ಪುತ್ತೂರು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಸಾಮಾನ್ಯ ಸಾಫ್ಟ್‌ವೇರ್ ಅಳವಡಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರದ ಗಣಕೀಕರಣ ಯೋಜನೆಯ ಅನುದಾನದಲ್ಲಿ ನರಿಮೊಗರು ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಕಂಪ್ಯೂಟರ್ ಹಾಗೂ ವಿವಿಧ ಉಪಕರಣಗಳು ದೊರೆತಿದೆ.
ಕಂಪ್ಯೂಟರ್ ಹಾರ್ಡ್ ವೇರ್ ಉಪಕರಣಗಳಾದ ಡೆಸ್ಕ್‌ಟಾಪ್ (ಮಾನಿಟರ್), ಸಿ.ಪಿ.ಯು, ಮೌಸ್, ಕೀಬೋರ್ಡ್, ವೆಬ್ ಕ್ಯಾಮೆರಾ, ಬ್ಯಾಟರಿ, ಪ್ರಿಂಟರ್,ಯು.ಪಿ.ಎಸ್ ಗಳನ್ನು ಜ.16ರಂದು ಸಂಘದ ಆಡಳಿತ ಮಂಡಳಿ ಸಭೆಯಲ್ಲಿ ಸ್ವೀಕರಿಸಲಾಯಿತು. ಸಂಘದ ಅಧ್ಯಕ್ಷ ನವೀನ್ ಡಿ. ಉಪಾಧ್ಯಕ್ಷೆ ಪವಿತ್ರ ಕೆ.ಪಿ., ನಿರ್ದೆಶಕರಾದ ಜಯರಾಮ ಪೂಜಾರಿ, ಪ್ರವೀಣ್ ಕುಮಾರ್ ಶೆಟ್ಟಿ, ದೇವಪ್ಪ ಗೌಡ, ದೇವಪ್ಪ ಪಿ, ನಮೀತಾ, ಚಂದ್ರ ಎಮ್, ಶಿವಪ್ರಸಾದ್ ನಾಯ್ಕ, ಪರಮೇಶ್ವರ ಭಂಡಾರಿ, ವಿಶ್ವನಾಥ ಬಲ್ಯಾಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಧುಕರ್ ಎಚ್. ಉಪಸ್ಥಿತರಿದ್ದರು.