ಪುತ್ತೂರು: ಕುರಿಯ ಗ್ರಾಮದ ಸಂಪ್ಯದ ಮೂಲೆ ಪರಿಸರದಲ್ಲಿ ಕಂಡು ಬಂದ ದೋಷಗಳಿಗೆ ಸಂಬಂಧಿಸಿದಂತೆ ಜ.15 ದೈವಜ್ಞ ಮಲ್ಲ ಲಕ್ಷ್ಮೀ ನಾರಾಯಣ ಬಲ್ಯಾಯ ನೇತೃತ್ವದಲ್ಲಿ ಅಷ್ಟಮಂಗಲ ಪ್ರಶ್ನಾ ಚಿಂತನೆ ನಡೆಸಲಾಯಿತು.
ಸದರಿ ಸ್ಥಳಸಲ್ಲಿ ಪುರಾತನ ಕಾಲದಲ್ಲಿ ರಕ್ತೇಶ್ವರಿ, ಚಾಮಿಂಡಿ ಹಾಗೂ ಗುಳಿಗ ಸಾನಿಧ್ಯಗಳಿರುವುದಾಗಿ ಕಂಡು ಬಂದಿದ್ದು ಇದಕ್ಕೆ ಈ ಎಲ್ಲಾ ದೈವಗಳಿಗೆ ಸಾನಿಧ್ಯ ನಿರ್ಮಿಸುವುದು ಹಾಗು ಸದರಿ ಜಾಗವು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯಾಪ್ತಿಗೆ ಒಳಪಟ್ಟಿದ್ದು ಅವರಿಂದ ಅನುಮತಿ ಪಡೆದುಕೊಳ್ಳುವಂತೆ ದೈವಜ್ಞರು ಮಾರ್ಗದರ್ಶನ ನೀಡಿರುತ್ತಾರೆ.
ಜ.28, 29 ಪರಿಹಾರ ಕಾರ್ಯ:
ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ದೈವ ಸಾನಿಧ್ಯ ನಿರ್ಮಾಣಕ್ಕೆ ಪೂರ್ವಭಾವಿಯಾಗಿ ಪರಿಹಾರ ಕಾರ್ಯಗಳು ಜ.28 ಹಾಗೂ 29 ರಂದು ನಡೆಯಲಿದೆ. ಕುಕ್ಕಾಡಿ ಪ್ರೀತಂ ಪುತ್ತೂರಾಯರವರ ನೇತೃತ್ವದಲ್ಲಿ ನಡೆಯುವ ಪರಿಹಾರ ಕಾರ್ಯದಲ್ಲಿ ಆಶ್ಲೇಷ ಬಲಿ, ಗಣಹೋಮ, ಸುದರ್ಶನ ಹೋಮ, ಚಂಡಿಕಾ ಹೋಮ ನಡೆಸುವುದಾಗಿ ತೀರ್ಮಾನಿಸಲಾಗಿದೆ.
ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಸದಸ್ಯ ರವೀಂದ್ರನಾಥ ರೈ ಬಳ್ಳಮಜಲು, ಜಯರಾಮ ರೈ ನುಳಿಯಾಲು, ಬೂಡಿಯಾರು ರಾಧಾಕೃಷ್ಣ ರೈ, ಬೂಡಿಯಾರ್ ಪುರುಷೋತ್ತಮ ರೈ, ಶಿವರಾಮ ಆಳ್ವ, ಅಣ್ಣು ಪೂಜಾರಿ ಸಂಪ್ಯ, ನೇಮಾಕ್ಷ ಸುವರ್ಣ, ರೇಖನಾಥ ರೈ, ರಮೇಶ್ ಬಿ.ಕೆ., ನಾರಾಯಣ ಭಟ್, ಜಗನ್ನಾಥ ರೈ, ಹೊನ್ನಪ್ಪ ನಾಯ್ಕ, ಸುರೇಶ್ ಪೂಜಾರಿ, ರವಿಚಂದ್ರ, ಅಶೋಕ, ಹರೀಶ್ ಬಲ್ಯಾಯ ಮುರಳಿ, ಉದಯ ಕುಮಾರ್, ಸಂಜೀವ, ವಿಶ್ವನಾಥ ಮೊಟ್ಟೆತ್ತಡ್ಕ, ಕಿಶೋರ್, ದೇವಪ್ಪ ಸಂಪ್ಯ, ಆನಂದ ಪೂಜಾರಿ, ದೀಕ್ಷಿತ್ ಗೌಡ, ಸನತ್ ರೈ ಕುರಿಯ, ವಿನೋದ್ ರೈ ಕುರಿಯ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.