ನರೇಂದ್ರ ಪ.ಪೂ. ಕಾಲೇಜಿನಲ್ಲಿ ಅಯೋಧ್ಯೆ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಸಂಭ್ರಮಾಚರಣೆ

0

ಪುತ್ತೂರು: ರಾಮನ ಆದರ್ಶಗಳು ಮತ್ತು ಮೌಲ್ಯಗಳು ಜಗತ್ತಿಗೆ ಸ್ಪೂರ್ತಿಯ, ದೀರ್ಘಕಾಲಿಕ ಮೂಲವಾಗಿ ಉಳಿಯುತ್ತದೆ. ಇಡೀ ಮನುಷ್ಯ ಕುಲಕ್ಕೆ ಆದರ್ಶ ಪುರುಷನಾದ ಶ್ರೀರಾಮಚಂದ್ರನ ಜೀವನ ಮಾರ್ಗ, ನಡೆದ ಹಾದಿ, ಆತನ ಗುಣ ಇಂದಿಗೂ ಆದರ್ಶನೀಯ. ಭಗವಂತನಾದರೂ ಸ್ವತಃ ಮನುಷ್ಯನಾಗಿ ಹುಟ್ಟಿ ಪ್ರತಿಯೊಬ್ಬರಿಗೂ ಜೀವನದ ಅತ್ಯುನ್ನತ ಮಾರ್ಗವನ್ನು ತೋರಿಸಿದ ಮಹಾಪುರುಷ ಶ್ರೀರಾಮ ಎಂದು ನರೇಂದ್ರ ಪ.ಪೂ.ಕಾಲೇಜಿನ ಪ್ರಾಂಶುಪಾಲ ಪ್ರಸಾದ್ ಶ್ಯಾನಭಾಗ್ ಹೇಳಿದರು.


ನರೇಂದ್ರ ಪ.ಪೂ. ಕಾಲೇಜಿನಲ್ಲಿ ನಡೆದ ಅಯೋಧ್ಯೆ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಸಂಭ್ರಮಾಚರಣೆ ಕಾರ್‍ಯಕ್ರಮದಲ್ಲಿ ಅವರು ಮಾತನಾಡಿದರು. ಅಯೋಧ್ಯೆಯ ಭವ್ಯವಾದ ಮತ್ತು ದೈವಿಕ ದೇವಾಲಯದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯು ಸುದೀರ್ಘ ಹೋರಾಟ, ತ್ಯಾಗ, ಬಲಿದಾನಗಳ ಬಳಿಕ ಶತಮಾನಗಳ ಕನಸು ನನಸಾಗುವ ಶತಕೋಟಿ ಭಾರತೀಯರ ಅವಿಸ್ಮರಣೀಯ ಕ್ಷಣ. ಎಂದು ಹೇಳಿದರು. ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಸಂಭ್ರಮವನ್ನು ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಸೇರಿ ನೇರಪ್ರಸಾರವನ್ನು ವೀಕ್ಷಿಸುವ ಮೂಲಕ ಕಣ್ತುಂಬಿಕೊಂಡರು. ರಾಮ ತಾರಕ ಮಂತ್ರವನ್ನು ಪಠಿಸುವುದರ ಮೂಲಕ, ರಾಮನ ಹಾಡಿನ ಮೂಲಕ ರಾಮನ ಸ್ಮರಣೆಯನ್ನು ಮಾಡಿದರು.

LEAVE A REPLY

Please enter your comment!
Please enter your name here