ಪಂಚ ಗ್ಯಾರೆಂಟಿಗಳ ಪ್ರತಿಫಲ ಕಡಬ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಲಭಿಸಿದೆ- ಬಿಜೆಪಿಯಿಂದಲೇ ಮುಕ್ತವಾದ ಬಿಜೆಪಿ- ನೂರುದ್ದೀನ್ ಸಾಲ್ಮರ

0

ಪುತ್ತೂರು: ಅಪಪ್ರಚಾರ, ಕೊಮುವಾದದಿಂದ ಸೋತ್ತಿದ್ದೇವೆ. ಅದರೆ ಈಗ ಜನ ಪ್ರಬುದ್ದರಾಗಿದ್ದಾರೆ. ಇದರ ಜೊತೆಗೆ ಪಂಚ ಗ್ಯಾರೆಂಟಿಗಳ ಪ್ರತಿಫಲ ಕಡಬ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಲಭಿಸಿದೆ ಎಂದು ಕಾಂಗ್ರೆಸ್ ಕಡಬ ಪಟ್ಟಣ ಪಂಚಾಯತ್ ಚುನಾವಣಾ ಉಸ್ತುವಾರಿ ನೂರುದ್ದೀನ್ ಸಾಲ್ಮರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.


ಕರ್ನಾಟಕದಲ್ಲಿ ಸಂಪೂರ್ಣವಾಗಿ ಕಾಂಗ್ರೆಸ್ ಆಡಳಿತವಿದ್ದರೂ ದ.ಕ ಜಿಲ್ಲೆಯಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್ ಅಭ್ಯರ್ಥಿಗಳು ಗೆಲವನ್ನು ಕಂಡಿರುವಂತಹದ್ದು. ಆದರೆ ಹಿಂದಿನ ಇತಿಹಾಸ ನೋಡಿದಾಗ ಕಾಂಗ್ರೆಸ್ ಪಕ್ಷ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭದ್ರಕೋಟೆಯಾಗಿ ಇತ್ತು. ಆದರೆ ಬಿಜೆಪಿ ಪಕ್ಷದ ಕೋಮುವಾದ ಅಪಪ್ರಚಾರದ ಕಾರಣದಿಂದಾಗಿ ನಮ್ಮ ಪಕ್ಷದ ಅಭ್ಯರ್ಥಿಗಳು ಸೋಲುವ ಸಂದರ್ಭ ನಮ್ಮ ನಾಯಕರುಗಳಿಗೆ ಬಹಳಷ್ಟು ನೋವಾಗಿತ್ತು. ಇಂತಹ ಸಂದರ್ಭದಲ್ಲಿ ಕಡಬ ಪಟ್ಟಣ ಪಂಚಾಯತ್ ಚುನಾವಣೆಯನ್ನು ಕಾಂಗ್ರೆಸ್‌ನ ಅಳಿವು ಉಳಿವಿನ ಪ್ರಶ್ನೆಯಾಗಿ ಗಂಭೀರವಾಗಿ ತೆಗೆದುಕೊಂಡಿದ್ದೆವು. ಚುನಾವಣೆ ಘೋಷಣೆ ಆದ ಸಂದರ್ಭದಲ್ಲಿ ನಮ್ಮ ಕಾಂಗ್ರೆಸ್ ಪಕ್ಷದ ರಾಜ್ಯಮಟ್ಟದ ಎಲ್ಲಾ ನಾಯಕರ ಮಾರ್ಗದರ್ಶನ ಮತ್ತು ಸ್ವತಃ ಅಲ್ಲಿಗೆ ಭೇಟಿ ನೀಟಿ. ಸಮಗ್ರ ತಂಡವನ್ನು ರಚಿಸಿ ಮೊದಲಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂದರ್ಭ ಅತ್ಯಂತ ಪ್ರಬಲವಾದ ಆಕಾಂಕ್ಷಿಗಳು ಮುಂದೆ ಬಂದಿದ್ದರು. ಆಗ ಸ್ವಯಂ ಪ್ರೇರಿತವಾಗಿ ಅಭ್ಯರ್ಥಿ ಹುದ್ದೆಯನ್ನು ತ್ಯಾಗ ಮಾಡಿದ ಹಿನ್ನೆಲೆಯಲ್ಲಿ ಯಾವುದೇ ಗೊಂದಲವಿಲ್ಲದೆ ಅಭ್ಯರ್ಥಿಗಳ ಆಯ್ಕೆ ನಡೆದು ಬಹಳಷ್ಟು ವ್ಯವಸ್ಥಿತವಾಗಿ ಪ್ರಚಾರಗಳು ನಡೆದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ಸರಕಾರದ ಪಂಚ ಗ್ಯಾರೆಂಟಿಗಳು ಗೆಲುವಿಗೆ ಮೂಲ ಕಾರಣವಾಯಿತು ಎಂದ ಅವರು ಮುಂದಿನ ದಿನ ಪಟ್ಟಣ ಪಂಚಾಯತ್‌ಗೆ ವಿಶೇಷವಾದ ಅನುದಾನ ಬರಲಿದೆ ಎಂದರು.


ಬಿಜೆಪಿಯ ಭದ್ರಕೋಟೆಯಲ್ಲಿ ಗೆಲುವು:
ಕಡಬ ಪಟ್ಟಣ ಪಂಚಾಯತ್‌ನ ಮಾದೇಶ್ವರ ಕ್ಷೇತ್ರದಲ್ಲಿ 637 ಮತಗಳಿವೆ. ಅಲ್ಪಸಂಖ್ಯಾತರ 110 ಮತಗಳಿವೆ. ಇದು ಬಿಜೆಪಿಯ ಭದ್ರಕೋಟೆ. ಅಲ್ಲಿ ಬಿಜೆಪಿ ನಾಯಕರು ರಾತ್ರಿ ಹಗಲು ಕೆಲಸ ಮಾಡಿದ್ದಾರೆ. ಆದರೆ ನಮ್ಮ ಪಕ್ಷದ ಅಭ್ಯರ್ಥಿ ಸುಮಾರು 84 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಬಿಜೆಪಿ ಭದ್ರಕೋಟೆಯಲ್ಲಿ ಕೋಮುವಾದ ನಡೆಯಲಿಲ್ಲ. ಅಲ್ಲಿ ಅಭ್ಯರ್ಥಿಯನ್ನು ನೋಡಿ ಮತ ನೀಡಿದ್ದಾರೆ. ಕೋಮುವಾದ ಅಲ್ಲಿ ಸೋತಿದೆ ಎಂದು ನೂರುದ್ದೀನ್ ಸಾಲ್ಮರ ಹೇಳಿದರು. ಪುತ್ತೂರಿನ ಮಟ್ಟಿಗೆ ಹೇಳುವುದಾಗಿ ಮಹಾಲಿಂಗೇಶ್ವರ ದೇವರ ಜಾತ್ರೆಯಲ್ಲಿ ನಾವು ಕೂಡಾ ಪಾಲು ಪಡೆಯುತ್ತಿದ್ದೆವು. ಕ್ರಮೇಣ ನಮ್ಮನ್ನು ಅಲ್ಲಿಗೆ ಬರಬಾರಬಾರದು ಎಂದು ಗುಳ್ಳೆಬ್ಬಿಸಿಕೊಂಡು ನಮ್ಮನ್ನು ಬೇರೆ ಬೇರೆ ಮಾಡುವ ಪ್ರಯತ್ನ ನಡೆಯಿತು. ನಂತರದ ದಿನದಲ್ಲಿ ಪರಸ್ಪರ ಒಬ್ಬರೊಬ್ಬರು ಮುಖ ನೋಡದ ಪರಿಸ್ಥಿತಿ ನಿರ್ಮಾಣ ಮಾಡಿದ ಕೀರ್ತಿ ಇದ್ದರೆ ಅದು ಬಿಜೆಪಿಗೆ ಎಂದ ಅವರು ನಮ್ಮ ಮೇಲಿನ ಅಪಪ್ರಚಾರದಿಂದ ನಾವು ನಿರಂತರವಾಗಿ ಸೋತೆವು. ಆದರೆ ಈಗ ಪ್ರಬುದ್ಧರಾಗದ್ದೇವೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಉಷಾ ಅಂಚನ್, ಶಿಕ್ಷಕ ಮತ್ತು ಪದವೀಧರ ಕ್ಷೇತ್ರದ ಜಿಲ್ಲಾಧ್ಯಕ್ಷ ಉಲ್ಲಾಸ್ ಕೋಟ್ಯಾನ್, ಅಲ್ಪಸಂಖ್ಯಾತ ಘಟಕದ ರಾಜ್ಯ ಕಾರ್ಯದರ್ಶಿ ನಝೀರ್ ಮಠ, ಕೆಪಿಸಿಸಿ ಪದಾಧಿಕಾರಿ ನಿರ್ಮಲ್ ಕುಮಾರ್ ಜೈನ್ ಉಪಸ್ಥಿತರಿದ್ದರು.

ಬಿಜೆಪಿಯಿಂದಲೇ ಮುಕ್ತವಾದ ಬಿಜೆಪಿ
ಕಾಂಗ್ರೆಸ್ ಎಲ್ಲರ ಅಭಿವೃದ್ಧಿ ಕಾಣುವ ಪಕ್ಷವಾಗಿದೆ. ಆದರೆ ಬಿಜೆಪಿ ಯಾವಾಗಲು ತನ್ನ ಹೇಳಿಕೆಯಲ್ಲಿ ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಎಂದು ಹೇಳುತ್ತದೆ. ಇದನ್ನು ನಾವು ಹೇಳುವುದಿಲ್ಲ ಯಾಕೆಂದರೆ ಒಂದು ಆಡಳಿತ ಪಕ್ಷದಲ್ಲಿ ವಿರೋಧ ಪಕ್ಷ ಇರಲೇ ಬೇಕು. ಒಂದು ಪಕ್ಷ ಮುಕ್ತವಾದರೆ ವಿರೋಧ ಪಕ್ಷ ಯಾರು ಆಗುತ್ತಾರೆ ಎಂಬ ಪ್ರಶ್ನೆ ಮೂಡುತ್ತದೆ. ಹಾಗಾಗಿ ಬಿಜೆಪಿಯವರ ಪಕ್ಷ ಮುಕ್ತಕ್ಕೆ ನಾವು ಒಪ್ಪುವುದಿಲ್ಲ. ಆದರೆ ಬಿಜೆಪಿಯನ್ನು ಬಿಜೇಪಿಗರೇ ಮುಕ್ತ ಮಾಡಿದ್ದಾರೆ. ಕಡಬ ಪಟ್ಟಣ ಪಂಚಾಯತ್‌ನ 1ನೇ ವಾರ್ಡ್‌ನಲ್ಲಿ ಕಾಂಗ್ರೆಸ್, ಬಿಜೆಪಿ, ಎಸ್‌ಡಿಪಿ, ಪಕ್ಷೇತರದಿಂದ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ನಿಂತಿದ್ದರು. ಇಲ್ಲಿ ಕಾಂಗ್ರೆಸ್‌ಗೆ ಗೆಲುವಾಗಿದೆ. ಆದರೆ ಬಿಜೆಪಿಗೆ ಒಂದೆ ಒಂದು ಮತ ಬಿದ್ದಿಲ್ಲ. ಸೊನ್ನೆ ಮತ ಬಿದಿದ್ದೆ. ಎಸ್‌ಡಿಪಿಐಗೆ 74, ಪಕ್ಷೇತರ 139, 6 ನೋಟ ಬಂದಿತ್ತು.ಇಲ್ಲಿ ಬಿಜೆಪಿಯಿಂದ ನಿಂತ ಅಭ್ಯರ್ಥಿ ಆ ಕ್ಷೇತ್ರದ ಅಭ್ಯರ್ಥಿಯಲ್ಲ. ಹೊರಗಿನ ಕ್ಷೇತ್ರದವರು. ಆದರೆ ಅದೇ ಕ್ಷೇತ್ರದ ಬೂತ್ ಅಧ್ಯಕ್ಷ, ಸೂಚಕರು ಇದ್ದಾರೆ. ಅವರಿಬ್ಬರು ಕೂಡಾ ಬಿಜೆಪಿಯ ಅಭ್ಯರ್ಥಿಗೆ ಮತ ಚಲಾಯಿಸುವುದಿಲ್ಲ ಎಂದಾದರೆ ಅವರ ಮೂಲಕವೇ ಬಿಜೆಪಿ ಅಲ್ಲಿ ಮುಕ್ತವಾಗುತ್ತಿದೆ ಎಂದು ನೂರುದ್ದೀನ್ ಸಾಲ್ಮರ ಹೇಳಿದರು.

LEAVE A REPLY

Please enter your comment!
Please enter your name here