ಕಡಬ: ಕೋಡಿಂಬಾಳ ಎ.ಕೆ.ಪೈಂಟರ್ಸ್ ನೇತೃತ್ವದಲ್ಲಿ ಸಿಂಗಲ್ಸ್ ಹಾಗೂ ಡಬಲ್ಸ್ ಕ್ಯಾರಮ್ ಪಂದ್ಯಾಟ ಕೋಡಿಂಬಾಳದಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾ.ಪಂ.ಮಾಜಿ ಸದಸ್ಯ ಫಝಲ್ ಕೋಡಿಂಬಾಳ ಅವರು, ಕೋಡಿಂಬಾಳ ಸಾಮರಸ್ಯ ಸಾರುವ ಗ್ರಾಮವಾಗಿದೆ. ಇಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ, ಶ್ರೀ ರಾಮ ಭಜನಾ ಮಂದಿರ, ಜುಮ್ಮಾ ಮಸೀದಿ, ಕ್ಯಾಥೊಲಿಕ್ ಚರ್ಚ್ ಒಂದೇ ವಲಯದಲ್ಲಿ ಇವೆ. ಹಿರಿಯರ ಕಾಲದಿಂದಲೂ ಸಾಮರಸ್ಯ ಪಾಲಿಸಿಕೊಂಡು ಬಂದ ಈ ಗ್ರಾಮದಲ್ಲಿ ಅದೇ ಸಾಮರಸ್ಯ, ಸೌಹಾರ್ದತೆ ಇಂತಹ ಕಾರ್ಯಕ್ರಮ ನಡೆಸುವ ಮೂಲಕ ಮುಂದುವರಿಲಿ ಎಂದರು.
ಭಾರತೀಯ ಭೂ ಸೇನೆಯ ನಿವೃತ್ತ ಸೈನಿಕ ಜಿನೀಶ್ ಟಿ., ಕಡಬ ಗ್ರಾ.ಪಂ.ಮಾಜಿ ಅಧ್ಯಕ್ಷ ಬಾಬು ರೈ ಅವರು ಕ್ಯಾರಮ್ ಆಡುವ ಮೂಲಕ ಪಂದ್ಯಾಟ ಉದ್ಘಾಟನೆ ಮಾಡಿದರು. ಹಿರಿಯರಾದ ಶಿವಣ್ಣ ಪೊಸವಳಿಕೆ, ಪತ್ರಕರ್ತ ಪ್ರಕಾಶ್ ಕೋಡಿಂಬಾಳ. ಮಂಗಳೂರು ಯೆನೆಪೋಯಾದ ಮೊಹಮ್ಮದ್ ಅತ್ತವುಲ್ಲಾ, ಕೋಡಿಂಬಾಳ ರಾಮನಗರ ಶ್ರೀರಾಮ ಭಜನಾ ಮಂದಿರದ ಕಾರ್ಯದರ್ಶಿ ಸುರೇಶ್ ಪೂಜಾರಿ ಪಾಲಪ್ಪೆ, ಕೋಡಿಂಬಾಳ ಸಪ್ನಾ ಕನ್‌ಸ್ಟ್ರಕ್ಷನ್ ಶರೀಫ್ ಮೇಸ್ತ್ರೀ, ಕೋಡಿಂಬಾಳ ಪಾಲಪ್ಪೆ ಕಾಂಪ್ಲೆಕ್ಸ್‌ನ ಮಾಲಕ ಅಬೂಬಕ್ಕರ್ ಹಾಜಿ, ಕೋಡಿಂಬಾಳ ಹ್ಯಾಪಿ ಶಾಮಿಯಾನ ಸರ್ವೀಸಸ್‌ನ ಮಾಲಕ ಹಮೀದ್, ಲತೀಫ್ ಅಜ್ಜಿಕಟ್ಟೆ ಉಪಸ್ಥಿತರಿದ್ದರು.
ಸಮಾರೋಪ:
ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ಮಂಗಳೂರಿನ ನೋಟರಿ ವಕೀಲರಾದ ಶೇಖ್ ಇಸಾಕ್ ಕೋಡಿಂಬಾಳ, ರೈಲ್ವೆ ಇಲಾಖೆಯ ಟಿಕೇಟ್ ಪರಿವೀಕ್ಷಕರಾದ ಎಂ.ಡಿ.ರಫೀಕ್, ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ ದೀಕ್ಷಿತ್ ಕಲ್ಲಾಜೆ, ಬೆಂಗಾಲ್ ವಾರಿಯರ‍್ಸ್ ತಂಡದ ಆಟಗಾರ ಮಿಥುನ್ ಕಲ್ಲಾಜೆ, ಕೋಡಿಂಬಾಳ ಶ್ರೀ ಕಟೀಲ್ ಇಲೆಕ್ಟಿಕಲ್ಸ್‌ನ ಮಾಲಕ ಸುಂದರ ಕೆ., ಕೋಡಿಂಬಾಳ ದೈವಾನುಗ್ರಹ ಅರ್ಥ್ ಮೂವರ್ಸ್‌ನ ಪ್ರತಾಪ್ ಶೆಟ್ಟಿ, ಕೋಡಿಂಬಾಳ ಶ್ರೀ ಕೃಷ್ಣ ಎಲೆಕ್ಟ್ರಿಕಲ್ಸ್‌ನ ಮಾಲಕ ತಿರ್ಥೇಶ್, ಭವಿತ್ ಪಡೆಚ್ಚಾರು, ಕೋಡಿಂಬಾಳ ಸೌಭಾಗ್ಯ ಜನರಲ್ ಸ್ಟೋರ‍್ಸ್‌ನ ಮಾಲಕ ಗಣೇಶ್, ಕೋಡಿಂಬಾಳ ಶಿವಗಿರಿ ಜನರಲ್ ಸ್ಟೋರ‍್ಸ್‌ನ ಸುಧಾಕರ ಪೂಜಾರಿ, ಕಡಬದ ಕಬಡ್ಡಿ ಆಟಗಾರರಾದ ಫೈಝಲ್, ಮುರ್ಝಾನ್ ಉಪಸ್ಥಿತರಿದ್ದರು. ಶಿಕ್ಷಕರಾದ ಕಲಂದರ್ ಕಡಬ ಮತ್ತು ರಿಯಾಝ್ ಕಡಬ ಕಾರ್ಯಕ್ರಮ ನಿರೂಪಿಸಿದರು. ಕೋಡಿಂಬಾಳ ಎ.ಕೆ.ಪೈಂಟರ್ಸ್‌ನ ಅಬ್ದುಲ್ ರಹಿಮಾನ್ ಕಾರ್ಯಕ್ರಮ ಆಯೋಜಿಸಿದರು.