ಪುತ್ತೂರು: ಪರ್ಪುಂಜದಲ್ಲಿ ವರ್ಷಂಪ್ರತಿ ಅಲ್ ಹಾಜ್ ಅಬೂನಜ ಉಸ್ತಾದರ ನೇತೃತ್ವದಲ್ಲಿ ನಡೆಸಿಕೊಂಡು ಬರುತ್ತಿರುವ ಏರ್ವಾಡಿ ಮಜ್ಲಿಸ್ ಸಮಾರಂಭದ ಹದಿನಾರನೆಯ ವಾರ್ಷಿಕೋತ್ಸವವು ಪರ್ಪುಂಜ ಅಬೂನಜ ಗೇಟ್ ವಠಾರದಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖಲೀಲ್ ಸ್ವಲಾಹ್ ವಿದ್ಯಾಸಂಸ್ಥೆಯ ಚೇರ್ಮನ್ ಸಯ್ಯದ್ ಇಂಬಿಚ್ಚಿ ತಂಙಳ್ ಆದೂರು ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಮೈದಾನಿಮೂಲೆ ಮುಹ್ಯದ್ದೀನ್ ಜುಮಾ ಮಸೀದಿ ಖತೀಬ್ ಅಬೂಶಝ ಅಬ್ದುಲ್ ರಝಾಖ್ ಅಲ್ ಖಾಸಿಮಿ ಕೂರ್ನಡ್ಕ ಏರ್ವಾಡಿ ಸುಲ್ತಾನುಶ್ಶಹೀದ್ ಇಬ್ರಾಹಿಂ ಬಾದ್ ಷಾ(ರ) ರವರ ಚರಿತ್ರೆಯನ್ನು ಸಂಕ್ಷಿಪ್ತವಾಗಿ ವಿವರಿಸಿದರು. ಸಯ್ಯದ್ ಕುಂಞಿಕೋಯ ತಂಙಳ್ ಸುಳ್ಯ, ಬೈತಡ್ಕ ಜುಮಾ ಮಸೀದಿ ಸದರ್ ಮುಅಲ್ಲಿಂ ಇರ್ಫಾನ್ ಹಿಮಮಿ ಕೊರಿಂಗಿಲ, ಸಾಮಾಜಿಕ ಕಾರ್ಯಕರ್ತರಾದ ಖಾದರ್ ಕರ್ನೂರು, ಹನೀಫ್ ಪಿ.ಎಸ್. ಆದೂರು ಇನ್ನಿತರರು ಮಾತನಾಡಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಖ್ಯಾತ ಭಾಷಣಕಾರ ರಫೀಖ್ ಸಖಾಫಿ ದೇಲಂಪಾಡಿ ಮುಖ್ಯ ಪ್ರಭಾಷಣವನ್ನು ಮಾಡಿದರು. ಅಲ್ ಹಾಜ್ ಅಬೂನಜ ಉಸ್ತಾದ್ ಪರ್ಪುಂಜ ಬೃಹತ್ ಏರ್ವಾಡಿ ಮಜ್ಲಿಸ್ ಗೆ ನೇತೃತ್ವ ನೀಡಿ, ದುಃಆ ಮಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮೈದಾನಿಮೂಲೆ ಮುಹ್ಯದ್ದೀನ್ ಜುಮಾ ಮಸೀದಿ ಅಧ್ಯಕ್ಷರು ಯೂಸುಫ್ ಹಾಜಿ ಕೈಕಾರ, ಅಬ್ದುಲ್ ಖಾದರ್ ಫೈಝಿ, ಉಮರುಲ್ ಫಾರೂಖ್ ಮದನಿ ಮದಕ, ಅಬ್ದುರ್ರಹ್ಮಾನ್ ಮಳ್ಹರಿ, ಸೂಫಿ ಮದನಿ ಪಲ್ಲಂಗೋಡ್, ಬೋಳಿಯಾರ್ ಜುಮಾ ಮಸೀದಿ ಅಧ್ಯಕ್ಷರು ಶರೀಫ್ ಬೋಳಿಯಾರ್, ಮೈದಾನಿಮೂಲೆ ಜುಮಾ ಮಸೀದಿ ಮಾಜಿ ಅಧ್ಯಕ್ಷರು ಮುಹಮ್ಮದ್ ಕೆ.ಪಿ., ಒಳಮೊಗ್ರು ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಅಶ್ರಫ್ ಉಜ್ರೋಡಿ, ಹಿರಿಯ ಮಾನವ ಸಂಪನ್ಮೂಲ ಅಧಿಕಾರಿ ಬಶೀರ್ ಹರ್ಲಡ್ಕ, ಮುಹ್ಯದ್ದೀನ್ ಜುಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಯೂಸುಫ್ ಮೈದಾನಿಮೂಲೆ, ಅಶ್ರೀದ್ ಪರ್ಪುಂಜ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಬೂನಜ ಸೋಷಿಯಲ್ ಫೋರಂ ಆಯೋಜಿಸಿದ ಖುರ್ ಆನ್ ಖಿರಾಅತ್ ಸ್ಪರ್ಧೆಯಲ್ಲಿ ವಿಜೇತ ವಿಧ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು ಮತ್ತು ಏರ್ವಾಡಿ ಮಜ್ಲಿಸ್ ನ ಎಲ್ಲಾ ವಿಷಯದಲ್ಲಿ ಸದಾ ಸಹಕರಿಸುತ್ತಿರುವವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮವನ್ನು ಸಲಾಮ್ ಮದನಿ ಅಳಿಕೆ ನಿರೂಪಿಸಿ, ಶಮೀರ್ ಸಖಾಫಿ ಅಡ್ಕಸ್ಥಳ ವಂದಿಸಿದರು. ಕೊನೆಯಲ್ಲಿ ಅನ್ನದಾನ ನಡೆಯಿತು.