ವಿಟ್ಲ: ಬಂಟ್ವಾಳದ ವಗ್ಗದಲ್ಲಿ ತಾಯಿ ಮಗಳಿಗೆ ಚಾಕು ತೋರಿಸಿ ಲಕ್ಷಾಂತರ ರೂ ಮೌಲ್ಯದ ನಗನಗದು ದರೋಡೆ ನಡೆಸಿದ ಪ್ರಕರಣಕ್ಕೆ ಸಂಬಂಽಸಿದಂತೆ ಬಂಟ್ವಾಳ ಗ್ರಾಮಾಂತರ ಠಾಣಾ ಪೋಲೀಸರ ವಿಶೇಷ ತನಿಖಾ ತಂಡ ಬೆಳಂದೂರು ನಿವಾಸಿಗಳಿಬ್ಬರ ಸಹಿತ ಒಟ್ಟು ಏಳು ಮಂದಿ ಆರೋಪಿಗಳನ್ನು ಬಂಽಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಕಾರ್ಕಳ ತಾಲೂಕಿನ ಮಾಳ ಗ್ರಾಮದ ಸುರೇಶ್ ನಾಯ್ಕ್ ರವರ ಪುತ್ರರಾದ ಗಣೇಶ ನಾಯ್ಕ (26 ವ.), ದಿನೇಶ್ ನಾಯ್ಕ (22 ವ.) ಜಯರಾಜ್ ಶೆಟ್ಟಿಯವರ ಪುತ್ರ ಸಾಗರ ಶೆಟ್ಟಿ (21 ವ.), ಮಂಗಳೂರು ತಾಲೂಕು, ಐಕಳ ಗ್ರಾಮದ ವಿನ್ನಿ ಲ್ಯಾನ್ಸಿ ಪಿಂಟೋರವರ ಪುತ್ತ ರಾಕೇಶ್ ಎಲ್. ಪಿಂಟೋ (29 ವ.), ಕಡಬ ತಾಲೂಕು, ಬೆಳಂದೂರು ಗ್ರಾಮದ ವಾಸು ಸಾಲ್ಯಾನ್‌ರವರ ಪುತ್ರ ಎಂ.ಸೀತಾರಾಮ ಯಾನೆ ಪ್ರವೀಣ್ (36 ವ.), ಅಣ್ಣಿ ಪೂಜಾರಿರವರ ಪುತ್ರ ಸುಽರ್ (29 ವ.) ಹಾಗೂ ದರೋಡೆಗೈದ ಚಿನ್ನಾಭರಣವನ್ನು ಪಡೆದುಕೊಂಡ ಮೂಲತ: ಬಂಟ್ವಾಳ ತಾಲೂಕಿನ, ಇರಾ ಗ್ರಾಮದವನಾದ ಪ್ರಸ್ತುತ ಚಿಕ್ಕಮಗಳೂರು ಗೌರಿ ಕಾಲುವೆ ನಿವಾಸಿ ಬಡುವನ್ ಕುಂಞರವರ ಪುತ್ರ ಮಹಮ್ಮದ್ ಹನೀ- (49 ವ.) ಬಂಧಿತ ಆರೋಪಿಗಳು. ಬಂಽತರಿಂದ ದರೋಡೆಗೈದ 3.15 ಲಕ್ಷ ಮೌಲ್ಯದ 54 ಗ್ರಾಂ ಚಿನ್ನಾಭರಣ ಹಾಗೂ 10 ಲಕ್ಷ ರೂಪಾಯಿ ಮೌಲ್ಯದ ಇನ್ನೋವಾ ಮತ್ತು ಇಂಡಿಕಾ ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಜ.11 ರಂದು ನಡೆದಿತ್ತು: ಜ.11 ಬಂಟ್ವಾಳ ತಾಲೂಕಿನ ವಗ್ಗ ಸಮೀಪದ ಅಂಚಿಕಟ್ಟೆ ಮೇನಾಡು ನಿವಾಸಿ ಮರೀಟಾ ಸಿಂಥಿಯಾ ಪಿಂಟೋ ಎಂಬವರ ಮನೆಗೆ ಬಂದ ಮುಸುಕುಧಾರಿಗಳು ಮುಂಜಾನೆ 6.15ರ ಸುಮಾರಿಗೆ ಮನೆಯ ಕಾಲಿಂಗ್ ಬೆಲ್ ಹಾಕಿದ್ದಾರೆ.
ಮನೆಯಲ್ಲಿ ತಾಯಿ ಪ್ಲೋರಿನಾ ಪಿಂಟೊ ಹಾಗೂ ಮಗಳು ಮರಿಟಾ ಪಿಂಟೋ ಮಾತ್ರ ಇದ್ದು, ಬಾಗಿಲು ತೆರೆದ ಕೂಡಲೇ ಮುಸುಕುಧಾರಿಗಳು ಮನೆಯೊಳಗೆ ನುಗ್ಗಿ, ಚೂರಿ ತೋರಿಸಿ ಕಪಾಟಿನ ಕೀ ನೀಡುವಂತೆ ಹೆದರಿಸಿದ್ದಾರೆ, ನೀಡದಿದ್ದರೆ ಕೊಲ್ಲುವ ಬೆದರಿಕೆ ಹಾಕಿದ್ದರು. ಬೆದರಿಕೆಗೆ ಒಳಗಾದ ಮರಿಟಾ ಪಿಂಟೋ ಕೀ ನೀಡಿದ್ದಾರೆ. ಕೀ ಪಡೆದುಕೊಂಡ ಮುಸುಕುದಾರಿಗಳು ಕಪಾಟಿನಲ್ಲಿರಿಸಲಾಗಿದ್ದ ಚಿನ್ನ ಹಾಗೂ ನಗದು ಹಣವನ್ನು ದೋಚಿ ಪರಾರಿಯಾಗಿದ್ದರು.
ದರೋಡೆ ಸಂದರ್ಭದಲ್ಲಿ ಮರಿಟಾ ಪಿಂಟೊ ಹಾಗೂ ಮುಸುಕುಧಾರಿಗಳ ನಡುವಿನ ತಳ್ಳಾಟದಲ್ಲಿ ಅವರ ಕೈಗೆ ಗಾಯವಾಗಿತ್ತು. ಘಟನೆ ನಡೆದ ಬಗ್ಗೆ ಮಾಹಿತಿ ಅರಿತ ಜಿಲ್ಲಾ ಎಸ್.ಪಿ.ರಿಷ್ಯಂತ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಸುಧೀರ್ ದೇವಳದ ನೌಕರ – ಪ್ರವೀಣ್ ಪೊಕ್ಸೋ ಆರೋಪಿ:
ಬಂಧಿತ ಆರೋಪಿ ಸುಧೀರ್ ನರಿಮೊಗ್ರು ಮೃತ್ಯುಂಜಯೇಶ್ವರ ದೇವಸ್ಥಾನದ ನೌಕರ ಎಂದು ತಿಳಿದು ಬಂದಿದೆ. ಈ ಹಿಂದೆ ಬೆಂಗಳೂರಿನಲ್ಲಿ ನಡೆದಿದ್ದ ಪ್ರಕರಣವೊಂದರಲ್ಲಿಯೂ ಈತ ಆರೋಪಿಯಾಗಿದ್ದ. ಆರೋಪಿ ಸೀತಾರಾಮ ಯಾನೆ ಪ್ರವೀಣ್ ಇತ್ತೀಚೆಗೆ ಪುತ್ತೂರಿನಲ್ಲಿ ನಡೆದಿದ್ದ ಪೊಕ್ಸೋ ಪ್ರಕರಣವೊಂದರ ಆರೋಪಿಯಾಗಿ ಬಂಧಿತನಾಗಿ ಜೈಲು ಸೇರಿದ್ದ. ಅಲ್ಲಿ ಈತನಿಗೆ ಇತರ ಆರೋಪಿಗಳ ಪರಿಚಯವಾಗಿ ಈ ಕೃತ್ಯದಲ್ಲಿ ಪಾಲ್ಗೊಂಡಿದ್ದ ವಿಚಾರ ತನಿಖೆಯಿಂದ ತಿಳಿದು ಬಂದಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.