ರಾಮಕುಂಜ: ಶ್ರೀ ರಾಮಕುಂಜೇಶ್ವರ ವೃತ್ತಿಪರ ಶಿಕ್ಷಣ ಅಭಿವೃದ್ಧಿ ಕೇಂದ್ರ ಇದರ ಆಶ್ರಯದಲ್ಲಿರುವ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆ, ಶ್ರೀ ರಾಮಕುಂಜೇಶ್ವರ ವಿದ್ಯಾಲಯ (ಸಿಬಿಎಸ್ಇ) ಹಾಗೂ ಶ್ರೀ ರಾಮಕುಂಜೇಶ್ವರ ವಸತಿ ನಿಲಯದ ವಾರ್ಷಿಕೋತ್ಸವ ನ.29ರಂದು ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲಾ ಸಭಾಂಗಣದಲ್ಲಿ ನಡೆಯಿತು.
ಆಶೀರ್ವಚನ ನೀಡಿದ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ಆಸಕ್ತಿ, ಗುರು ಹಿರಿಯರಲ್ಲಿ ಗೌರವ, ಶಿಸ್ತು ಬೇಕು. ವಿದ್ಯಾರ್ಥಿಗಳಿಗೆ ದೇಶವನ್ನು ಗೌರವಿಸುವಂತಹ ಶಿಕ್ಷಣ ಸಿಗಬೇಕು. ಶಿಕ್ಷಣ ದೇಶದ ವಿಧ್ವಂಸಕ ಕೃತ್ಯಕ್ಕೆ ಬಳಕೆಯಾಗಬಾರದು. ದೇಶಭಕ್ತಿ, ದೈವಭಕ್ತಿ ಮೈಗೂಡಿಸಿಕೊಂಡಲ್ಲಿ ಶಿಕ್ಷಣವೂ ಸಾರ್ಥಕವಾಗಲಿದೆ ಎಂದು ನುಡಿದರು. ಅತಿಥಿಗಳಾಗಿದ್ದ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್ ಸಿ., ಮಾತನಾಡಿ, ವಿದ್ಯಾರ್ಥಿಗಳಲ್ಲಿ ಪ್ರತಿಭೆಗಳನ್ನು ಗುರುತಿಸುವಲ್ಲಿ ಪೋಷಕರು, ಶಿಕ್ಷಕರು ವಿಫಲರಾಗುತ್ತಿರುವುದೇ ದೊಡ್ಡ ಸಮಸ್ಯೆಯಾಗಿದೆ. ಯಾವ ವಿದ್ಯಾರ್ಥಿಯೂ ದಡ್ಡನಲ್ಲ. ಅವರನ್ನು ತಿದ್ದುವ ಕೆಲಸ ಮಾಡಬೇಕು. ಶಿಸ್ತು ರೂಪಿಸಿಕೊಂಡಲ್ಲಿ ಶಿಕ್ಷಣ ಪರಿಪೂರ್ಣವಾಗಲಿದೆ ಎಂದರು.
ಹಿರಿಯ ವಿದ್ಯಾರ್ಥಿಗಳಿಗೆ ಸನ್ಮಾನ;
ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಾಗಿದ್ದು ಇನ್ ಗ್ರೇಟರ್ ಬೆಂಗಳೂರು ಆಥೋರಿಟಿ ಅಸಿಸ್ಟೆಂಟ್ ಇಂಜಿನಿಯರ್ ಮನದೀಪ್ ಎಂ.ಆರ್., ನಾಗರಹೊಳೆ ಡೆಪ್ಯುಟಿ ರೇಂಜ್ ಫಾರೆಸ್ಟ್ ಆಫೀಸರ್ ಚಂದನ್ ಜೆ.ಎಸ್., ಪ್ರಾಜೆಕ್ಟ್ ಇಂಜಿನಿಯರ್ ಬಿ.ನರೇಂದ್ರ ಗೌಡ, ಸಾಫ್ಟ್ವೇರ್ ಇಂಜಿನಿಯರ್ ಪ್ರಶಾಂತ್ ಕೆ.ಸಿ., ಲೋಕೇಶ್ ಜೆ.ಎಸ್., ಅಭಿಷೇಕ್, ಸುಪ್ರೀತ್, ರಕ್ಷಿತ್ ಹಳೆಬೀಡು ಹಾಗೂ ರಾಜ್ಯಪ್ರಶಸ್ತಿ ಪುರಸ್ಕೃತ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯಶಿಕ್ಷಕ ಸತೀಶ್ ಭಟ್ ಅವರನ್ನು ಸಂಸ್ಥೆಯ ಪರವಾಗಿ ಸ್ವಾಮೀಜಿ ಸನ್ಮಾನಿಸಿ ಗೌರವಿಸಿದರು. ಸನ್ಮಾನಿತರು ಸಂದರ್ಭೋಚಿತವಾಗಿ ಮಾತನಾಡಿದರು.
ಸಾಧಕ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ:
ಕ್ರೀಡೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ರಕ್ಷಾ ಡಿ., ಕಿರಣ್, ಮೋಕ್ಷಿತ್ ಆರ್.ಗೌಡ, ನಮೃತಾ, ರುತ್ವಿ ಎ.ಜೆ., ಜೀವನ್ ಕೋಡಿಬೈಲು, ಅಭಿಜ್ಞಾ, ರೋಹನ್ ಎಸ್.ಗೌಡ, ಶಾರ್ವರಿ ರೈ, ಭುವನ, ತೇಜಸ್ವಿ, ಆಕಾಶ್, ಶಶಾಂಕ್, ಪೂರ್ವಿಕ್, ಧನುಷ್ ಗೌಡ ಅವರನ್ನು ಸ್ವಾಮೀಜಿ ಸನ್ಮಾನಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ಪ್ರೇಮಾ ವಿದ್ಯಾರ್ಥಿಗಳ ಹೆಸರು ವಾಚಿಸಿದರು.
ಶಿಕ್ಷಕರಿಗೆ ಗೌರವಾರ್ಪಣೆ;
ಸಂಸ್ಥೆಯ ಹಿರಿಯ ಶಿಕ್ಷಕ ಗೋಪಾಲ, ಶಿಕ್ಷಕಿ ಸುನಂದಾ, ಚಾಲಕ ಶೀನಪ್ಪ ಗೌಡ, ಸಹಾಯಕಿ ಕವಿತಾ, ಅಡುಗೆ ಸಿಬ್ಬಂದಿ ಬೇಬಿ, ಕೀಬೋರ್ಡ್ ಶಿಕ್ಷಕ, ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಶ್ವನಾಥ ಶೆಟ್ಟಿ ನೆಲ್ಯಾಡಿ ಅವರನ್ನು ಸನ್ಮಾನಿಸಲಾಯಿತು.
ರಾಮಕುಂಜ ಕ್ಲಸ್ಟರ್ ಸಿಆರ್ಪಿ ಮಹೇಶ್, ಶ್ರೀರಾಮಕುಂಜೇಶ್ವರ ವಿದ್ಯಾಲಯ(ಸಿಬಿಎಸ್ಇ) ಸಂಚಾಲಕ ಶಿವಪ್ರಸಾದ್ ಇಜ್ಜಾವು, ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಸದಸ್ಯರಾದ ಮಾಧವ ಆಚಾರ್ಯ ಇಜ್ಜಾವು, ಬಾಲಚಂದ್ರ ಮುಚ್ಚಿಂತಾಯ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದನ ಗಿರೀಶ್ ಎ.ಪಿ., ನೀರಜ್ಕುಮಾರ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕಿ ಗಾಯತ್ರಿ ಯು.ಎನ್. ಸ್ವಾಗತಿಸಿ, ಶ್ರೀ ರಾಮಕುಂಜೇಶ್ವರ ವಿದ್ಯಾಲಯ(ಸಿಬಿಎಸ್ಇ) ಪ್ರಾಂಶುಪಾಲ ಪ್ರವೀದ್ ವಂದಿಸಿದರು. ಶಿಕ್ಷಕರಾದ ರಾಧಾಕೃಷ್ಣ, ಸೌಮ್ಯ ನಿರೂಪಿಸಿದರು.
