ಪುತ್ತೂರು:ಪುತ್ತೂರು ಮಾಯ್ ದೆ ದೇವುಸ್ ಚರ್ಚ್ ಇದರ ವಾರ್ಷಿಕ ಹಬ್ಬವು ಜ.17 ರಂದು ಬಲಿಪೂಜೆಯೊಂದಿಗೆ ಆಚರಿಸಲಾಯಿತು.ಪ್ರದಾನ ಧರ್ಮಗುರು ವಂದನೀಯ ಜೋಸೆಫ್ ಮಾರ್ಟಿಸ್ರವರು ಬಲಿಪೂಜೆಯನ್ನು ಅರ್ಪಿಸಿದರು.
ತಮ್ಮ ಪ್ರವಚನದಲ್ಲಿ ಇಂದಿನ ದಿನಗಳಲ್ಲಿ ಒಬ್ಬರಿಗೊಬ್ಬರು ಮಾತನಾಡುವುದು ಕಡಿಮೆ ಆಗಿದೆ ಅದೇ ಮೊಬೈಲ್ ನಲ್ಲಿ ಮಾತನಾಡುವುದು ಜಾಸ್ತಿ ಆಗಿದೆ, ನಾವು ಮನೆಯಲ್ಲಿ ನಮ್ಮ ಹಿರಿಯರೊಡನೆ , ಮಕ್ಕಳೊಡನೆ ತುಂಬಾ ಮಾತನಾಡಬೇಕು ಇದರಿಂದ ನಮ್ಮ ಸಂಬಂಧ ದೀರ್ಘ ಕಾಲದವರೆಗೆ ಉಳಿಯುತ್ತದೆ ಎಂದರು.
ಬಲಿಪೂಜೆಯಲ್ಲಿ ಮಾಯ್ ದೆ ದೇವುಸ್ ಚರ್ಚ್ ಪುತ್ತೂರು ಇದರ ಪ್ರದಾನ ಧರ್ಮಗುರು ವಂದನೀಯ ಲಾರೆನ್ಸ್ ಮಸ್ಕರೇನ್ಹಸ್, ಸಹಾಯಕ ಧ್ರಮಗುರು ವಂದನೀಯ ಲೋಹಿತ್ ಅಜಯ್ ಮಸ್ಕರೇನ್ಹಸ್, ವಂದನೀಯ ಸ್ಟ್ಯಾನಿ ಪಿಂಟೋ, ವಂದನೀಯ ಅಶೋಕ್ ರಾಯನ್ ಕ್ರಾಸ್ತಾ, ವಂದನೀಯ ರೂಪೇಶ್ ತೌರೋ, ವಂದನೀಯ ಮಾಕ್ಸಿಮ್ ಡಿಸೋಜ ಇನ್ನಿತರ 25 ಕ್ಕೂ ಹೆಚ್ಚು ಧರ್ಮಗುರುಗಳು, ಧರ್ಮಭಗಿನಿಯರು ಹಾಗೂ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ಚರ್ಚ್ ವಠಾರದಲ್ಲಿ ಜಾತ್ರಾ ಸಂತೆಯಲ್ಲಿ ವಿವಿಧ ಅಂಗಡಿ ಮುಂಗಟ್ಟುಗಳು, ICYM, YCS ವತಿಯಿಂದ ಆಟೋಟ ಸ್ಪರ್ಧೆಗಳು ನಡೆದವು.