ಉಪ್ಪಿನಂಗಡಿ: ಅಯೋಧ್ಯೆಯಲ್ಲಿನ ಶ್ರೀ ರಾಮ ಮಂದಿರದಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ಅಂಗವಾಗಿ ದೇಶಾದ್ಯಂತ ದೇವಾಲಯಗಳ ಸ್ವಚ್ಚತಾ ಕಾರ್ಯ ನೆರವೇರಿಸಬೇಕೆಂಬ ಪ್ರಧಾನಿ ನರೇಂದ್ರ ಮೋದಿ ಕರೆಯಂತೆ ವಿಶ್ವಹಿಂದೂ ಪರಿಷತ್ ಬಜರಂಗ ದಳ ಉಪ್ಪಿನಂಗಡಿ ಘಟಕದ ಆಶ್ರಯದಲ್ಲಿ ಆದಿತ್ಯವಾರದಂದು ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ಸ್ವಚ್ಚತಾ ಕಾರ್ಯ ನಡೆಯಿತು.
ಘಟಕದ ಮುಂದಾಳು ಸುದರ್ಶನ್, ಮಹೇಶ್ ಬಜತ್ತೂರು, ಬಿಜೆಪಿ ಮುಂದಾಳುಗಳಾದ ಮಾಜಿ ಶಾಸಕ ಸಂಜೀವ ಮಠಂದೂರು, ಸುರೇಶ್ ಅತ್ರಮಜಲು, ಧನಂಜಯ ನಟ್ಟಿಬೈಲು, ಸುಜಾತ ಕೃಷ್ಣ ಆಚಾರ್ಯ, ಉಷಾ ಮುಳಿಯ, ಆನಂದ ಕುಂಟಿನಿ, ಆದೇಶ್ ಶೆಟ್ಟಿ, ಕಾರ್ತಿಕ್, ಪ್ರಸಾದ್ ಭಂಡಾರಿ, ಪ್ರಮುಖರಾದ ಮಹಾಲಿಂಗ , ಭಾರತಿ, ಕಿಶೋರ್ ನೀರಕಟ್ಟೆ, ಸುಧಾಕರ ಶೆಟ್ಟಿ, ರಾಜೇಶ್ , ರವಿ, ವನಿತಾ, ಮೇದಪ್ಪ , ಹರೀಶ್ , ಗಂಗಾಧರ ಟೈಲರ್, ಶ್ರೀನಿವಾಸ್, ಉಷಾ ನಾಯ್ಕ್ ಮತ್ತಿತರರು ಭಾಗವಹಿಸಿದ್ದರು.
34ನೇ ನೆಕ್ಕಿಲಾಡಿಯ ಶ್ರೀ ರಾಘವೇಂದ್ರ ಮಠವೂ ಸೇರಿದಂತೆ ಪರಿಸರದ ಹಲವಾರು ದೇವಾಲಯಗಳಲ್ಲಿ ಸ್ವಚ್ಚತಾ ಕಾರ್ಯಗಳು ನಡೆಯಿತು