ನೆಲ್ಯಾಡಿ: ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಭವ್ಯ ಶ್ರೀರಾಮ ಮಂದಿರದಲ್ಲಿ ಶ್ರೀರಾಮ ದೇವರ ಪ್ರಾಣಪ್ರತಿಷ್ಠೆ ಹಿನ್ನೆಲೆಯಲ್ಲಿ ಶ್ರೀ ಸಿದ್ಧಿವಿನಾಯಕ ಸೇವಾ ಸಮಿತಿ ವಿನಾಯಕಬೆಟ್ಟ ಗೋಳಿತ್ತೊಟ್ಟು ಇವರ ವತಿಯಿಂದ ಭಜನೆ, ಕರಸೇವಕರಿಗೆ ಗೌರವಾರ್ಪಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಅಯೋಧ್ಯೆಯಲ್ಲಿ ನಡೆದ ಶ್ರೀರಾಮ ದೇವರ ಪ್ರಾಣಪ್ರತಿಷ್ಠೆ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಬೆಳಿಗ್ಗೆ ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಅಯೋಧ್ಯೆ ಕರಸೇವೆಯಲ್ಲಿ ಭಾಗವಹಿಸಿದ್ದ ವೆಂಕಟರಮಣ ಕೆ.ಪಿ.ಸುಲ್ತಾಜೆ, ಸುಂದರ ಗೌಡ ಪುರ ಇವರ ಪತ್ನಿ ಮೀನಾಕ್ಷಿ ಇವರಿಗೆ ಶಾಲು ಹಾಕಿ ಗೌರವಾರ್ಪಣೆ ಮಾಡಲಾಯಿತು.
ಅಯೋಧ್ಯೆಯಲ್ಲಿ ನಡೆದ ಶ್ರೀರಾಮ ದೇವರ ಪ್ರಾಣಪ್ರತಿಷ್ಠೆ ಕಾರ್ಯಕ್ರಮದ ನೇರ ಪ್ರಸಾರದ ವೀಕ್ಷಣೆಗೆ ಎಲ್‌ಇಡಿ ಸ್ಕ್ರೀನ್ ಮೂಲಕ ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗಿದ್ದು ನೂರಾರು ಮಂದಿ ಪ್ರಾಣಪ್ರತಿಷ್ಠೆಯ ಸುಂದರ ದೃಶ್ಯವನ್ನು ಕಣ್ತುಂಬಿಸಿಕೊಂಡರು. ವೆಂಕಪ್ಪ ಗೌಡ ಡೆಬ್ಬೇಲಿ, ಜನಾರ್ದನ ಗೌಡ ಪಠೇರಿ, ಬಾಬು ಪೂಜಾರಿ ಕಿನ್ಯಡ್ಕ, ಕಮಲಾಕ್ಷ ಪಂಡಿತ್ ಗೋಳಿತ್ತೊಟ್ಟು, ಕುಶಾಲಪ್ಪ ಗೌಡ ಅನಿಲ, ಬಾಲಕೃಷ್ಣ ಅಲೆಕ್ಕಿ, ಸುಭಾಷ್ ಪುರ, ಹರೀಶ್ ಪಾತೃಮಾಡಿ, ಕೀರ್ತನ್ ಸಣ್ಣಂಪಾಡಿ, ಶಿವರಾಮ ಅಲೆಕ್ಕಿ, ಸವಿತಾ ಪುಳಾರ, ಶೇಖರ ಗೌಡ ಬೊಟ್ಟಿಮಜಲು, ಪ್ರಕಾಶ್ ಪಠೇರಿ ಸೇರಿದಂತೆ ನೂರಾರು ಮಂದಿ ಉಪಸ್ಥಿತರಿದ್ದರು.