ್ಲಿ ಹದಿನಾಲ್ಕು ವರ್ಷಗಳನ್ನು ಪೂರೈಸಿದ ವಿಟ್ಲದ ಡಿ’ ಗ್ರೂಪ್ (ರಿ) ಇದರ ವತಿಯಿಂದ ಉಚಿತ ಆರೋಗ್ಯ ಹಾಗೂ ರಕ್ತದಾನ ಶಿಬಿರ ಸಂಘಟನೆಯ ಅಧ್ಯಕ್ಷ ಖಲಂದರ್ ಪರ್ತಿಪ್ಪಾಡಿ ಇವರ ಅಧ್ಯಕ್ಷತೆಯಲ್ಲಿ ವಿಟ್ಲದ ಬ್ರೈಟ್ ಆಡಿಟೋರಿಯಂ ನಲ್ಲಿ ನಡೆಯಿತು. ಹಾಸನದ ಪ್ರಸಿದ್ಧ ಜನಪ್ರಿಯ ಆಸ್ಪತ್ರೆಯ ವೈದ್ಯರಾದ ಡಾ.ವಿ.ಕೆ.ಬಶೀರ್, ಡಾ. ಆಲಂ ನವಾಝ್, ಡಾ.ಅರವಿಂದ್ ,ಡಾ.ಕೇಶವ ಪ್ರಸಾದ್, ಡಾ.ಹಸನ್ ಮುಬಾರಕ್ ಹಾಗೂ ಅವರ ತಂಡದ ನುರಿತ 22 ವೈದ್ಯರಿಂದ ತಪಾಸಣೆ ಹಾಗೂ ಚಿಕಿತ್ಸೆ ನಡೆಯಿತು.
ಬ್ಲಡ್ ಡೋನರ್ಸ್ ಮಂಗಳೂರು ಜನಪ್ರಿಯ ಆಸ್ಪತ್ರೆ ಹಾಸನ ಹಾಗೂ ಮಂಗಳೂರು ವೆನ್ಲಾಕ್ ಆಸ್ಪತ್ರೆಯ ಸಹಯೋಗದೊಂದಿಗೆ ಈ ಶಿಬಿರ ನಡೆಯಿತು. ಸುಮಾರು 103 ಮಂದಿ ರಕ್ತದಾನ ಮಾಡಿದರು. ವಿಟ್ಲ ಕೇಂದ್ರ ಜುಮಾ ಮಸೀದಿ ಖತೀಬ್ ಮಹಮ್ಮದ್ ನಸೀಹ್ ದಾರಿಮಿ ದುವಾದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ವಿಟ್ಲ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಅಶ್ರಫ್ ಮಹಮ್ಮದ್ ಪೊನ್ನೋಟು, ನ್ಯಾಯವಾದಿ ಜಯರಾಮ ರೈ,ಪ್ರಭಾಕರ ಶೆಟ್ಟಿ ದಂಬೆಕಾನ,ವಿಕೆ.ಎಂ.ಅಶ್ರಫ್, ರಮನಾಥ ವಿಟ್ಲ, ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷೆ ಜಲಜಾಕ್ಷಿ, ಜೆಸಿಐ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಪೆಲ್ತಡ್ಕ, ರೋಟರಿ ಕ್ಲಬ್ ಅಧ್ಯಕ್ಷ ಕಿರಣ್ ಕುಮಾರ್ ಬ್ರಹ್ಮಾವರ, ಬಾಬು ಕೆ.ವಿ, ಡಾ.ವೇದಾವತಿ, ಡಾ.ಅದ್ವಿತ್, ಡಾ.ಅವಿನಾಶ್, ಡಾ.ಕಿರಾಸ್ ಪರ್ತಿಪ್ಪಾಡಿ, ಡಾ.ನೌಮನ್ ಡಾ.ರಾಜರಾಮ್ ಕೆ.ಬಿ,ಎಂ.ಎಸ್.ಮಹಮ್ಮದ್, ರಶೀದ್ ವಿಟ್ಲ, ರವಿಪ್ರಕಾಶ್ ವಿಟ್ಲ, ಹಾಜಿ ಕೆ.ಎ ಅಬ್ದುಲ್ ಹಮೀದ್ ಹಾಜಿ ಕೊಡಂಗಾಯಿ, ಕನ್ಯಾನ ಗ್ರಾ.ಪಂ ಸದಸ್ಯ ಮಜೀದ್ ಕನ್ಯಾನ, ಹಕೀಂ ಪರ್ತಿಪ್ಪಾಡಿ, ನೋಟರಿ ಅಬೂಬಕರ್,ಹನೀಫ್ ಹಾಜಿ ಗೋಳ್ತಮಜಲು, ಅಬ್ದುಲ್ ಖಾದರ್ ಬದ್ರಿಯಾ, ಅಮೀರ್ ,ಅಝೀಝ್ ಸನ,ಸಮದ್ ಮೇಗಿನಪೇಟೆ, ಇರ್ಷಾದ್ ಸೆಲೆಕ್ಟ್,ರಾಝಿಕ್ ಕಿಸ್ವ, ವಿ.ಕೆ.ಎಂ.ಹಂಝ, ಉಬೈದ್ ವಿಟ್ಲ ಬಝಾರ್, ಮನ್ಸೂರ್ ಕೆಲಿಂಜ, ನೌಶೀನ್ ಬದ್ರಿಯಾ, ವಿಕೆಎಂ ಹಂಝ, ಹಂಝ ಡಿ, ರಿಯಾಝ್ ವಿ.ಎಚ್ ಮನ್ಸೂರು ಕೆಲಿಂಜ, ಇರ್ಷಾದ್ ಸೆಲೆಕ್ಟ್, ರಾಝೀಕ್ ಮೇಗಿನಪೇಟೆ, ಬಶೀರ್ ಬೊಬ್ಬೆಕೇರಿ, ಅಬೂಬಕ್ಕರ್ ಅನಿಲಕಟ್ಟೆ, ತೌಸಿಪ್ ಎಂ.ಜಿ, ಮುಂತಾದವರು ಉಪಸ್ಥಿತರಿದ್ದರು.
ಶಾಕಿರ್ ಅಳಕೆಮಜಲು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.